ETV Bharat / state

ಡೆಡ್ ಸ್ಟೋರೇಜ್ ತಲುಪಿದ ಶಿವಪುರ ಕೆರೆ.. ಜನರಿಗೆ ತಪ್ಪದ ಕುಡಿಯೋ ನೀರಿನ ಬವಣೆ

author img

By

Published : Jul 28, 2019, 9:51 AM IST

ನೀರಿಗಾಗಿ ನಿವಾಸಿಗಳ ಪರದಾಟ

ಶಿವಪುರ ಕೆರೆಯು ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಕಳೆದ 20 ದಿನಗಳಿಂದ ಗಾಂಧಿನಗರ ವಾಟರ್ ಬೂಸ್ಟರ್‌ಗೆ ನೀರು ಪೂರೈಕೆಯಾಗಿಲ್ಲ.

ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಯು ಡೆಡ್ ಸ್ಟೋರೇಜ್ ತಲುಪಿದ ಪರಿಣಾಮ ಕಳೆದ 20 ದಿನಗಳಿಂದ ಗಾಂಧಿನಗರ ವಾಟರ್ ಬೂಸ್ಟರ್‌ಗೆ ನೀರು ಪೂರೈಕೆಯಾಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ನೀರಿಗಾಗಿ ನಿವಾಸಿಗಳ ಪರದಾಟ..

ಮೋಕಾ ರಸ್ತೆಯಲ್ಲಿರುವ ಗಾಂಧಿನಗರ ವಾಟರ್ ಬೂಸ್ಟರ್ ಬಳಿ ಬಸವೇಶ್ವರ ನಗರ ಸೇರಿದಂತೆ ಇತರೆ ಕಾಲೋನಿಯ ನಿವಾಸಿಗಳು ಮಹಾನಗರ ಪಾಲಿಕೆಯ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. 20 ದಿನಗಳಿಂದ ನೀರು ಪೂರೈಕೆ ಮಾಡಿಲ್ಲ. ಬೆಳಗ್ಗೆ ಕೆಲವೆಡೆ ನೀರು ಪೂರೈಕೆ ಮಾಡಲಾಗಿದೆ. ಆದರೆ, ಅದರೊಳಗೆ ಚರಂಡಿ ನೀರು ಮಿಶ್ರಗೊಂಡು, ದುರ್ನಾತ ಬರುತ್ತಿತ್ತು ಎಂದು ನಿವಾಸಿಗಳು ಆಕ್ರೋಶಗೊಂಡರು. 20 ದಿನಗಳಿಂದ ನೀರು ಪೂರೈಕೆ ಆಗದ ಕಾರಣ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

Intro:ಡೆಡ್ ಸ್ಟೋರೇಜ್ ಗೆ ಜಾರಿದ ಮೋಕಾದ ಶಿವಪುರ ಕೆರೆ
ಗಾಂಧಿನಗರ ವಾಟರ್ ಬೂಸ್ಟರ್ ಗೆ ಅಲ್ಲೀಪುರ ಕೆರೆಯಿಂದ ನೀರು ಪೂರೈಕೆ!
ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಯು ಡೆಡ್ ಸ್ಟೋರೇಜ್ ಗೆ ಜಾರಿದ ಪರಿಣಾಮ ಕಳೆದ ಇಪ್ಪತ್ತು ದಿನಗಳಾದ್ರೂ ನಗರ ವ್ಯಾಪ್ತಿಯ ಗಾಂಧಿನಗರ ವಾಟರ್ ಬೂಸ್ಟರ್ ಗೆ ನೀರೇ ಪೂರೈಕೆಯಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಮೋಕಾ ರಸ್ತೆಯಲ್ಲಿರುವ ಗಾಂಧಿನಗರ ವಾಟರ್ ಬೂಸ್ಟರ್
ಬಳಿ ಇಂದು ಬಸವೇಶ್ವರ ನಗರ ಸೇರಿದಂತೆ ಇತರೆ ಕಾಲೊನಿಯ ನಿವಾಸಿಗಳು ಜಮಾಯಿಸಿ ಕೆಲಕಾಲ ಮಹಾನಗರ ಪಾಲಿಕೆಯ ಎಂಜಿನಿಯರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬಳ್ಳಾರಿ ತಾಲೂಕಿನ ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಯಿಂದ ಇಪ್ಪತ್ತು ದಿನಗಳಾದ್ರೂ ನೀರು ಪೂರೈಕೆಯಾಗದ ಕಾರಣ, ಮನೆಗಳ ಸಿಂಟೆಕ್ ನಲ್ಲಿರುವ ನೀರನ್ನು ಬಳಕೆ ಮಾಡಲು ಹಿಂಜರಿಕೆಯಾಗುತ್ತದೆ. ಅಲ್ಲದೇ, ಈ ದಿನ ಬೆಳಿಗ್ಗೆ ಕೆಲವೆಡೆ ನೀರು ಪೂರೈಕೆ ಮಾಡಲಾಗಿದೆ. ಅದರೊಳಗೆ ಒಳಚರಂಡಿ ನೀರು ಮಿಶ್ರಿತಗೊಂಡ ಮನೆಗಳ ಸಿಂಟೆಕ್ ನಲ್ಲೂ ಕೂಡ ಚರಂಡಿ ದುರ್ನಾತ ಆವರಿಸಿದೆ ಎಂದು ಬಸವೇಶ್ವರ ನಗರ ನಿವಾಸಿ ಉಮಾಕಾಂತರೆಡ್ಡಿ ದೂರಿದ್ದಾರೆ.
ಕಳೆದ ಬಾರಿ ಈ ಹೊತ್ತಿಗಾಗಲೇ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಮೋಕಾ ಹೋಬಳಿ ಹೊರ ವಲಯದ ಶಿವಪುರ ಕೆರೆಯು ಭರ್ತಿಯಾಗಿತ್ತು.‌ ಆಗಾಗಿ, ಬಸವೇಶ್ವರ ನಗರ ಸೇರಿದಂತೆ ಈ ಭಾಗದ ಕಾಲೊ‌ನಿಗಳಿಗೆ ಸಮರ್ಪಕ ನೀರು ಪೂರೈಕೆ‌ ಮಾಡಲಾಗಿತ್ತು ಎಂದು ಪಾಲಿಕೆ ಸದಸ್ಯ ಸಿಂಧವಾಳ ಮಲ್ಲನಗೌಡ ತಿಳಿಸಿದ್ದಾರೆ.
ಆದರೀಗ ಮೋಕಾ ಕೆರೆಯು ಡೆಡ್ ಸ್ಟೋರೇಜ್ ಗೆ ಬಂದಿದೆ. ಹೀಗಾಗಿ, ಬಸವೇಶ್ವರ ನಗರ ಸೇರಿದಂತೆ ಇತರೆ ಕಾಲೊನಿಗಳಿಗೆ ಗಾಂಧಿನಗರ ವಾಟರ್ ಬೂಸ್ಟರ್ ನಿಂದ ಪೂರೈಕೆಯಾಗುತ್ತಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಅಲ್ಲೀಪುರ ಕೆರೆ ಮೂಲಕ ಈ ಬೂಸ್ಟರ್ ಗೆ ಪೈಪ್ ಲೈನ್ ಸಂಪರ್ಕ ಕಲ್ಪಿಸುವ ಯೋಜನೆ ಇತ್ತಾದರೂ, ನಕ್ಷತ್ರ ಹೊಟೇಲ್ ಮುಂಭಾಗದಲ್ಲಿ ಕಳಪೆ ಕಾಮಗಾರಿ ನಡೆದಿದ್ದರಿಂದ ಪೈಪ್ ಲೈನ್ ಸಂಪರ್ಕ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿತು. ಆದಾಗ್ಯೂ ಕೂಡ ಈವತ್ತು ಅಲ್ಲೀಪುರ ಕೆರೆಯಿಂದ ಟ್ರಯಲ್ ರನ್ ನೋಡಲಾ ಗಿದೆ. ಮುರ್ನಾಲ್ಕು ದಿನಗಳಕಾಲ ಈ ಸಮಸ್ಯೆ ಬಗೆಹರಿಯಲಿದೆ ಎಂದರು.




Body:ಕಳೆದ ಇಪ್ಪತ್ತು ದಿನಗಳಾದ್ರು ಗಾಂಧಿನಗರ ವಾಟರ್ ಬೂಸ್ಟರ್ ನಿಂದ ನೀರು ಪೂರೈಕೆಯಾಗಿಲ್ಲ. ಇದರಿಂದ ನಾನಾ ಕಾಲೊನಿ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಇಲ್ಲಿ ಒಂದ್ ರೀತಿ ನೀರಿನ ಹಾಹಾಕಾರ ಶುರುವಾಗಿದೆಯಂತಲೂ ಹೇಳಬಹುದು. ಈ ದಿನ ಅಲ್ಪಸ್ವಲ್ಪ ನೀರು ಪೂರೈಕೆ ಮಾಡಲಾಗಿದ್ದು, ಅದರಲ್ಲಿ ಚರಂಡಿ ನೀರು ಮಿಶ್ರಣವಾಗಿದೆ. ಕುಡಿಯಲು ಯೋಗ್ಯವಲ್ಲ ಎಂದು ಬಸವೇಶ್ವರ ನಗರ ಕಾಲೊನಿಯ ನಿವಾಸಿ ಶಿರಿಷಾ ದೂರಿದ್ದಾರೆ.
ಮೋಕಾ ಹೋಬಳಿ ಹೊರವಲಯದ ಶಿವಪುರ ಕೆರೆಯು
ಡೆಡ್ ಸ್ಟೋರೇಜ್ ಗೆ ಬಂದಿದ್ದು. ಪಂಪ್ ಮಾಡಲು ಆಗುತ್ತಿಲ್ಲ. ಆಗಾಗಿ, ಈವತ್ತು ಅಲ್ಲೀಪುರ ಕೆರೆಯಿಂದ ಟ್ರಯಲ್ ರನ್ ಮಾಡಲಾಗಿದ್ದು, ಗಾಂಧಿನಗರ ವಾಟರ್ ಬೂಸ್ಟರ್ ಗೆ ಅಲ್ಲೀಪುರ ಕೆರೆಯಿಂದ ನೀರು ಬಂದಿದೆ. ಈ ಬೂಸ್ಟರ್ ವ್ಯಾಪ್ತಿಯಲ್ಲಿ ಬರುವ ಎರಡೂ ಟ್ಯಾಂಕರ್ ಗಳನ್ನು ಭರ್ತಿ ಗೊಳಿಸಿ ಶೀಘ್ರವೇ ಕುಡಿಯುವ ನೀರನ್ನು ಪೂರೈಸಲು ಅಗತ್ಯಕ್ರಮ ಕೈಗೊಳ್ಳಲಾಗುವುದೆಂದು ಪಾಲಿಕೆ ಕಾರ್ಯ ಪಾಲಕ ಎಂಜಿನಿಯರ್ ಖಾಜಾ ಮಹಮ್ಮದ್ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ‌ಗಮನಿಸಿರಿ.
KN_BLY_1_WATER_PROBLEM_STORY_7203310

ಬೈಟ್ 1: ಪಾಲಿಕೆ ಸದಸ್ಯ ಸಿಂಧವಾಳ ಮಲ್ಲನಗೌಡ
ಬೈಟ್ 2: ಬಸವೇಶ್ವರ ನಗರ ನಿವಾಸಿ ಶಿರೀಷಾ
ಬೈಟ್ 3: ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಖಾಜಾ ಮಹಮ್ಮದ.



ETV Bharat Logo

Copyright © 2024 Ushodaya Enterprises Pvt. Ltd., All Rights Reserved.