ETV Bharat / state

ಹಿರೇಬಾಗೇವಾಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 2 ಕೋಟಿ ರೂ. ಜಪ್ತಿ

author img

By

Published : Apr 5, 2023, 10:55 AM IST

ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಹಣ ಜಪ್ತಿ
ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಹಣ ಜಪ್ತಿ

ಖಾಸಗಿ ಬಸ್​​ನಲ್ಲಿ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ 2 ಕೋಟಿ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಬೆಳಗಾವಿ: ಇಂದು ಬೆಳಗ್ಗೆ ಜಿಲ್ಲೆಯ ಪೊಲೀಸರಿಂದ‌ ಮತ್ತೊಂದು ‌ಭರ್ಜರಿ‌ ಕಾರ್ಯಾಚರಣೆ ನಡೆದಿದ್ದು, ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಮುಂಬೈನಿಂದ ಬೆಳಗಾವಿ ‌ಮಾರ್ಗವಾಗಿ ಮಂಗಳೂರಿಗೆ ಹೊರಟಿದ್ದ ಬಸ್​ನಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿರೇಬಾಗೇವಾಡಿ ‌ಟೋಲ್​ ಬಳಿ ಪೊಲೀಸರು ದಾಳಿ ನಡಸಿದ್ದಾರೆ. 2 ಸಾವಿರ ಮುಖ ಬೆಲೆಯ ಒಟ್ಟು 2 ಕೋಟಿ ರೂ. ಕಂತೆ ಕಂತೆ ಹಣ ಜಪ್ತಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬೆಳಗಾವಿ ‌ಡಿಸಿ ನಿತೇಶ ಪಾಟೀಲ್​, ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುಂದಿನ ತನಿಖೆಯನ್ನು ಹಿರೇಬಾಗೇವಾಡಿ ಪೊಲೀಸರು ಕೈಗೊಂಡಿದ್ದಾರೆ.

ಕಾರಿನಲ್ಲಿ ಚಿನ್ನ ಬೆಳ್ಳಿ ಸಾಗಾಟ
ಕಾರಿನಲ್ಲಿ ಚಿನ್ನ ಬೆಳ್ಳಿ ಸಾಗಾಟ

ಖಾನಾಪುರ: ಸೂಕ್ತ ದಾಖಲೆ ಇಲ್ಲದೇ ಚಿನ್ನ, ಬೆಳ್ಳಿ ಆಭರಣಗಳನ್ನು ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿರುವ ನಂದಗಡ ಠಾಣೆಯ ಪೊಲೀಸರು 53.33 ರೂ. ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. 21,25,304 ರೂ. ಮೌಲ್ಯದ 395.7 ಗ್ರಾಂ ಚಿನ್ನ ಹಾಗೂ 19,08,420 ರೂ ಮೌಲ್ಯದ 28.065 ಕೆಜಿ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದ್ದು, ‌ಹಳಿಯಾಳದಿಂದ ಕಕ್ಕೇರಿಗೆ ಯಾವುದೇ ಬಿಲ್ ಇಲ್ಲದೇ ಕಾರಿನಲ್ಲಿ ಆಭರಣಗಳನ್ನು ಸಾಗಿಸಲಾಗುತ್ತಿತ್ತು. ಚಿನ್ನ, ಬೆಳ್ಳಿ ಆಭರಣ ಜೊತೆಗೆ 13 ಲಕ್ಷ ರೂ. ಮೌಲ್ಯದ ಕಾರು ಸೇರಿ 53,33,724 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ಕ್ಷೇತ್ರದಲ್ಲಿ ತಪಾಸಣೆ ವೇಳೆ ಈ ವಸ್ತುಗಳು ಪತ್ತೆಯಾಗಿವೆ. ಹಳಿಯಾಳ ಮೂಲದ ಧರ್ಮರಾಜ್ ಕುಟ್ರೆ ಎಂಬಾತನನ್ನು ಬಂಧಿಸಿರುವ ನಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅಬಕಾರಿ ಇಲಾಖೆಯಿಂದ ಮಧ್ಯ ವಶ -ನೆಲಮಂಗಲ: ಇತ್ತೀಚೆಗೆ ನಡೆದ ಘಟನಯೊಂದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಹಾಗೂ ಅಬಕಾರಿ ಉಪಾಧೀಕ್ಷ ಪರಮೇಶ್ವರಪ್ಪ ಮತ್ತು‌ ಸಿಬ್ಬಂದಿಗಳು ಗಸ್ತು‌ ತಿರುಗುವ ಸಮಯದಲ್ಲಿ ದಾಬಸ್​​ಪೇಟೆ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಲಾರಿ ತಡೆದು ಪರಿಶೀಲನೆ ನಡೆಸಿದಾಗ ಡ್ರೈವರ್ ಕ್ಯಾಬಿನ್​ನಲ್ಲಿ 18 ಲೀಟರ್ ಮದ್ಯ ಹಾಗೂ 30 ಸಾವಿರ ಲೀಟರ್​ನಷ್ಟು ಸ್ಪಿರಿಟ್ ಪತ್ತೆಯಾಗಿತ್ತು. ಯಾವುದೇ ನೈಜ ದಾಖಲೆಗಳು ಕಂಡುಬರದೇ ಇದ್ದ ಕಾರಣ ವಾಹನ ಸಮೇತ ಚಾಲಕ ಶ್ರೀಧರ್​ನನ್ನು ಪೊಲೀಸರು ವಶಕ್ಕೆ ಪಡೆದ್ದರು. ಮದ್ಯದ ಮೌಲ್ಯ 54 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು.

47 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ - ವಿಜಯಪುರ: ಕೆಲ ದಿನಗಳ ಹಿಂದೆ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಚಾಲಕನ್ನು ಅಬಕಾರಿ ಪೊಲೀಸರು ಬಂಧಿಸಿ ಮದ್ಯ ಜಪ್ತಿ ಮಾಡಿದ್ದರು. ಈ ಘಟನೆ ಚಡಚಣ ತಾಲೂಕಿನ ಧೂಳಖೇಡ ಚೆಕ್ ಪೋಸ್ಟ್‌ನಲ್ಲಿ ನಡೆದಿತ್ತು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ 47.38 ಲಕ್ಷ ರೂ ಮೌಲ್ಯದ 9,108 ಲೀಟರ್ ಬಿಯರ್ ಹಾಗೂ 10 ಲಕ್ಷ ಮೌಲ್ಯದ ಲಾರಿ ಸೇರಿ ₹57,38,851 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇಂಡಿ ವಲಯ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಚುನಾವಣಾ ಅಕ್ರಮ: ₹17 ಕೋಟಿ ನಗದು, 3 ಲಕ್ಷ ಲೀಟರ್ ಮದ್ಯ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.