ETV Bharat / state

'ಚಾಮರಾಜನಗರದ ಶೇ. 79ರಷ್ಟು ಸೋಂಕಿತರು ಹಳ್ಳಿಗರು, ಮಧ್ಯವಯಸ್ಕರೇ ಸೂಪರ್ ಸ್ಪ್ರೆಡರ್ಸ್​"

author img

By

Published : May 1, 2021, 2:34 PM IST

Chamarajanagar
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲೇ ಕೊರೊನಾ ಹರಡುತ್ತಿದೆ. ವಯೋಮಾನ ಗಮನಿಸಿದರೆ ಒಟ್ಟು ಸೋಂಕಿತರಲ್ಲಿ 21 ರಿಂದ 40 ವರ್ಷದವರೇ ಶೇ. 48ರಷ್ಟಿದ್ದಾರೆ. 41 ರಿಂದ 6ರ ವಯಸ್ಸಿನವರು ಶೇ. 29 ರಷ್ಟಿದ್ದು, ಶೇ. 12ರಷ್ಟು 21 ವರ್ಷದೊಳಗಿನವರಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.

ಚಾಮರಾಜನಗರ: ಹಳ್ಳಿಹಳ್ಳಿಗಳಲ್ಲಿ ಕೊರೊನಾ ವ್ಯಾಪಿಸಿದ್ದು, ಜಿಲ್ಲೆಯ ಒಟ್ಟು ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇ. 79ರಷ್ಟು ಗ್ರಾಮೀಣ ಭಾಗದವು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

'ಚಾಮರಾಜನಗರದ ಶೇ. 79ರಷ್ಟು ಸೋಂಕಿತರು ಹಳ್ಳಿಗರು, ಮಧ್ಯವಯಸ್ಕರೇ ಸೂಪರ್ ಸ್ರ್ಪೆಡರ್ಸ್'

ಜಿಲ್ಲಾಡಳಿತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲೇ ಕೊರೊನಾ ಹರಡುತ್ತಿದೆ. ವಯೋಮಾನ ಗಮನಿಸಿದರೆ ಒಟ್ಟು ಸೋಂಕಿತರಲ್ಲಿ 21 ರಿಂದ 40 ವರ್ಷದವರೇ ಶೇ. 48ರಷ್ಟಿದ್ದಾರೆ. 41 ರಿಂದ 6ರ ವಯಸ್ಸಿನವರು ಶೇ. 29 ರಷ್ಟಿದ್ದು, ಶೇ. 12ರಷ್ಟು 21 ವರ್ಷದೊಳಗಿನವರಿದ್ದಾರೆ ಎಂದು ಮಾಹಿತಿ ನೀಡಿದರು.

ಕಳೆದ ತಿಂಗಳು ಒಟ್ಟು 36 ಮಂದಿ ಸೋಂಕಿತರು ಮೃತಪಟ್ಟಿದ್ದು, ಹೆಚ್ಚಿನವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಮಧ್ಯವಯಸ್ಕ ವ್ಯಕ್ತಿಗಳೇ ಗ್ರಾಮೀಣ ಭಾಗದಲ್ಲಿ ಸೂಪರ್ ಸ್ಪ್ರೆಡ್ಡರ್​ ಆಗಿದ್ದು, ಕೊರೊನಾ ವ್ಯಾಪಿಸಲು ಹೆಚ್ಚಿನ ಕಾರಣ ಇವರಾಗಿದ್ದಾರೆ‌ ಎಂದು ವಿಶ್ಲೇಷಿಸಲಾಗಿದೆ.

ಕಂಟೋನ್ಮೆಂಟ್ ವಲಯ, ಕೈಗೆ ಸೀಲ್: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗೆಟ್ಟಲು ಇಂದಿನಿಂದ 10ಕ್ಕಿಂತ ಹೆಚ್ಚು ಸೋಂಕು ಪತ್ತೆಯಾದರೆ ಆ ಪ್ರದೇಶವನ್ನು ಕಂಟೋನ್​​​​ಮೆಂಟ್​ ವಲಯವನ್ನಾಗಿಸಲಿದ್ದು, ಸೋಂಕಿತರ ಕೈಗೆ ಇಂದಿನಿಂದ ಸೀಲ್ ಹಾಕಲಾಗುವುದು‌. ಹೋಂ ಐಸೋಲೇಷನ್​ನಲ್ಲಿರಬೇಕಾದವರು ಅಸಡ್ಡೆ ತೋರುತ್ತಿರುವುದರಿಂದ ಈ ಕ್ರಮ ಎಂದು ತಿಳಿಸಿದರು.

ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಕೊರೊನೇತರ ರೋಗಿಗಳು ಹೆಚ್ಚು ಬಂದರೆ ಟೋಕನ್ ವ್ಯವಸ್ಥೆ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಲಕ್ಷಣಗಳಿರುವರನ್ನು ಕೋವಿಡ್ ಟೆಸ್ಟ್​​ಗೆ ಒಳಪಡಿಸದೇ ಚಿಕಿತ್ಸೆ ಕೊಡುವುದು ಕಂಡು ಬಂದಲ್ಲಿ ಅಂತಹ ಖಾಸಗಿ ಕ್ಲಿನಿಕ್ ವೈದ್ಯರ ಪರವಾನಗಿ ರದ್ದುಗೊಳಿಸಲಾಗುವುದು ಡಿಸಿ ಎಚ್ಚರಿಸಿದರು.

ಇದೇ ವೇಳೆ, ಕಳೆದ ವರ್ಷದಂತೆ ಸಿಡಿಎಸ್ ಭವನದಲ್ಲಿ ನಿರ್ಗತಿಕರು ಮತ್ತು ಅಲೆಮಾರಿಗಳಿಗೆ ವಾಸ್ತವ್ಯ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಓದಿ: ಮಾವಳ್ಳಿಪುರದಲ್ಲಿ ಸೋಂಕಿತರ ಅಂತ್ಯಕ್ರಿಯೆಗೆ ಸರ್ಕಾರ ತೀರ್ಮಾನ... ಗ್ರಾಮಸ್ಥರಿಂದ ವಿರೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.