ETV Bharat / state

ಬಿಜೆಪಿಯಲ್ಲಿ ದಲಿತ ಸಿಎಂ ಮಾಡಲಿ ಎಂದು ಮಹೇಶ್ ಧ್ವನಿ ಎತ್ತಲಿ : ಮಾಜಿ ಶಾಸಕ ಬಾಲರಾಜ್

author img

By

Published : Jun 25, 2021, 9:13 PM IST

ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಅದರದ್ದೇ ಆದ ಕಾನೂನಿದೆ. ರಾಷ್ಟ್ರ ಹಾಗೂ ರಾಜ್ಯ ವಿಶೇಷ ಸಮಿತಿಗಳಿವೆ. ಹೈಕಮಾಂಡ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗಿರುತ್ತದೆ. ಆದರೆ, ಈ‌ ಮಧ್ಯೆ ಎನ್.ಮಹೇಶ್, ಕಾಂಗ್ರೆಸ್ ಸಿಎಂ ಆಯ್ಕೆಯ ಬಗ್ಗೆ ಮಾತನಾಡಲು ನೈತಿಕತೆ‌ ಇದೆಯಾ ಎಂದು ಪ್ರಶ್ನಿಸಿದರು..

Ex MLA Balaraj
Ex MLA Balaraj

ಕೊಳ್ಳೇಗಾಲ : ಬಿಜೆಪಿ ಪರ‌ ನಿಂತು ಪಾಲುದಾರಿಕೆ ಪಡೆದು ಸರ್ಕಾರ ರಚನೆಯಲ್ಲಿ ಪಾಲ್ಗೊಂಡ ಶಾಸಕ ಎನ್.ಮಹೇಶ್, ಬಿಜೆಪಿ ಸರ್ಕಾರದಲ್ಲಿ ದಲಿತ ಸಿಎಂ ಮಾಡುವಂತೆ ಧ್ವನಿ ಎತ್ತಿ, ಅವರ ತಾಕತ್ತು ಪ್ರದರ್ಶಿಸಲಿ ಎಂದು ಮಾಜಿ ಶಾಸಕ ಬಾಲರಾಜ್ ಸವಾಲೆಸೆದಿದ್ದಾರೆ.

ಕೊಳ್ಳೇಗಾಲ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನದಿಂದಷ್ಟೇ 'ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ' ಎಂಬಂತೆ ಕಾಂಗ್ರೆಸ್‌ನಲ್ಲಿ ದಲಿತ ನಾಯಕರಿಗೆ ಸಿಎಂ ಸ್ಥಾನ ದೊರಕಿಲ್ಲ ಎಂದು ದಲಿತ ಸಿಎಂ ವಿಚಾರ ಮುನ್ನೆಲೆಗೆ ತಂದು ನೇರವಾಗಿ ಕಾಂಗ್ರೆಸ್ ವಿರುದ್ದ ಟೀಕಾರೋಪ‌ ಮಾಡಿದ್ದ ಶಾಸಕ ಎನ್.ಮಹೇಶ್ ಹೇಳಿಕೆಗೆ ಟಾಂಗ್ ನೀಡಿದರು.

ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಅದರದ್ದೇ ಆದ ಕಾನೂನಿದೆ. ರಾಷ್ಟ್ರ ಹಾಗೂ ರಾಜ್ಯ ವಿಶೇಷ ಸಮಿತಿಗಳಿವೆ. ಹೈಕಮಾಂಡ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾಗಿರುತ್ತದೆ. ಆದರೆ, ಈ‌ ಮಧ್ಯೆ ಎನ್.ಮಹೇಶ್, ಕಾಂಗ್ರೆಸ್ ಸಿಎಂ ಆಯ್ಕೆಯ ಬಗ್ಗೆ ಮಾತನಾಡಲು ನೈತಿಕತೆ‌ ಇದೆಯಾ ಎಂದು ಪ್ರಶ್ನಿಸಿದರು.

20 ವರ್ಷ ದಲಿತ ಸಿಎಂ ವಿಚಾರ ಮಾತನಾಡಲೇ ಇಲ್ಲ : ಬಿಎಸ್​ಪಿಯಲ್ಲಿ ಸತತ 20 ವರ್ಷ ಮಾಯಾವತಿ ಅವರನ್ನ ಪ್ರಧಾನ‌ಮಂತ್ರಿ ಮಾಡುವ ಪ್ರಯತ್ನ‌ ಮಾಡುತ್ತ ರಾಜ್ಯದಲ್ಲಿ ಬಿಎಸ್​ಪಿ ಅಗ್ರ ನಾಯಕರಾಗಿದ್ದ ಎನ್.ಮಹೇಶ್ ಆ ಕಾಲದಲ್ಲಿ ದಲಿತ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಎಲ್ಲೂ ಮಾತನಾಡಿಲ್ಲ. ಧ್ವನಿ ಎತ್ತಿಲ್ಲ. ಬರೀ ಕಾಂಗ್ರೆಸ್ ದೂರುತ್ತಿದ್ದರು‌ ಅಷ್ಟೇ.. ಆದರೆ, ಇತ್ತೀಚಿನ ಸಮ್ಮಿಶ್ರ ಸರ್ಕಾರಕ್ಕೆ ಬಂದ ಸಂದರ್ಭದಲ್ಲಿ ಪಾಲುದಾರಿಕೆಯಲ್ಲಿ ಪಾಲ್ಗೊಂಡು ಸಚಿವರಾಗಿದ್ದರು.

ಇದೀಗ ಯಾವ‌ ನೈತಿಕತೆಯಿಂದ ಹೀಗೆ ಮಾತನಾಡಿದ್ದಾರೆ. ಇನ್ನು, ದಲಿತ ಸಿಎಂ ಆಗುವ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಬಗ್ಗೆ ಮಾತನಾಡುವ ಎನ್.ಮಹೇಶ್, ಅವರೆದುರು ಚುನಾವಣೆಗೆ ಯಾಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು ಎಂದು ಕಿಡಿಕಾರಿದರು.

ಕೌರವರ ಪಾಳಯದಲ್ಲಿ ಉಳಿದು ಪಾಂಡವರಿಗೆ ರಾಜ್ಯಭಾರ ಹೇಗೆ ಕೊಡಿಸ್ತಾರೆ?

ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂದು ಕಾಂಗ್ರೆಸ್​ನಲ್ಲಿರುವ ದಲಿತ ನಾಯಕರ ವಿರುದ್ಧ ಮಾತನಾಡಿದ್ದಾರೆ. ಸರಿ ಅದನ್ನೇ ಚರ್ಚಿಸೋಣ. ಆದರೆ, ಅವರೇ ಕೌರವರ ಪಾಳಯದಲ್ಲಿದ್ದುಕೊಂಡು ಹೇಗೆ ಪಾಂಡವರಿಗೆ ರಾಜ್ಯಭಾರ ಕೊಡಿಸುತ್ತಾರೆ. ಏನಾದರೂ ಹೇಳಬೇಕಾದರೆ ನೈತಿಕ ಬದ್ಧತೆ ಇರಬೇಕು, ಸುಮ್ಮನೆ ಏನೇನೋ ಮಾತನಾಡಬಾರದು ಎಂದು ಎನ್ ಮಹೇಶ್ ವಿರುದ್ಧ ಕುಹುಕವಾಡಿದರು.

ಇದನ್ನೂ ಓದಿ:ಜನರು ಪ್ರಾದೇಶಿಕ ಪಕ್ಷಗಳ ಕಡೆ ಒಲವು ತೋರಿಸುತ್ತಿದ್ದಾರೆ : ಹೆಚ್​ ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.