ETV Bharat / state

ಜಗತ್ಪ್ರಸಿದ್ಧ ಹಂಪಿಯ ಸ್ಮಾರಕಗಳು ಇಂದಿನಿಂದ ಪ್ರವಾಸಿಗರಿಗೆ ಮುಕ್ತ

author img

By

Published : Jun 24, 2021, 7:13 AM IST

Hampi reopen after lockdown
ಹಂಪಿ ಭೇಟಿಗೆ ಅವಕಾಶ

ಕೋವಿಡ್ ಲಾಕ್​ ಡೌನ್​​ನಿಂದ ಪ್ರವಾಸಿಗರಿಗೆ ಬಾಗಿಲು ಮುಚ್ಚಿದ್ದ ಹಂಪಿಯ ಸ್ಮಾರಕಗಳು ಇಂದಿನಿಂದ ಮತ್ತೆ ವೀಕ್ಷಣೆಗೆ ಮುಕ್ತವಾಗಲಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು ಇಂದಿನಿಂದ (ಜೂ.24) ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ. ಈ ಬಗ್ಗೆ ಹಂಪಿ ಕೇಂದ್ರ ಪುರಾತತ್ವ ಇಲಾಖೆಯ ಅಧಿಕಾರಿ ಕಾಳಿಮುತ್ತು ಮಾಹಿತಿ ನೀಡಿದರು.

ಕೋವಿಡ್ ಕಾರಣ ಕಳೆದ ಒಂದೂವರೆ ತಿಂಗಳು ಹಂಪಿಯ ಐತಿಹಾಸಿಕ ಸ್ಮಾರಕಗಳಾದ ಕಮಲ್ ಮಹಲ್, ವಿಜಯವಿಠಲ ದೇವಸ್ಥಾನ, ಕಮಲಾಪುರದ ಮ್ಯೂಸಿಯಂ, ಬಳ್ಳಾರಿಯ ಕೋಟೆ ಸೇರಿದಂತೆ ಇತರೆ ಪ್ರಮುಖ ಸ್ಮಾರಕಗಳ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.

ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರವಾಸಿಗರ ಭೇಟಿಗೆ ಅನುಮತಿ ನೀಡಿದೆ.

ಇದನ್ನೂ ಓದಿ: ಹೊಸಪೇಟೆ : ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಇಲಾಖೆ ಅವಕಾಶ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.