ETV Bharat / state

ಚಾಮರಾಜನಗರದಲ್ಲಿ ಮರಿಯಾನೆ ಸಾವು: ಹೆತ್ತ ಕರುಳಿನ ಮೂಕರೋಧನೆ, ಸ್ಥಳದಿಂದ ಕದಲದ ತಾಯಿ

author img

By

Published : Jan 23, 2022, 10:13 PM IST

ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಅನಾರೋಗ್ಯದಿಂದ ಆನೆ ಮರಿಯೊಂದು ಸಾವನ್ನಪ್ಪಿದೆ. ಇತ್ತ ತಾಯಿ ಆನೆ ರೋಧಿಸುತ್ತಾ ಸ್ಥಳದಲ್ಲೇ ಬೀಡು ಬಿಟ್ಟಿದೆ.

Baby elephant died by Illness at Chamarajanagar
ಚಾಮರಾಜನಗರದಲ್ಲಿ ಮರಿಯಾನೆ ಸಾವು

ಚಾಮರಾಜನಗರ: ಮರಿಯಾನೆಯೊಂದು ಮೃತಪಟ್ಟಿದ್ದರಿಂದ ತಾಯಿ ಆನೆಯ ಮೂಕರೋಧನೆ ಕಲ್ಲು ಹೃದಯದವರನ್ನು ಕರಗಿಸುವಂತಿದೆ. ತಾಯಿ ಆನೆ ಸ್ಥಳದಲ್ಲೇ ಬೀಡು ಬಿಟ್ಟು ಮಮ್ಮಲ ಮರಗುತ್ತಿರುವ ಘಟನೆ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಚಾಮರಾಜನಗರದ ಬೂದಿಪಡಗದಲ್ಲಿ ಮರಿಯಾನೆ ಸಾವು

ಬೂದಿಪಡಗ ಗ್ರಾಮದ ಮಹಾದೇವ ಎಂಬುವವರ ಜಮೀನಿನಲ್ಲಿ ಅನಾರೋಗ್ಯದಿಂದ ಮರಿಯಾನೆ ಮೃತಪಟ್ಟಿತ್ತು. ಇತ್ತ ಮರಿಯನ್ನು ಕಳೆದುಕೊಂಡ ತಾಯಿ ಆನೆ ರೋಧಿಸುತ್ತಾ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಹತ್ತಿರ ಹೋಗಲು ಪ್ರಯತ್ನಿಸಿದವರನ್ನು ಅಟ್ಟಾಡಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 50,210 ಕೊರೊನಾ ಪಾಸಿಟಿವ್.. 165 ಜನರಿಗೆ ವಕ್ಕರಿಸಿದ ಒಮಿಕ್ರಾನ್‌

ಹೇಗೂ ಅರಣ್ಯ ಇಲಾಖಾ ಸಿಬ್ಬಂದಿ ಹರಸಾಹಸಪಟ್ಟು ಮರಿಯಾನೆಯ ಮರಣೋತ್ತರ ಪರೀಕ್ಷೆ ಮಾಡಿ ಇಂದು ಸಂಜೆ ಅಂತ್ಯಕ್ರಿಯೆ ನಡೆಸಿದೆ. ಆದರೆ ಕರುಳಬಳ್ಳಿ ಸಂಬಂಧದಿಂದಾಗಿ ಜಮೀನು ಬಿಟ್ಟು ಕದಲದ ಆನೆಯ ಮೂಕರೋಧನೆಯ ದೃಶ್ಯ ಮನಕಲುಕುವಂತಿದೆ.

ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.