ETV Bharat / state

ಸಾಹುಕಾರ್​ ಸಿಡಿ ಪ್ರಕರಣ: ಸಿದ್ದರಾಮಯ್ಯ ಸವಾಲ್​ ಹಾಕಿದ ಕೆಲವೇ ಗಂಟೆಯಲ್ಲಿ ರಾಜೀನಾಮೆ ಪಡೆದ ಸರ್ಕಾರ!?

author img

By

Published : Mar 3, 2021, 1:27 PM IST

ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಿ ಎಂದು ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಸವಾಲ್​ ಹಾಕಿದ ಕೆಲವೇ ಗಂಟೆಯಲ್ಲಿ ಸಾಹುಕಾರ್​ ರಾಜೀನಾಮೆ ನೀಡಿದ್ದಾರೆ.

Ramesh Jarkiholi CD, Ramesh Jarkiholi CD row, Ramesh Jarkiholi CD row news, Congress leader Siddaramaiah urge resign, Congress leader Siddaramaiah urge resign from Jarkiholi, ರಮೇಶ್​ ಜಾರಕಿಹೊಳಿ ಸಿಡಿ ಅಲೆ, ರಮೇಶ್​ ಜಾರಕಿಹೊಳಿ ಸಿಡಿ ಅಲೆ ಸುದ್ದಿ, ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಿ, ಸರ್ಕಾರ ರಮೇಶ್ ಜಾರಕಿಹೊಳಿ ರಾಜೀನಾಮೆ ಪಡೆಯಲಿ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಆಗ್ರಹ, ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಸುದ್ದಿ,
ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈ ಕೂಡಲೇ ರಮೇಶ್ ಜಾರಕಿಹೊಳಿಯಿಂದ ರಾಜೀನಾಮೆ ಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್​ ಹಾಕಿದ್ದಾರೆ.

ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ನಿನ್ನೆ ಬಿಡುಗಡೆಯಾಗಿದೆ. ಮನುಷ್ಯ ಮೌಲ್ಯಗಳಿಗೆ ಬೆಲೆ ಕೊಡಬೇಕು ಅನ್ನೋದಾದ್ರೆ ರಾಜೀನಾಮೆ ಪಡಿಬೇಕು ಎಂದು ಸವಾಲ್​ ಹಾಕಿದ್ದರು.

ಇದು ರಾಷ್ಟ್ರಕ್ಕೆ ಗೊತ್ತಾಗಿರುವ ವಿಚಾರ. ಕೂಡಲೇ ಪೋಲಿಸರು ಎಫ್​ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸಂತ್ರಸ್ತ ಮಹಿಳೆ ಹಾಗೂ ದೂರುದಾರರ ಬಗೆಗೂ ಸರ್ಕಾರ ಚಿಂತನೆ ನಡೆಸಬೇಕು. ರಮೇಶ್ ಜಾರಕಿಹೊಳಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆ ಅವರನ್ನು ಕೂಡಲೇ ಸ್ಥಾನದಿಂದ ವಜಾಗೊಳಿಸಿ ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಹೇಳಿಕೆ ನೀಡಿ ಕೆಲವೇ ಗಂಟೆಯಲ್ಲಿ ಬೆಳಗಾವಿ ಸಾಹುಕಾರ್​ ರಾಜೀನಾಮೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.