ETV Bharat / state

ಮಾಂಸಾಹಾರಿ ಹೋಟೆಲ್​ನಿಂದ ಸಾಧು-ಸಂತರಿಗೆ ಅಪಮಾನ ಆರೋಪ: ಹಿಂದೂ ಸಂಘಟನೆಗಳ ಆಕ್ರೋಶ

author img

By

Published : Aug 13, 2021, 6:34 AM IST

ಮಾಂಸಾಹಾರಿ ಹೋಟೆಲ್​ನಿಂದ ಸಾಧು-ಸಂತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು, ಸಂಬಂಧಿಸಿದ ಹೋಟೆಲ್‌ನವರು 24 ಗಂಟೆಯೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

hindu-organizations
ಹೋಟೆಲ್​ನಿಂದ ಸಾಧು-ಸಂತರಿಗೆ ಅಪಮಾನ

ಬೆಳಗಾವಿ: ನಗರದ ಮಾಂಸಾಹಾರಿ ಹೋಟೆಲ್​ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್​ನಲ್ಲಿ ಸಾಧು-ಸಂತರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿರುವ ಹಿಂದೂ ಪರ ಸಂಘಟನೆಗಳು ಸಂಬಂಧಿಸಿದ ಹೋಟೆಲ್‌ನವರು 24 ಗಂಟೆಯೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿವೆ.

ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಮುಂದಾಗುವ ಅನಾಹುತಕ್ಕೆ ಹೋಟೆಲ್‌ನವರೇ ಹೊಣೆ ಆಗಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

hindu-organizations
ಹೋಟೆಲ್​ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿವಾದಿತ ಪೋಸ್ಟರ್‌

ಈ ಬಗ್ಗೆ ಡಿಸಿಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿರುವ ಕಾರ್ಯಕರ್ತರು ಹೋಟೆಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿವಾದಿತ ಜಾಹೀರಾತಿನ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಗರಂ ಆಗುತ್ತಿದ್ದಂತೆ ಹೋಟೆಲ್ ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೋಟೆಲ್ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.