ETV Bharat / state

ಮಾದಪ್ಪನ ಚಿನ್ನದ ಕರಡಿಗೆ ನಾಪತ್ತೆ : ಪ್ರಕರಣ ತಡವಾಗಿ ಬೆಳಕಿಗೆ

author img

By

Published : Mar 25, 2021, 11:33 AM IST

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆ ಆಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಾದಪ್ಪನ ಚಿನ್ನದ ಕರಡಿಗೆ ನಾಪತ್ತೆ
Male Mahadeshwara gold karadige missing

ಚಾಮರಾಜನಗರ: ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಉತ್ಸವ ಮೂರ್ತಿಯ ಚಿನ್ನದ ಕರಡಿಗೆ ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಲಕ್ಷಾಂತರ ರೂ. ಮೌಲ್ಯದ ಕರಡಿಗೆಯು ಅರ್ಚಕರ ಸುಪರ್ದಿಯಲ್ಲಿರಲಿದ್ದು, ತಿಂಗಳಿಗೊಮ್ಮೆ ಅರ್ಚಕರ ಸರದಿ ಬದಲಾಗುವಾಗ ನಾಪತ್ತೆಯಾಗಿದೆ. ಕರಡಿಗೆ ಕಳುವಾಗಿದೆಯೋ ಇಲ್ಲ, ಪೂಜಾ ಸಾಮಗ್ರಿಗಳ ಜೊತೆ ಸೇರಿಕೊಂಡಿದೆಯೋ ಎಂಬುದು ಇನ್ನೂ ಗೊತ್ತಾಗಿಲ್ಲ.‌ ಇಂದು ಹುಂಡಿ ಎಣಿಕಾ ಕಾರ್ಯ ನಡೆಯುತ್ತಿದ್ದು, ಈ ವೇಳೆಯಲ್ಲಾದರೂ ಸಿಗಬಹುದು ಎಂಬುದು ಅರ್ಚಕ ಸಮೂಹದ ಮಾತಾಗಿದೆ.

ಓದಿ: ರಾಕೇಶ್ ಟಿಕಾಯತ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಿ: ಎಚ್​ಡಿಕೆ ಆಗ್ರಹ

ಪ್ರಕರಣ ನಡೆದು 5 ದಿನಗಳಾದರೂ ಪ್ರಾಧಿಕಾರ ಯಾವುದೇ ದೂರು ನೀಡಿಲ್ಲ. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರನ್ನು ಸಂಪರ್ಕಿಸಿದರಾದರೂ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.