ETV Bharat / state

ದುರ್ಗಾಮೂರ್ತಿ ನಿಮಜ್ಜನ ಮೆರವಣಿಗೆ: ದಾಂಡಿಯಾ ನೃತ್ಯಕ್ಕೆ ಸಖತ್​ ಸ್ಟೆಪ್​ ಹಾಕಿದ ಅಂಜಲಿ ನಿಂಬಾಳ್ಕರ್

author img

By

Published : Oct 15, 2021, 6:48 PM IST

MLA Anjali Nimbalkar made dandiya dance
ದಾಂಡಿಯಾ ನೃತ್ಯಕ್ಕೆ ಸಖತ್​ ಸ್ಟೆಪ್​ ಹಾಕಿದ ಅಂಜಲಿ ನಿಂಬಾಳ್ಕರ್

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಳಗಾ ಗ್ರಾಮದಲ್ಲಿ ದಸರಾ ನಿಮಿತ್ತ ದುರ್ಗಾದೇವಿ ಮೂರ್ತಿ ನಿಮಜ್ಜನ ಮೆರವಣಿಯಲ್ಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ದಾಂಡಿಯಾ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಬೆಳಗಾವಿ: ದುರ್ಗಾದೇವಿ ಮೂರ್ತಿ ನಿಮಜ್ಜನ ಮೆರವಣಿಯಲ್ಲಿ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ದಾಂಡಿಯಾ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ದಾಂಡಿಯಾ ನೃತ್ಯಕ್ಕೆ ಸಖತ್​ ಸ್ಟೆಪ್​ ಹಾಕಿದ ಅಂಜಲಿ ನಿಂಬಾಳ್ಕರ್

ಜಿಲ್ಲೆಯ ಖಾನಾಪುರ ತಾಲೂಕಿನ ಜಳಗಾ ಗ್ರಾಮದಲ್ಲಿ ದಸರಾ ನಿಮಿತ್ತ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇಂದು ಮೂರ್ತಿ ನಿಮಜ್ಜನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದರು.

ಮೆರವಣಿಗೆ ವೇಳೆ‌ ಮಹಿಳೆಯರು ದಾಂಡಿಯಾ ನೃತ್ಯ ಪ್ರದರ್ಶಿಸುತ್ತಿದ್ದರು. ಈ ವೇಳೆ, ಮಹಿಳೆಯರ ಜೊತೆ ಶಾಸಕಿ ಸಖತ್​ ಸ್ಟೆಪ್ಸ್​​​ ಹಾಕಿ ಸಂಭ್ರಮಿಸಿದರು.

ಇದನ್ನೂ ಓದಿ: Video.. ನಂದಿಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ.. ಅಭಿಮನ್ಯುವಿಗೆ ಕಾವೇರಿ - ಚೈತ್ರಾ ಸಾಥ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.