ETV Bharat / state

ಯುಪಿಎಸ್​ಸಿ ಫಲಿತಾಂಶದಲ್ಲಿ ಮಿಂಚಿದ ಕಾರ್ಮಿಕನ ಮಗ: ರಾಯಬಾಗ ಬಡ ಪ್ರತಿಭೆಯ ಪ್ರಯತ್ನಕ್ಕೆ ಸಿಕ್ಕಿತು ಪ್ರತಿಫಲ

author img

By

Published : Aug 4, 2020, 7:33 PM IST

ಗಜಾನನ ಬಾಲೆ
ಗಜಾನನ ಬಾಲೆ

ಕುಡಚಿ ಪಟ್ಟಣದ ಗಜಾನನ ಬಾಲೆ ಎಂಬ 28 ವರ್ಷದ ಯುವಕ ಯುಪಿಎಸ್​ಸಿ ಪರೀಕ್ಷೆಯಲ್ಲಿ 663ನೇ ಱಂಕ್​ ಪಡೆದಿದ್ದಾರೆ. ಈ ಮೂಲಕ ಬೆಳಗಾವಿ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಚಿಕ್ಕೋಡಿ: ರಾಯಬಾಗ ತಾಲೂಕು ಕುಡಚಿ ಪಟ್ಟಣದ ಕಾರ್ಮಿಕನೋರ್ವನ ಮಗ ಇಂದು ಯುಪಿಎಸ್​ಸಿ ಪರೀಕ್ಷೆಯಲ್ಲಿ 663ನೇ ಱಂಕ್​ ಪಡೆದು ಸಾಧನೆ ಮಾಡಿದ್ದಾರೆ.

ಕುಡಚಿ ಪಟ್ಟಣದ ಗಜಾನನ ಬಾಲೆ ಎಂಬ 28 ವರ್ಷದ ಯುವಕ ಯುಪಿಎಸ್​ಸಿ ಪರೀಕ್ಷೆಯಲ್ಲಿ 663ನೇ ಱಂಕ್​​ ಪಡೆದಿದ್ದಾರೆ. ಇವರ ತಂದೆ ಶಂಕರ ಬಾಲೆ ಅವರು ಉಗಾರ ಶುಗರ್ ಕಾರ್ಖಾನೆಯಲ್ಲಿ ಇಲೆಕ್ಟ್ರಿಕಲ್ ಕಾರ್ಮಿಕರಾಗಿದ್ದಾರೆ. ತಾಯಿ ಸುಜಾತಾ ಬಾಲೆ ಗೃಹಿಣಿ ಆಗಿದ್ದು, ಇವರ ಹಿರಿಯ ಮಗ ಗಜಾನನ ಬಾಲೆ ಯುಪಿಎಸ್​ಸಿ ಪಾಸ್​ ಮಾಡಿದ್ದು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.

ಗಜಾನನ ಬಾಲೆ ಅವರು ಬಡ ಕುಟುಂಬದಲ್ಲಿ ಜನಿಸಿದ್ದು, ತಮ್ಮ ಎಸ್ಎಸ್ಎಲ್‌ಸಿ ವಿದ್ಯಾಭ್ಯಾಸವನ್ನು ಉಗಾರ ಪಟ್ಟಣದ ಶ್ರೀಹರಿ ವಿದ್ಯಾಲಯದಲ್ಲಿ ಪಡೆದಿದ್ದು, ಶೇ.93% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದರು. ಪಿಯುಸಿಯಲ್ಲಿ ವಿದ್ಯಾಭ್ಯಾಸವನ್ನು ಧಾರವಾಡ ಜೆಎಸ್ಎಸ್ ನಲ್ಲಿ ಶೇ. 87 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು. ಬಳಿಕ ಇಂಜನಿಯರಿಂಗ್ ವಿದ್ಯಾಭ್ಯಾಸವನ್ನು ಬೆಳಗಾವಿಯ ಜೆಐಟಿಯಲ್ಲಿ 77% ಅಂಕಗಳೊಂದಿಗೆ ಪೂರ್ಣಗೊಳಿಸಿದ್ದರು.

ಬೆಂಗಳೂರಿನಲ್ಲಿ ಗಜಾನನ ಐಎಎಸ್‌ ಕೋಚಿಂಗ್‌ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದರು. ಈ ಹಿಂದೆ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರು. 5ನೇ ಬಾರಿಗೆ ಯುಪಿಎಸ್ಸಿ ತೇರ್ಗಡೆಯಾಗುವ ಮೂಲಕ‌ ಹೆತ್ತವರ ಕನಸನ್ನು ನನಸು ಮಾಡಿದ್ದಾರೆ.

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದಿನಕ್ಕೆ 8 ರಿಂದ 10 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡಿದ್ದು, ಸತತವಾಗಿ ಮೂರ್ನಾಲ್ಕು ವರ್ಷ ವಿದ್ಯಾಭ್ಯಾಸ ಮಾಡಿದ್ದರ ಪ್ರತಿಫಲವಾಗಿ ಇಂದು ಯುಪಿಎಸ್​ಸಿ ಪಾಸ್ ಮಾಡಿರುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.