ETV Bharat / state

ನೈತಿಕತೆ ಇದ್ರೇ ಡಾ. ಸುಧಾಕರ್‌ ಪುಟಗೋಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ.. ಮಾಜಿ ಸಚಿವ ಶಿವಶಂಕರ್ ರೆಡ್ಡಿ

author img

By

Published : Aug 5, 2019, 4:50 PM IST

ಶಾಸಕರ ರಾಜೀನಾಮೆ

ನೈತಿಕತೆ ಇದ್ದರೆ ತಮ್ಮ ಶಾಸಕರು ರಾಜೀನಾಮೆ ನೀಡಲಿ ಎಂದು ಮಾಜಿ ಸ್ಪೀಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿಗೆ ನೇರ ಆರೋಪ ಮಾಡಿ ಸಾಕಷ್ಟು ಸದ್ದು ಮಾಡಿದ್ದರು. ಸದ್ಯ ಇಂದು ಗೌರಿಬಿದನೂರು ಶಾಸಕ ಸೇರಿದಂತೆ ಶಿಢ್ಲಘಟ್ಟ ಶಾಸಕ ವಿ ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಮಾಜಿ ಶಾಸಕರು ಒಂದು ಕಡೆ ಸೇರಿ ಅನರ್ಹ ಶಾಸಕರ ವಿರುದ್ದ ಗುಡುಗಿದ್ದಾರೆ.

ಚಿಕ್ಕಬಳ್ಳಾಪುರ: ಮೊನ್ನೆಯಷ್ಟೇ ಕಾಂಗ್ರೆಸ್‌ನ ಅನರ್ಹ ಶಾಸಕ ಡಾ. ಸುಧಾಕರ್, ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ ಹಾಗೂ ಮಾಜಿ ಸಚಿವರ ಶಿವಶಂಕರ್ ರೆಡ್ಡಿ ವಿರುದ್ದ ನೇರ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್‌ನ ಜಿಲ್ಲಾಮಟ್ಟದ ನಾಯಕರು ಒಂದೆಡೆ ಸೇರಿ ಸಭೆ ನಡೆಸಿದರು. ಅಷ್ಟೇ ಅಲ್ಲ, ಡಾ. ಸುಧಾಕರ್‌ ವಿರುದ್ಧ ಗುಡುಗಿದ್ದಾರೆ.

ಗೌರಿಬಿದನೂರು ಶಾಸಕ ಶಿವಶಂಕರ್‌ ರೆಡ್ಡಿ, ಶಿಢ್ಲಘಟ್ಟ ಎಂಎಲ್‌ಎ ವಿ. ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಮಾಜಿ ಶಾಸಕರು ಇವತ್ತು ಸಭೆ ಸೇರಿ ಅನರ್ಹ ಶಾಸಕ ಡಾ. ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್ ಎರಡು ಬಾರಿ ಗೆಲ್ಲಲು ಕಾಂಗ್ರೆಸ್‌ನ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿದ್ದು, ಈಗ ಕೇವಲ ಸಚಿವ ಸ್ಥಾನ ಹಾಗೂ ಹಣದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ. ಇದು ಪಕ್ಷಕ್ಕೆ ಹಾಗೂ ಕ್ಷೇತ್ರದ ಜನತೆಗೆ ಸಾಕಷ್ಟು ಅನ್ಯಾಯ ಮಾಡಿದಂತೆ ಎಂದರು.

ಡಾ. ಸುಧಾಕರ್ ವಿರುದ್ಧ ಕಾಂಗ್ರೆಸ್‌ ನಾಯಕರಿಂದ ವಾಗ್ದಾಳಿ..

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಡಾ. ಸುಧಾಕರ್‌ ಯಾವೊಬ್ಬ ಕಾರ್ಯಕರ್ತರ ಒಂದು ಮಾತನ್ನೂ ಕೇಳಿಲ್ಲ. ರಾಜೀನಾಮೆಯ ಸ್ವಂತ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲಾ. ಈಗ ಸಂವಿಧಾನಕ್ಕೆ ಬದ್ದವಾಗಿ ನಡೆದುಕೊಳ್ಳುತ್ತಿರುವ ಮಾಜಿ‌ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನೈತಿಕತೆ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ. ಸುಧಾಕರ್‌ಗೆ ನೈತಿಕತೆ ಇದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಲಿ‌, 5 -6 ಬಾರಿ ಶಾಸಕರಾಗಿ ಗೆದ್ದಿದ್ದಾರೆ. ಆದರೆ, 2ನೇ ಬಾರಿಗೆ ಗೆದ್ದು ಸಚಿವ ಸ್ಥಾನಕ್ಕಾಗಿ ಈ ರೀತಿ ಮಾಡಿರುವುದು ಸರಿಯಲ್ಲ. ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ, ಯಾರು ಕ್ರಷರ್‌ಗಳ, ಅಧಿಕಾರಿಗಳ ಬಳಿ ಹಣ ಪೀಕುತ್ತಿದಾರೆಂದು ಗೊತ್ತಿದೆ ಎಂದು ನೇರ ಶಾಸಕ ಶಿವಶಂಕರ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿದ ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕ್ಷೇತ್ರದ ಜವಾಬ್ದಾರಿಯನ್ನು ಜಿಲ್ಲೆಯ ಕೈನಾಯಕರು ಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಉತ್ತಮ ನಾಯಕನ ಆಯ್ಕೆಯ ಪ್ರಕ್ರಿಯೆ ನಡಿಯಲಿದ್ದು, ಅನರ್ಹ ಶಾಸಕನಿಗೆ ಬುದ್ದಿ ಕಲಿಸಬೇಕಿದೆ ಎಂದು ತಿಳಿಸಿದರು. ಮೊದಲ ಬಾರಿ ಸುಧಾಕರ್ ಶಾಸಕನಾಗಲು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ಸಾಕಷ್ಟು ಶ್ರಮವಹಿಸಿದ್ದೇವೆ. ಆದರೆ, ನಂತರದ ಚುನಾವಣೆಯಲ್ಲಿ ಕೇವಲ ಹಣದಿಂದ ಮತಗಳನ್ನ ಪಡೆದು ಗೆದ್ದಿದ್ದಾರೆ. ಈಗ ಅಧಿಕಾರದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಇತ್ತಿಚ್ಚೇಗಷ್ಟೇ ಕೈ ಅನರ್ಹ ಶಾಸಕ ಸುಧಾಕರ್ ಮಾಜಿ ಸ್ಪೀಕರ್ ಹಾಗೂ ಕೃಷಿ ಸಚಿವರ ವಿರುದ್ದ ನೇರ ವಾಗ್ದಾಳಿ ನಡೆಸಿದ್ದು ನೈತಿಕತೆ ಇದ್ರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೀ ಎಂಬ ಹೇಳಿಕೆ ನೀಡಿದ್ರು.ಇದರ ಸಲುವಾಗಿಯೇ ಇಂದು ಜಿಲ್ಲೆಯ ಕೈ ಶಾಸಕರು ಸಭೆಯನ್ನು ಸೇರಿ ಸುಧಾಕರ್ ವಿರುದ್ದ ಗುಡುಗಿದ್ದಾರೆ.


Body:ಹೌದು ನೈತಿಕತೆ ಇದ್ದರೆ ತಮ್ಮ ಶಾಸಕರುಗಳಿಗೆ ರಾಜೀನಾಮೆ ನೀಡಲೀ ಎಂದು ಮಾಜಿ ಸ್ಪೀಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿಗೆ ನೇರ ಆರೋಪ ಮಾಡಿ ಸಾಕಷ್ಟು ಸದ್ದು ಮಾಡಿದ್ದರು.ಸದ್ಯ ಇಂದು ಗೌರಿಬಿದನೂರು ಶಾಸಕ ಸೇರಿದಂತೆ ಶಿಢ್ಲಘಟ್ಟ ಶಾಸಕ ವಿ ಮುನಿಯಪ್ಪ,ಹಾಗೂ ಚಿಕ್ಕಬಳ್ಳಾಪುರ ಮಾಜಿ ಶಾಸಕರು ಒಂದು ಕಡೆ ಸೇರಿ ಅನರ್ಹ ಶಾಸಕರ ವಿರುದ್ದ ಗುಡಿಗಿದ್ದಾರೆ.

ಸಯಧಾಕರ್ ಎರಡು ಬಾರೀ ಗೆಲ್ಲಲು ಕಾಂಗ್ರೆಸ್ ನ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿದ್ದು ಈಗ ಕೆವಲ ಸಚಿವ ಸ್ಥಾನದ ಹಾಗೂ ಹಣದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೇ ನೀಡಿರಯವದು ಸರೀಯಲ್ಲಾ ಇದು ಪಕ್ಷಕ್ಕೆ ಹಾಗೂ ಕ್ಷೇತ್ರದ ಜನತೆಗೆ ಸಾಕಷ್ಟು ಅನ್ಯಯ ಮಾಡಿದಂತೆ .ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಾಗ ಯಾವೊಬ್ಬ ಕಾರ್ಯಕರ್ತ ರನ್ನು ಹಾಗೂ ತಮ್ಮ ಕ್ಷೇತ್ರದ ಜನತೆಯನ್ನು ಒಂದು‌ ಮಾತನ್ನು ಕೇಳದೆ ರಾಜಿನಾಮೆ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲಾ.ಈಗ ಸಂವಿಧಾನಕ್ಕೆ ಬದ್ದವಾಗಿ ನಡೆದುಕೊಳ್ಳುತ್ತಿರುವ ಮಾಜಿ‌ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನೈತಿಕತೆ ಬಗ್ಗೆ ಪ್ರಶ್ನಿಸುವುದು ಸರಿಯಲ್ಲಾ.ಸುಧಾಕರ್ ಗೆ ನೈತಿಕತೆ ಇದ್ದರೆ ಪುಟ್ಟಗೋಸಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾನಕ್ಕೆ ರಾಜಿನಾಮೇ ನೀಡಲೀ‌,5 - 6 ಬಾರೀ ಶಾಸಕಾರಿ ಗೆದ್ದಿದ್ದೇವೆ ಆದರೆ ಎರಡನೇ ಬಾರೀಗೆ ಗೆದ್ದು ಸಚಿವ ಸ್ಥಾನಕ್ಕಾಗಿ ಈ ರೀತಿ ಮಾಡಿರುವುದು ಸರಿಯಲ್ಲಾ.ನೈತಿಕತೆ ಇದ್ದರೆ ರಾಜಿನಾಮೆ ನೀಡಲೀ ಯಾರು ಕ್ರಷರ್ ಗಳು,ಅಧಿಕಾರಿಗಳ ಬಳಿ ಹಣ ಪೀಕುತ್ತಿಧದಾರೆಂದು ಗೊತ್ತಿದೆ ಎಂದು ನೇರ ವಾಗ್ದಾಳಿಯನ್ನು ಗೌರಿಬಿದನೂರು ಶಾಸಕ ಹಾಗೂ ಮಾಜಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಇದೇ ವೇಳೆ ಮಾತಾನಾಡಿದ ಶಿಡ್ಲಘಟ್ಟ ಶಾಸಕ ವಿ ಮುನಿಯಪ್ಪ ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಗೊಳಿಸುವ ಸಲುವಾಗಿ ಕ್ಷೇತ್ರದ ಜವಬ್ದಾರಿಯನ್ನು ಜಿಲ್ಲೆಯ ಕೈನಾಯಕರಿಗೆ ಕೊಟ್ಟಿದ್ದಾರೆ.ಮುಂದಿನ ಚುನಾವಣೆಯಲ್ಲಿ ಉತ್ತಮ ನಾಯಕನ ಆಯ್ಕೆಯ ಪ್ರಕ್ರಿಯೆ ನಡಿಯಲಿದ್ದು ಅನರ್ಹ ಶಾಸಕನಿಗೆ ಬುದ್ದಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ಇದೇ ವೇಳೆ ಮಾತಾನಾಡಿದ ಚಿಕ್ಕಬಳ್ಳಾಪುರ ಮಾಜಿ ಶಾಸಕರು ಸುಧಾಕರ್ ನಡತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲ ಬಾರೀ ಸುಧಾಕರ್ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ಕಾರ್ಯಕರ್ತ ಸೇರಿದಂತೆ ನಾವೆಲ್ಲಾ ಸಾಕಷ್ಟು ಶ್ರಮವಹಿಸಿದ್ದೇವೆ.ಆದರೆ ನಂತರದ ಚುನಾವಣೆ ಯಲ್ಲಿ ಕೇವಲ ಹಣದಿಂದ ಮತಗಳನ್ನು ಗೆದ್ದಿದ್ದಾರೆ.ಈಗ ಅಧಿಕಾರ ಲದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲಾ, ಸದ್ಯ ಮುಂಬರುವ ಚುನಾವಣೆಯಲ್ಲಿ ಸುಧಾಕರ್ ಗೆ ಜನತೆ ತಕ್ಕ ಬುದ್ದಿ ಕಲಿಸಬೇಕಾಗಿದೆ ಎಂದು ಜನತೆಗೆ‌ ಕರೆಕೊಟ್ಟಿದ್ದಾರೆ.

ಇನ್ನೂ ಇದೇ ವೇಳೆ ಮಾತಾನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಾಂಗ್ರೆಸ್ ಕಾರ್ಯಕರ್ತರು ಯಾರು ಸುಧಾಕರ್ ಬೆಂಬಲವಾಗಿ ನಿಂತುಕೊಳ್ಳಬಾರದು.ಒಂದು ವೇಳೆ ನಿಂತರೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ಥಾನಕ್ಕಾಗಿ ರಾಜೀನಾಮೆ ನೀಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದರು..


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.