ETV Bharat / state

ವೀರಪ್ಪನ್  ಹುಟ್ಟೂರಲ್ಲಿ ಸಂಕ್ರಾಂತಿ ಸಡಗರ:‌ ಹೋರಿ ಬೆದರಿಸಿ ಹಬ್ಬ ಆಚರಣೆ

author img

By

Published : Jan 16, 2021, 7:40 PM IST

ಕಾಡುಗಳ್ಳ ವೀರಪ್ಪನ್ ಹುಟ್ಟೂರಲ್ಲಿ ಹೋರಿ ಬೆದರಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

dsd
ವೀರಪ್ಪನ್ ಊರಲ್ಲಿ ಸಂಕ್ರಾಂತಿ ಸಡಗರ

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್​ ಸ್ವಗ್ರಾಮ, ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಸಂಕ್ರಾಂತಿ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ವೀರಪ್ಪನ್ ಊರಲ್ಲಿ ಸಂಕ್ರಾಂತಿ ಸಡಗರ

ಗ್ರಾಮದ ಮಾರಿಯಮ್ಮ ದೇಗುಲ‌ದ ಮುಂಭಾಗ ಜಮಾಯಿಸಿದ ಹೊಗೆನಕಲ್, ಆಲಂಬಾಡಿ, ಪುದೂರಿನ‌ ಗ್ರಾಮಸ್ಥರು ಎತ್ತುಗಳಿಗೆ ಬೆದರು ಬೊಂಬೆ ತೋರಿಸಿ ರೊಚ್ಚಿಗೆಬ್ಬಿಸಿ ಕಾದಾಡಿದ್ದಾರೆ.‌

ಈ ಕುರಿತು ಗ್ರಾಮದ ಲಕ್ಷ್ಮಣ್ ಮಾತನಾಡಿ, ಇಂದು 50 ಎತ್ತುಗಳನ್ನು ಬೆದರಿಸಿದೆವು. ‌ಎತ್ತುಗಳಿಗೆ ಎಳೆಯುವ ಶಕ್ತಿ ಹೆಚ್ಚಾಗಲಿ, ದುಷ್ಟ ಶಕ್ತಿಗಳು ಹತ್ತಿರ ಸುಳಿಯದಿರಲೆಂದು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಎತ್ತನ್ನು ಕಾದಾಟಕ್ಕಿಳಿಸಿದವರು ಮಾರಿಯಮ್ಮ ದೇಗುಲಕ್ಕೆ ಒಂದೊಂದು ದೀಪದ ಕಂಬ ನೀಡಿದ್ದಾರೆ ಎಂದರು.

ಎಡ-ಬಲವನ್ನು ಹಗ್ಗದಿಂದ ಹಿಡಿಯುವ 10 ಕ್ಕೂ ಹೆಚ್ಚು ಯುವಕರು, ಬೆದರು ಬೊಂಬೆಯನ್ನು ತೋರಿಸಿ ಅದನ್ನು ರೊಚ್ಚಿಗೆಬ್ಬಿಸುತ್ತಾರೆ. 10-12 ಮಂದಿಯ ಹಿಡಿತವನ್ನು ಲೆಕ್ಕಿಸದ ಎತ್ತುಗಳು ಬೆದರುಬೊಂಬೆಯನ್ನು ತಿವಿದು, ಬಿಸಾಕುತ್ತವೆ. ಇದು ಜಲ್ಲಿಕಟ್ಟಿನಷ್ಟು ಅಪಾಯಕಾರಿ ಅಲ್ಲದಿದ್ದರೂ ಜಾಗೃತರಾಗಿರುವುದು ಅವಶ್ಯಕ. ರೈತರ ಹಬ್ಬ ಸಂಕ್ರಾಂತಿಯನ್ನು ಒಂದೊಂದು ಪ್ರದೇಶದಲ್ಲಿ ಒಂದು ವಿಶೇಷತೆಯೊಂದಿಗೆ ಆಚರಿಸಲಾಗುತ್ತಿದೆ. ಹೋರಿ ಬೆದರಿಸೋದು ಸಂಕ್ರಾಂತಿ ಸಡಗರವನ್ನು ಗ್ರಾಮದಲ್ಲಿ ಇಮ್ಮಡಿಗೊಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.