ETV Bharat / state

ಕಷ್ಟದಲ್ಲಿದ್ದಾಗ ಕಾಂಗ್ರೆಸ್ ಇನಾಮದಾರ್ ಕುಟುಂಬದ ಕೈ ಹಿಡಿಯಲಿಲ್ಲ: ಲಕ್ಷ್ಮೀ ಇನಾಮದಾರ್

author img

By

Published : Apr 7, 2023, 10:27 PM IST

ಮಾಜಿ ಸಚಿವ ಡಿ.ಬಿ.ಇನಾಮದಾರ್ ಅವರಿಗೆ ಹುಷಾರಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಕಾಂಗ್ರೆಸ್​ ನಮ್ಮನ್ನು ಕೈಬಿಟ್ಟಿದೆ ಎಂದು ಮಾಜಿ ಸಚಿವ ಡಿ.ಬಿ.ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್ ದೂರಿದರು.

ಮಾಜಿ ಸಚಿವ ಡಿ ಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್
ಮಾಜಿ ಸಚಿವ ಡಿ ಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್

ಮಾಜಿ ಸಚಿವ ಡಿ ಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್

ಬೆಳಗಾವಿ : ಡಿ.ಬಿ‌.ಇನಾಮದಾರ್ ಅವರು ಹುಷಾರಿಲ್ಲದೇ ಆಸ್ಪತ್ರೆಗೆ ದಾಖಲಾಗಿರುವ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಮ್ಮ ಕೈ ಹಿಡಿಯಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ನಾವು ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದು ಲಕ್ಷ್ಮೀ ಇನಾಮದಾರ್ ಹೇಳಿದರು.

ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 40 ವರ್ಷಗಳಿಂದ ಡಿ.ಬಿ.ಇನಾಮದಾರ್ ಪಕ್ಷ ಕಟ್ಟಿದ್ದಾರೆ. ಪಕ್ಷಕ್ಕೆ ಲಾಯಲಿಸ್ಟ್ ಆಗಿದ್ದರು. ಅವರಿಗೀಗ ಹುಷಾರಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಮ್ಮನ್ನು ಕೈ ಬಿಟ್ಟಿತು. ಇಂತಹ ಸಮಯದಲ್ಲಿ ಯಾರು ನಮ್ಮ ಕೈ ಹಿಡೀತಾರೆ ಅವರು ನಮಗೆ ದೇವರಾಗುತ್ತಾರೆ. ನಮ್ಮ ಕಾರ್ಯಕರ್ತರು, ಅಭಿಮಾನಿಗಳು ನಮ್ಮ ಬೆನ್ನಿಗೆ ನಿಂತಿದ್ದಾರೆ. ಅವರೇ ನಮಗೆ ದೇವರು ಎಂದರು.

ಎಲ್ಲ ರಾಜ್ಯ ನಾಯಕರನ್ನು ಭೇಟಿ ಆದಾಗಲೂ ಸರ್ವೇಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದಿದ್ದರು.‌ ಮೊದಲ ಲಿಸ್ಟ್‌ನಲ್ಲಿಯೇ ಅವರ ಹೆಸರು ಬರಬೇಕಾಗಿತ್ತು. ಅನಾರೋಗ್ಯದ ಕಾರಣದಿಂದ ಮೊದಲ ಲಿಸ್ಟ್‌ನಲ್ಲಿ​ ಟಿಕೆಟ್ ಬರಲಿಲ್ಲ ಎಂದಿದ್ದರು. ಡಿ.ಬಿ.ಇನಾಮದಾರ್ ಅವರ ಪರಿಸ್ಥಿತಿಯನ್ನು ಎಲ್ಲ ನಾಯಕರ ಮುಂದೆಯೂ ಹೇಳಿದ್ದೆವು. ಅಲ್ಲದೇ ಬೆಂಗಳೂರಿಗೆ ಹೋಗಿ ನಮ್ಮನ್ನೂ ಸಹ ಟಿಕೆಟ್‌ಗೆ ಕನ್ಸಿಡರ್ ಮಾಡಿ ಅಂತ ಹೇಳಿದ್ದೆವು. ಹೊಸ ಸರ್ವೇ ಮಾಡಿಸಿ, ಅದರಲ್ಲಿ ನಮ್ಮ ಹೆಸರು ಬಂದರೆ ಮಾತ್ರ ಟಿಕೆಟ್ ಕೊಡಿ ಇಲ್ಲವಾದ್ರೆ ಬೇಡ ಎಂದಿದ್ದೆವು. ಅದಕ್ಕೆ ರಾಜ್ಯ ನಾಯಕರೂ ಸಹ ಸಮ್ಮತಿ ಸೂಚಿಸಿದರು. ಆದರೆ ಹೊಸ ಸರ್ವೇ ಮಾಡಿಸಿದ್ದಾರೋ, ಇಲ್ಲವೋ ಗೊತ್ತಿಲ್ಲ ಎಂದು ಅಸಮಾಧಾನ ಹೊರ‌ಹಾಕಿದರು.

ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ: ಹೈಕಮಾಂಡ್​ನಿಂದ ಪೋನ್ ಬಂತು. ನನ್ನ ಕನ್ವಿನ್ಸ್ ಮಾಡಲು ಪ್ರಯತ್ನಿಸಿದರು. ಆಗ ನಾನು ಕಾರ್ಯಕರ್ತರು ಏನು ತೀರ್ಮಾನ ತಗೋತಾರೋ ಅದಕ್ಕೆ ಬದ್ಧ.‌ ಏನೇ ನಿರ್ಧಾರ‌ ಮಾಡಿದರೂ ಸಹ ಫ್ಯಾಮಿಲಿ ಮತ್ತು ಕಾರ್ಯಕರ್ತರ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದ್ದೆ‌. ಕಿತ್ತೂರು ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ. ಆದರೆ ಹೈಕಮಾಂಡ್​ಗೆ ತೋರಿಸಿದ್ದೇ ಬೇರೆ ಇದೆ. ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ ಘೋಷಣೆ ಮಾಡುತ್ತೇವೆ ಎಂದು ಲಕ್ಷ್ಮೀ ಇನಾಮದಾರ್ ಹೇಳಿದರು.

ಕಾರ್ಯಕರ್ತರು ಹೇಳಿದರೆ ಬಂಡಾಯವಾಗಿ ಸ್ಪರ್ಧೆ‌ ಮಾಡುತ್ತಿರಾ? ಎಂಬ ಪ್ರಶ್ನೆಗೆ, ಅದನ್ನು ನಾವು ಇನ್ನೂ ಡಿಸೈಡ್ ಮಾಡಿಲ್ಲ. ವಿಕ್ರಂ ಇನಾಮದಾರ್ ಅವರು ಎರಡೂು ದಿನಗಳಲ್ಲಿ ಬೆಂಗಳೂರಿನಿಂದ ಬರುತ್ತಾರೆ.‌ ಆಗ ಚರ್ಚಿಸಿ, ಆದಷ್ಟು ಬೇಗನೆ‌ ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತೇವೆ. ಡಿ.ಬಿ.ಇನಾಮದಾರ್ ಅವರನ್ನು ಬಿಟ್ಟು ನಮ್ಮ ಕುಟುಂಬದವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಲಕ್ಷ್ಮೀ ಹೇಳಿದರು.

ಬಾಬಾಸಾಹೇಬ ಪಾಟೀಲ ದೂರದ ಸಂಬಂಧಿ ಅಷ್ಟೇ: ಕಿತ್ತೂರು ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ ಪಾಟೀಲ, ಇನಾಮದಾರ್ ಅವರ ಅಳಿಯ‌ನಾ? ಎಂಬ ಮಾಧ್ಯಮಗಳ ಪ್ರಶ್ನೆಗೆ, ಅವರು ನಮ್ಮ ಮನೆಗೆ ಹೇಗೆ ಸಂಬಂಧಿಕರು ಎಂಬುದನ್ನು ಹೇಳಬಾರದು. ಆದರೂ ಹೇಳುವೆ. ಡಿ.ಬಿ ಇನಾಮದಾರ್ ‌ಅವರಿಗೆ ಮೂವರು ಸಹೋದರಿಯರು. ಹಿರಿಯ ಸಹೋದರಿ ಗೀತಾ ಅಮೆರಿಕದಲ್ಲಿದ್ದು, ಮೀನಾಕ್ಷಿ ಬೆಳಗಾವಿಯಲ್ಲಿ, ಲತಾ ಇಂಗ್ಲೆಂಡ್‌ನಲ್ಲಿದ್ದಾರೆ. ಈ ಮೂವರ ಮಗ ಬಾಬಾಸಾಹೇಬ ಅಲ್ಲ. ಡಿ.ಬಿ ಇನಾಮದಾರ್ ಅವರ ಪುತ್ರಿಯನ್ನೂ ಅವರಿಗೆ ಕೊಟ್ಟಿಲ್ಲ. ಅದೇಗೆ ಡಿ.ಬಿ ಇನಾಮದಾರ್ ಅವರಿಗೆ ಬಾಬಾಸಾಹೇಬ ಅಳಿಯ ಆಗುತ್ತಾರೆ ಗೊತ್ತಿಲ್ಲ. ಆದರೆ ಐದು‌ ತಲೆಮಾರಿನ ಹಿಂದೆ ಇನಾಮದಾರ್ ಕುಟುಂಬದ ಹೆಣ್ಣು ಮಗಳನ್ನು ಅವರ ಮನೆತನಕ್ಕೆ ಕೊಟ್ಟಿದ್ದರು. ದೂರದ ಸಂಬಂಧಿ‌ ಅಷ್ಟೇ. ಇದಷ್ಟೇ ನಮಗೆ ಗೊತ್ತು ಎಂದು ಲಕ್ಷ್ಮಿ ಇನಾಮದಾರ್ ಹೇಳಿದರು.

ಇದನ್ನೂ ಓದಿ : ದೇಶದ ಬೆಳವಣಿಗೆಗೆ ಸರ್ಕಾರಿ ಶಿಕ್ಷಣ ವ್ಯವಸ್ಥೆ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಸಚಿವೆ ನಿರ್ಮಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.