ETV Bharat / state

ಅಕ್ಕ- ಪಕ್ಕದ ಮನೆ ಚಿಲಕ ಹಾಕಿ ಶ್ರೀಗಂಧ ಕಳವು ಮಾಡಿದ ಚಾಲಕಿ‌ ಕಳ್ಳರು

author img

By

Published : Sep 19, 2020, 11:57 PM IST

ಪಟ್ಟಣದ 2ನೇ ಕ್ರೈಸ್ತ ಬಡವಾಣೆಯ ನಿವಾಸಿ ಅನುಪ್ ಕುಮಾರ್ ಅವರ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಖದೀಮರು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ವೇಳೆ ಸಿಕ್ಕಿ ಬೀಳುವ ಭಯದಿಂದ ಚಾಲಾಕಿತನ ಪ್ರದರ್ಶಿಸಿ ಅಕ್ಕ ಪಕ್ಕದ ಮನೆಯ ಚಿಲಕ ಹಾಕಿ ಪರಾರಿಯಾಗಿದ್ದಾರೆ.

ಶ್ರೀಗಂಧ ಕಳವು
ಶ್ರೀಗಂಧ ಕಳವು

ಕೊಳ್ಳೇಗಾಲ : ಅಕ್ಕ-ಪಕ್ಕದ ಮನೆಯ ಚಿಲಕಹಾಕಿ, ಖಾಲಿ‌ ನೀವೇಶನದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ತಡ ರಾತ್ರಿ ಕಟಾವು ಮಾಡಿ ಕದ್ದೊಯ್ದಿರುವ ಘಟನೆ ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ 2ನೇ ಕ್ರೈಸ್ತ ಬಡವಾಣೆಯ ನಿವಾಸಿ ಅನುಪ್ ಕುಮಾರ್ ಅವರ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಖದೀಮರು ಕಟಾವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ಮಾಡುವ ವೇಳೆ ಸಿಕ್ಕಿ ಬೀಳುವ ಭಯದಿಂದ ಚಾಲಾಕಿತನ ಪ್ರದರ್ಶಿಸಿ, ಅಕ್ಕ ಪಕ್ಕದ ಮನೆಯ ಚಿಲಕ ಹಾಕಿ ಪರಾರಿಯಾಗಿದ್ದಾರೆ.

ಈ ಕುರಿತು ಮಾಲೀಕ ಅನುಪ್ ಕುಮಾರ್ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.