ETV Bharat / state

ಕೊರೊನಾ ವಾರಿಯರ್ಸ್ ಹಾಗೂ ಹಸಿದವರಿಗೆ ಊಟ: ಗುರುಮಿಠಕಲ್ ಯುವಕರ ಕಾರ್ಯಕ್ಕೆ ಜನರ ಮೆಚ್ಚುಗೆ

author img

By

Published : Apr 20, 2020, 2:13 PM IST

team-spandana-providing-food-in-gurumitkal
ಮಾತೋಶ್ರೀ ಚಾರಿಟೇಬಲ್ ಟ್ರಸ್ಟ್

ಮಾತೋಶ್ರೀ ಚಾರಿಟೇಬಲ್ ಟ್ರಸ್ಟ್​ನ ಟೀಂ ಸ್ಪಂದನ ಯುವ ಕಾರ್ಯಕರ್ತರು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದು, ಶುದ್ಧ ಆಹಾರವನ್ನು ತಯಾರಿಸಿ ಆರೋಗ್ಯ, ಪೊಲೀಸ್​ ಇಲಾಖೆ ಹಾಗೂ ಬಡ ನಿರ್ಗತಿಕರು ಇದ್ದಲ್ಲಿಗೆ ತೆರಳಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಗುರುಮಠಕಲ್: ಕೊರೊನಾ ಲಾಕ್​ಡೌನ್​ನಿಂದ ಜನ ತುತ್ತು ಅನ್ನಕ್ಕೂ ಸಹ ಪರದಾಡುವಂತಾಗಿದೆ. ಬಡವರಿಗೆ, ನಿರ್ಗತಿಕರಿಗೆ ವಿವಿಧ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಜಿಲ್ಲೆಯ ಗುರುಮಿಠಕಲ್ ಪಟ್ಟಣದ ಮಾತೋಶ್ರೀ ಚಾರಿಟೇಬಲ್ ಟ್ರಸ್ಟ್​ನ ಅಧ್ಯಕ್ಷ ರಾಜಾರಮೇಶ ಗೌಡರ ನೇತೃತ್ವದ ಟೀಂ ಸ್ಪಂದನ ಯುವ ಕಾರ್ಯಕರ್ತರು ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.

ಕೋವಿಡ್​-19 ಕಾರ್ಯದಲ್ಲಿ ನಿರತರಾಗಿರುವ ಪೊಲೀಸ್​ ಇಲಾಖೆ, ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಲಸೆ ಬಂದ ನಾಗರಿಕರಿಗೆ ಅವರು ಇರುವ ಸ್ಥಳಕ್ಕೆ ತೆರಳಿ ಶುಚಿ, ರುಚಿಯಾದ ಉಚಿತ ಊಟದ ಜೊತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಗುರುಮಿಠಕಲ್ ಯುವಕರ ನಿಸ್ವಾರ್ಥ ಕಾರ್ಯಕ್ಕೆ ಜನರ ಮೆಚ್ಚುಗೆ

ಲಾಕ್​ಡೌನ್ ಇರುವಷ್ಟು ದಿನ ಅಸಹಾಯಕರಿಗೆ ಉಚಿತ ಊಟ ನೀಡಲು ನಿರ್ಧಾರಿಸಿದ್ದಾರೆ. ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಹ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಮಧ್ಯಾಹ್ನ ವಿವಿಧ ಕಚೇರಿಗಳಿಗೆ ಸ್ವತಃ ಈ ಯುವಕರೇ ಊಟವನ್ನು ತಲುಪಿಸುತ್ತಾರೆ.

ಇನ್ನು ಆಹಾರ ತಯಾರಿಸುವಾಗ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಈ ಯುವ ಪಡೆ, ವಿವಿಧ ಇಲಾಖೆಗಳ ಸಿಬ್ಬಂದಿಗೆ ಕರೆ ಮಾಡಿ ಅವರ ಊಟದ ಬಗ್ಗೆ ವಿಚಾರಸಿ ಅವರಿಗೆ ಆಹಾರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರ ಈ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.