ETV Bharat / state

ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರ ಡಿಸಿ ಭೇಟಿ: ಗಡಿ ವೀಕ್ಷಣೆ

author img

By

Published : Jun 22, 2022, 1:18 PM IST

chamarajanagar-dc-visit-to-mekedadu-area
ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರ ಡಿಸಿ ಭೇಟಿ: ಗಡಿ ವೀಕ್ಷಣೆ

ಚಾಮರಾಜನಗರ ಹಾಗೂ ರಾಮನಗರದ ನಡುವೆ ಇರುವ ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದ್ದರು.

ಚಾಮರಾಜನಗರ: ಚಾಮರಾಜನಗರ ಹಾಗೂ ರಾಮನಗರದ ನಡುವೆ ಇರುವ ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ, ಅಲ್ಲಿನ ಪ್ರದೇಶ ವೀಕ್ಷಿಸಿದ್ದಾರೆ. ಈ ವೇಳೆ ಕಾವೇರಿ ವನ್ಯಜೀವಿಧಾಮದ ಎಸಿಎಫ್ ಅಂಕರಾಜು ಅವರಿಂದ ಸ್ಥಳದ ಬಗ್ಗೆ ಮಾಹಿತಿ ಪಡೆದರು.

ಚಾಮರಾಜನಗರ ಹಾಗೂ ರಾಮನಗರ ಗಡಿಯೇ ಕಾವೇರಿ ನದಿ ಆಗಿದ್ದು, ಮೇಕೆದಾಟಿಗೆ ಭೇಟಿ ನೀಡಿ ಜಿಲ್ಲೆಯ ಗಡಿ, ಸಂಗಮ, ಪಾಲಾರ್, ಹೊಗೇನಕಲ್ ಜಲಪಾತದ ಸ್ಥಳಗಳನ್ನು ಭೂಪಟದಲ್ಲಿ ನೋಡಿ ಎಸಿಎಫ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮೇಕೆದಾಟು ಆಣೆಕಟ್ಟು ಯೋಜನೆ ಸಂಬಂಧವೇನು ಡಿಸಿ ಭೇಟಿ ನೀಡಿಲ್ಲ. ಹನೂರು ತಾಲೂಕಿನ ಗಾಣಿಗಮಂಗಲಕ್ಕೆ ತೆರಳಿದ ಬಳಿಕ ಜಿಲ್ಲೆಯ ಗಡಿಭಾಗವನ್ನು ನೋಡಲು ಬಂದಿದ್ದರು ಎಂದು ಎಸಿಎಫ್ ಅಂಕರಾಜು ತಿಳಿಸಿದ್ದಾರೆ.

chamarajanagar-dc-visit-to-mekedadu-area
ಮೇಕೆದಾಟು ಪ್ರದೇಶಕ್ಕೆ ಚಾಮರಾಜನಗರ ಡಿಸಿ ಭೇಟಿ

ಇದಕ್ಕೂ ಮುನ್ನ, ಗಾಣಿಗ ಮಂಗಲದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜನರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸರ್ಕಾರದ ವತಿಯಿಂದ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ 1 ಕೋಟಿ ರೂ‌. ಅನುದಾನ ದೊರಕಿದ್ದು, ಕಾಮಗಾರಿಯ ಜವಾಬ್ದಾರಿಯನ್ನು ಕೆಆರ್​ಐಡಿಎಲ್‍ಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ದೆಹಲಿಯಲ್ಲಿ ಅಗ್ನಿಪಥ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ರಾಜ್ಯ ನಾಯಕರ ಜೊತೆ ಸಿದ್ದರಾಮಯ್ಯ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.