ETV Bharat / state

ಕೊರೊನಾ ವಾರಿಯರ್​​ಗೂ ತಟ್ಟಿದ ಬೆಡ್​ ಕೊರತೆ ಬಿಸಿ: ಚಿಕಿತ್ಸೆಗಾಗಿ ವಿಜಯನಗರದಿಂದ ಕೊಪ್ಪಳಕ್ಕೆ ರವಾನೆ

author img

By

Published : May 11, 2021, 8:22 PM IST

ಕೊರೊನಾ ವಾರಿಯರ್​​ಗೂ ತಟ್ಟಿದ ಬೆಡ್​ ಕೊರತೆ ಬಿಸಿ
ಕೊರೊನಾ ವಾರಿಯರ್​​ಗೂ ತಟ್ಟಿದ ಬೆಡ್​ ಕೊರತೆ ಬಿಸಿ

ವಿಜಯನಗರ - ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ವೆಂಟಿಲೇಟರ್ ಬೆಡ್ ಇಲ್ಲದ ಕಾರಣ ಸೋಂಕಿತರನ್ನು ಪಕ್ಕದ ಜಿಲ್ಲೆಗೆ ರವಾನೆ ಮಾಡುವಂತಾಗಿದೆ. ನಾವು ಟ್ರೇಸಿಂಗ್ ಟೀಮ್​​ನಲ್ಲಿ ಕೆಲಸ ಮಾಡ್ತಿದ್ದೇವೆ. ನಮಗೆ ಪ್ರತ್ಯೇಕ ಬೆಡ್​​ಗಳನ್ನು ಚಿಕಿತ್ಸೆಗೆ ಮೀಸಲಿಡಿ ಎಂದು ಕೊರೊನಾ ವಾರಿಯರ್​​ ಜಾಕೀರ್​ ಮನವಿ ಮಾಡಿದ್ದಾರೆ.

ಹೊಸಪೇಟೆ (ವಿಜಯನಗರ): ನಗರದ ದೈಹಿಕ ಶಿಕ್ಷಕರೊಬ್ಬರು ವೆಂಟಿಲೇಟರ್ ಬೆಡ್​​​ಗಾಗಿ ಪರದಾಡಿದ್ದಾರೆ. ಕೊರೊನಾ ವಾರಿಯರ್​​​ ಆಗಿರುವ ನಿಸಾರ್ ಅಹಮ್ಮದ್​​ಗೆ ನಿನ್ನೆ ರಾತ್ರಿ ಕೊರೊನಾ ದೃಢವಾಗಿದ್ದು, ಬೆಡ್​ಗಾಗಿ ಪರದಾಡಿದ್ದಾರೆ.

ತಡರಾತ್ರಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ವೆಂಟಿಲೇಟರ್ ಬೆಡ್​ ಕೊರತೆ ಎದುರಾಗಿತ್ತು. ಈ ಹಿನ್ನೆಲೆ ಶಿಕ್ಷಕ ನಿಸಾರ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಖಾಸಗಿ ಆಸ್ಪತ್ರೆಯಲ್ಲೂ ಸೂಕ್ತ ಚಿಕಿತ್ಸೆ ದೊರಕದ ಹಿನ್ನೆಲೆ ಹೊಸಪೇಟೆ ತಾಲೂಕು ಆಡಳಿತ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಚಿಕಿತ್ಸೆಗಾಗಿ ರವಾನಿಸಿದೆ.

ಕೊರೊನಾ ವಾರಿಯರ್​​ಗೂ ತಟ್ಟಿದ ಬೆಡ್​ ಕೊರತೆ ಬಿಸಿ

ಈ ಕುರಿತು ಕೊರೊನಾ ವಾರಿಯರ್ ಜಾಕೀರ್ ಮಾತನಾಡಿ, ವಿಜಯನಗರ - ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ವೆಂಟಿಲೇಟರ್ ಬೆಡ್ ಇಲ್ಲದ ಕಾರಣ ಪಕ್ಕದ ಜಿಲ್ಲೆಗೆ ರವಾನೆ ಮಾಡುವಂತಾಗಿದೆ. ನಾವು ಟ್ರೇಸಿಂಗ್ ಟೀಮ್​​ನಲ್ಲಿ ಕೆಲಸ ಮಾಡ್ತಿದ್ದೇವೆ. ನಮಗೆ ಪ್ರತ್ಯೇಕ ಬೆಡ್​​ಗಳನ್ನು ಚಿಕಿತ್ಸೆಗೆ ಮೀಸಲಿಡಿ. ರಿಸ್ಕ್​​​ನಲ್ಲಿ ಕೆಲಸ ಮಾಡೋ ನಮಗೆ ಚಿಕಿತ್ಸೆ ಸಿಗದೇ ಇದ್ದರೆ ಕಷ್ಟ ಅಂತ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.