ETV Bharat / state

ವಿಪಕ್ಷ ನಾಯಕರು ಹೇಳಿದಂತೆ ಸಭಾತ್ಯಾಗ: ಯತ್ನಾಳ್

author img

By ETV Bharat Karnataka Team

Published : Dec 8, 2023, 5:40 PM IST

Updated : Dec 8, 2023, 5:49 PM IST

mla-basanagowda-patil-yatnal-talks-on-bjp-protest-in-session
ವಿಪಕ್ಷ ನಾಯಕರ ತೀರ್ಮಾನದಂತೆ ಬಿಜೆಪಿ ಸಭಾತ್ಯಾಗ : ಶಾಸಕ​ ಯತ್ನಾಳ್

MLA Basanagowda Patil Yatnal reaction: ಸದನದಲ್ಲಿ ಸಭಾತ್ಯಾಗದ ಕುರಿತು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ: ವಿಪಕ್ಷ ನಾಯಕರು ಹೇಳಿದಂತೆ ಶಾಸಕರು ಕೇಳಬೇಕು. ಸಭಾತ್ಯಾಗ ಹಾಗೂ ಸದನದಲ್ಲಿ ಧರಣಿ ಮಾಡಿರುವುದು ಪ್ರತಿಪಕ್ಷ ನಾಯಕರ ತೀರ್ಮಾನದಂತೆ ಆಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು.

ಇದೇ ವೇಳೆ, ಬಿಜೆಪಿಯಲ್ಲಿ ವಿಪಕ್ಷ ನಾಯಕರ ವಿರುದ್ಧ ಅಸಮಾಧಾನ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಹೊಂದಾಣಿಕೆ ರಾಜಕೀಯದ ಬಗ್ಗೆ ನಾನು ಈ ಹಿಂದೆಯೂ ಹೇಳಿದ್ದೇನೆ. ಅದನ್ನು ಪುನರುಚ್ಚಾರಣೆ ಮಾಡುವ ಅವಶ್ಯಕತೆ ಇಲ್ಲ‌. ಹೊಂದಾಣಿಕೆ ರಾಜಕೀಯ ಇಲ್ಲ ಎಂದು ನಾನು ನಿರಾಕರಣೆ ಮಾಡುವುದಿಲ್ಲ ಎಂದರು.

ಮೌಲ್ವಿ ಕುಟುಂಬದ ಜೊತೆಗೆ ಭೂ ವ್ಯವಹಾರ ಆರೋಪದ ಪ್ರತಿಕ್ರಿಯಿಸಿದ ಶಾಸಕ, ಮೌಲ್ವಿಗೂ, ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. 50-60 ವರ್ಷದ ಹಿಂದಿನ ಲೀಸ್ ಪ್ರಾಪರ್ಟಿ ಅದು. ಮುನಿಸಿಪಲ್ ಆಸ್ತಿಯಾಗಿದ್ದು, ನನ್ನ ಆಸ್ತಿ ಅಲ್ಲ. ಅದರ ಮೂಲ ಮಾಲೀಕ ನಮ್ಮ ತಂದೆ ಆಗಿದ್ದರು. 55 ವರ್ಷಗಳ ಹಿಂದೆ ನಮ್ಮ ತಂದೆ ಜೊತೆಗೆ ನಾಲ್ಕೈದು ಜನ ಇದ್ದರು. ಈಗ ಅದಕ್ಕೂ ನನಗೂ ಸಂಬಂಧವಿಲ್ಲ, ಈ ಬಗ್ಗೆ ಎಲ್ಲವೂ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಆಸ್ತಿಯಲ್ಲಿ ನಾನು ಪಾರ್ಟನರ್​ಶಿಪ್​ ವ್ಯವಹಾರ ಮಾಡುತ್ತಿದ್ದೇನೆ ಎನ್ನುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಈ ಬಗ್ಗೆ ಎನ್.ಐ.ಎ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಿದ್ದೇನೆ. ನಿನ್ನೆ ಕೆಲ ಮಾಹಿತಿ ನೀಡಿದ್ದೇನೆ. ಇನ್ನಷ್ಟು ಮಾಹಿತಿ ಸಿಗುತ್ತಿದೆ‌ ಎಂದು ತಿಳಿಸಿದರು.

ಇದನ್ನೂ ಓದಿ: ಯತ್ನಾಳ್ ನಿಜವಾದ ಗುರಿ ಪ್ರಧಾನಿ ಮೋದಿ: ಸಿಎಂ ಸಿದ್ದರಾಮಯ್ಯ ತಿರುಗೇಟು

Last Updated :Dec 8, 2023, 5:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.