ETV Bharat / state

ಹೊರ ಹರಿವು ಹೆಚ್ಚಳ: ಕಂಪ್ಲಿ ಸೇತುವೆ ಸಂಚಾರ ನಿಷೇಧ

author img

By

Published : Sep 21, 2020, 4:51 PM IST

Comply bridge traffic is ban as a precautionary measure
ಕಂಪ್ಲಿ ಸೇತುವೆ ಸಂಚಾರ ನಿಷೇಧಿಸಿದ್ದರಿಂದ ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸುತ್ತಿರುವ ವಾಹನಗಳು.

ಮುನ್ನಚ್ಚರಿಕೆ ಕ್ರಮವಾಗಿ ಕಂಪ್ಲಿ ಸೇತುವೆಯ ಸಂಚಾರವನ್ನು ನಿಷೇಧಿಸಿದ್ದರಿಂದ ವಾಹನಗಳು ಬುಕ್ಕಸಾಗರ ಸೇತುವೆ ಮೂಲಕ ಸಂಚಾರ ಮಾಡುತ್ತಿವೆ.

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಕಂಪ್ಲಿ ಸೇತುವೆಯ ಸಂಚಾರವನ್ನು ನಿಷೇಧಿಸಲಾಗಿದೆ. ಹಾಗಾಗಿ ವಾಹನಗಳು ಬುಕ್ಕಸಾಗರ ಸೇತುವೆ ಮೂಲಕ ಸಂಚಾರ ಮಾಡುತ್ತಿವೆ.

Comply bridge traffic is ban as a precautionary measure
ಕಂಪ್ಲಿ ಸೇತುವೆ ಸಂಚಾರ ನಿಷೇಧಿಸಿದ್ದರಿಂದ ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸುತ್ತಿರುವ ವಾಹನಗಳು.

ಕಂಪ್ಲಿ ಸೇತುವೆಯು ಗಂಗಾವತಿ ಸಂಪರ್ಕಕ್ಕೆ ಕೊಂಡಿಯಾಗಿದೆ.‌ ಈಗ ಸೇತುವೆ ಹಂತಕ್ಕೆ ತಲುಪಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ನಿಷೇಧ ಮಾಡಲಾಗಿದೆ. ಪೊಲೀಸರು ಕಂಪ್ಲಿ ಸೇತುವೆ ಬಳಿ ಬ್ಯಾರಿಕೇಡ್​ಗಳನ್ನು ಹಾಕಿ ವಾಹನಳು ಸಂಚರಿಸದಂತೆ ನೋಡಿಕೊಳ್ಳುತ್ತಿದ್ದಾರೆ.

Comply bridge traffic is ban as a precautionary measure
ಕಂಪ್ಲಿ ಸೇತುವೆ ಸಂಚಾರ ನಿಷೇಧಿಸಿದ್ದರಿಂದ ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸುತ್ತಿರುವ ವಾಹನಗಳು.

ಕಂಪ್ಲಿ ಸೇತುವೆಯು ಇದೇ ರೀತಿ ಮುಳಗಡೆ ಹೊಂದಿದಾಗ ಬುಕ್ಕಸಾಗರ ಸೇತುವೆ ವಾಹನ ಸಂಚಾರಕ್ಕೆ ಆಸರೆ ಆಗಲಿದೆ. ಈಗಾಗಲೇ ವಾಹನಗಳು ಬುಕ್ಕಸಾಗರ ಸೇತುವೆ ಮೂಲಕ ಓಡಾಡಲು ಪ್ರಾರಂಭಿಸಿವೆ.

Comply bridge traffic is ban as a precautionary measure
ಕಂಪ್ಲಿ ಸೇತುವೆ ಸಂಚಾರ ನಿಷೇಧಿಸಿದ್ದರಿಂದ ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸುತ್ತಿರುವ ವಾಹನಗಳು.

ಇನ್ನು ನದಿಯ ಹರಿವು ಹೆಚ್ಚಾಗಿದ್ದರಿಂದ ಬುಕ್ಕಸಾಗರಕ್ಕೆ ಹೊಂದಿಕೊಂಡತಹ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಬಾಳೆ, ಕಬ್ಬು ಹಾಗೂ ಭತ್ತದ ಬೆಳೆಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಕಂಪ್ಲಿ ಸೇತುವೆ ಸಂಚಾರ ನಿಷೇಧಿಸಿದ್ದರಿಂದ ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸುತ್ತಿರುವ ವಾಹನಗಳು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.