ETV Bharat / state

ಜೆಡಿಎಸ್ ಅಪ್ಪ-ಮಕ್ಕಳ ಪಕ್ಷವಂತೆ.. ಹಾಗಾದ್ರೆ , ಕಾಂಗ್ರೆಸ್ ತಾಯಿ-ಮಗನ ಪಕ್ಷವೇ? : ಸಾ ರಾ ಮಹೇಶ್​

author img

By

Published : Dec 8, 2021, 3:38 PM IST

Council election
ಜೆಡಿಎಸ್​ ಚುನಾವಣಾ ಪ್ರಚಾರ

ಸೀಮೆಎಣ್ಣೆ ವಿತರಿಸಲೂ ದುಡ್ಡೇ ಇಲ್ಲ, ಗ್ರಾಮೀಣ ಪ್ರದೇಶ ಅಭಿವೃದ್ದಿಪಡಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ ನಮ್ಮ ಪಕ್ಷದ ಅಭ್ಯರ್ಥಿ ಮಂಜೇಗೌಡ ಅವರನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು..

ಚಾಮರಾಜನಗರ : ಜೆಡಿಎಸ್ ಅಪ್ಪಮಕ್ಕಳ ಪಕ್ಷ ಎಂದು ಕರೆಯುತ್ತಾರೆ. ಹಾಗಾದರೆ, ಕಾಂಗ್ರೆಸ್ ತಾಯಿ-ಮಗನ, ಅಪ್ಪ-ಮಗನ ಪಕ್ಷವೇ ಎಂದು ಶಾಸಕ ಸಾ ರಾ ಮಹೇಶ್ ಟೀಕಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾತೆತ್ತಿದ್ದರೇ ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತೀರಲ್ಲಾ ನಿಮ್ಮದು ಯಾವ ಪಕ್ಷ ? ನಿಮ್ಮ ಮೇಡಂ ಇದ್ದರಲ್ಲಾ, ಅವರ ಮಗ ಇದ್ದರಲ್ಲ. ಹಾಗಾದ್ರೆ, ಕಾಂಗ್ರೆಸ್ ತಾಯಿ-ಮಗನಾ ಪಕ್ಷವೇ ? ಮೈಸೂರು ಜಿಲ್ಲೆಯಲ್ಲಿ ಮಗನಿಗಾಗಿ ಬಾದಾಮಿಗೆ ಹೋಗಿದ್ರಲ್ಲ, ನಿಮ್ಮದು ಅಪ್ಪ ಮಗನ ಪಕ್ಷವೇ ಎಂದು ಕೈ ಪಾಳೆಯವನ್ನು ತರಾಟೆಗೆ ತೆಗೆದುಕೊಂಡರು.

ನಾವು ಅಧಿಕಾರಕ್ಕೆ ಬಂದರೆ ಅನುದಾನದ ಹೊಳೆ ಹರಿಸಿಬಿಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಕೇಂದ್ರದಲ್ಲೂ ನಿಮ್ಮದೇ ಸರ್ಕಾರ, ರಾಜ್ಯದಲ್ಲೂ ನಿಮ್ಮದೆ ಸರ್ಕಾರವಿದೆ. ಏನು ಅಭಿವೃದ್ದಿ ಮಾಡಿದ್ದೀರಿ? ನಿಮ್ಮ ಸರ್ಕಾರದಲ್ಲಿ ಮಂಜೂರಾದ ಒಂದು ಲಕ್ಷದ ಆಶ್ರಯ ಮನೆಗಳಿಗೆ ಇನ್ನೂ ಬಿಲ್ಲು ಆಗಿಲ್ಲ.

ಸೀಮೆಎಣ್ಣೆ ವಿತರಿಸಲೂ ದುಡ್ಡೇ ಇಲ್ಲ, ಗ್ರಾಮೀಣ ಪ್ರದೇಶ ಅಭಿವೃದ್ದಿಪಡಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ ನಮ್ಮ ಪಕ್ಷದ ಅಭ್ಯರ್ಥಿ ಮಂಜೇಗೌಡ ಅವರನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ಅಭ್ಯರ್ಥಿ ಸಿ.ಎನ್.ಮಂಜೇಗೌಡ ಮಾತನಾಡಿ, ಪಶ್ಚಿಮಬಂಗಾಳ ರಾಜ್ಯದ ಮಾದರಿಯಲ್ಲಿ ಗ್ರಾಪಂ ಸದಸ್ಯರಿಗೆ ಗೌರಧನವನ್ನು 8 ಸಾವಿರ ರೂ. ಏರಿಸಲು, ಗ್ರಾಮ ಪಂಚಾಯತ್‌ ಹಿತವನ್ನು ಕಾಪಾಡಲು ನನಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ; ಪರಿಷತ್ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ : ಮತಗಟ್ಟೆ, ಅಭ್ಯರ್ಥಿ ಹಾಗೂ ಮತದಾರರೆಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.