ETV Bharat / state

ಬೆಳೆಹಾನಿಗೆ ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

author img

By

Published : Dec 21, 2021, 6:58 PM IST

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಜಂಟಿ ಸರ್ವೆ ಮಾಡಿ ಅಪ್ಲೋಡ್ ಮಾಡಿ 40 ಗಂಟೆಗಳಲ್ಲಿ ಪರಿಹಾರ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ 980 ಕೋಟಿ ರೂ. ರೈತರ ರಿಗೆ ಪರಿಹಾರ ತಲುಪಿದೆ. ಈ ಬೆಳೆ ಹಾನಿ ದೊಡ್ಡ ಪ್ರಮಾಣದಲ್ಲಿ ಆಗಿದೆ. ರಾಜ್ಯ ಸರ್ಕಾರ ಬೆಳೆ ಹಾನಿ ಹಾಗೂ ಮನೆ ಬಿದ್ದವರಿಗೆ ಪರಿಹಾರ ನೀಡಿದ್ದೇವೆ. ಯಾವುದೇ ರೀತಿಯ ತೊಂದರೆ, ಕೊರತೆ ಆಗದ ರೀತಿ ಪ್ರವಾಹ ನಿರ್ವಹಣೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಬೆಳಗಾವಿ : ಪ್ರವಾಹ ಹಾಗೂ‌ ಅತಿವೃಷ್ಠಿಯಿಂದ ಬೆಳೆ ಹಾನಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಹೆಚ್ಚುವರಿ ಪರಿಹಾರ ಘೋಷಣೆ ಮಾಡಿದರು. ನಿಯಮ 69 ಅಡಿಯಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಈ ಬಾರಿ ರಾಜ್ಯಾವ್ಯಾಪಿ ಹೆಚ್ಚು ಮಳೆಯಾಗಿದೆ. ಬರ ಪೀಡಿತ ಜಿಲ್ಲೆಗಳಲ್ಲಿ ಕೆರೆ ಕಟ್ಟೆ ತುಂಬಿ ಒಡೆದು ಹೋಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರೈತರ ಬೆಳೆ ಹಾನಿಯಾಗಿದೆ. ಬೆಳೆ ಕೈಗೆ ಸಿಗಬೇಕು ಅನ್ನೋ ಸಂದರ್ಭದಲ್ಲಿ ಹಾನಿಯಾಗಿದೆ ಎಂದು ತಿಳಿಸಿದರು.

ಜಂಟಿ ಸರ್ವೆ ಮಾಡಿ ಅಪ್ಲೋಡ್ ಮಾಡಿ 40 ಗಂಟೆಗಳಲ್ಲಿ ಪರಿಹಾರ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ 980 ಕೋಟಿ ರೂ. ರೈತರರಿಗೆ ಪರಿಹಾರ ತಲುಪಿದೆ. ಈ ಬೆಳೆ ಹಾನಿ ದೊಡ್ಡ ಪ್ರಮಾಣದಲ್ಲಿ ಆಗಿದೆ. ರಾಜ್ಯ ಸರ್ಕಾರ ಬೆಳೆ ಹಾನಿ ಹಾಗೂ ಮನೆ ಬಿದ್ದವರಿಗೆ ಪರಿಹಾರ ನೀಡಿದ್ದೇವೆ. ಯಾವುದೇ ರೀತಿಯ ತೊಂದರೆ, ಕೊರತೆ ಆಗದ ರೀತಿ ಪ್ರವಾಹ ನಿರ್ವಹಣೆ ಮಾಡಿದ್ದೇವೆ. ಬೆಳೆ ಪರಿಹಾರ ಇನ್ನಷ್ಟು ಹೆಚ್ಚಿಗೆ ಆಗಬೇಕು ಎಂಬ ಚಿಂತನೆ ಇತ್ತು.

ಆ ಕಾರಣಕ್ಕೆ ನಷ್ಟಕ್ಕೆ ಪರಿಹಾರ ಹೆಚ್ಚಳ ಮಾಡಿದ್ದೇವೆ. ಒಣ ಬೇಸಾಯ ಭೂಮಿಗೆ 1 ಹೆಕ್ಟೇರ್​​​ಗೆ 6,800 ರೂಪಾಯಿ ಇತ್ತು. ಇದಕ್ಕೆ ರಾಜ್ಯ ಸರ್ಕಾರದಿಂದ 6,800 ಹೆಚ್ಚುವರಿ ಸೇರಿಸಲಾಗಿದೆ. ಇದೀಗ ಒಟ್ಟು ಪ್ರತೀ ಹೆಕ್ಟೇರ್ ಗೆ 13,600 ಪರಿಹಾರ ನೀಡಲಾಗುವುದು ಎಂದರು.

ನೀರಾವರಿ ಜಮೀನಿಗೆ ಪ್ರತೀ ಹೆಕ್ಟೇರ್​​​​ಗೆ 13,500 ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಅದಕ್ಕೆ ಹೆಚ್ಚುವರಿಯಾಗಿ 11,000 ರೂಪಾಯಿ ಸೇರಿಸುವ ಮೂಲಕ 25 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಇದರಿಂದ 12 ಲಕ್ಷದ 69 ಹೆಕ್ಟೇರ್ ಪ್ರದೇಶಕ್ಕೆ ಅನುಕೂಲ ಆಗುತ್ತದೆ ಎಂದರು.

ಈ ಕೂಡಲೇ ಪರಿಹಾರ ಬಿಡುಗಡೆ ಮಾಡುತ್ತೇವೆ. ನಮ್ಮ ಸರ್ಕಾರ ಸದಾ ಕಾಲ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ಸದನದ ಆಗ್ರಹ ಕೂಡ ಇತ್ತು. ಕೊವೀಡ್ ಇತಿಮಿತಿ ಒಳಗೆ ಪರಿಹಾರ ಕೊಡಲು ತೀರ್ಮಾನ ಮಾಡಿದ್ದೇವೆ. ಇದರಿಂದ 1,200 ಕೋಟಿ ಹೆಚ್ಚುವರಿ ರಾಜ್ಯ ಸರ್ಕಾರದ ಮೇಲೆ ಹೊರೆ ಬೀಳಲಿದೆ. ತೋಟಗಾರಿಕೆ ಜಮೀನಿಗೆ‌ ಪ್ರತಿ ಹೆಕ್ಟೇರ್​​​ಗೆ 18,000 ಸಾವಿರ ಇದೆ. ಅದಕ್ಕೆ ಅಧಿಕವಾಗಿ ಹತ್ತು ಸಾವಿರ ಸೇರಿಸಿ 28 ಸಾವಿರ ಕೊಡುತ್ತೇವೆ ಎಂದು ತಿಳಿಸಿದರು.

ಡಬಲ್‌ ಇಂಜಿನ್‌ ಸರ್ಕಾರದಿಂದ ಪರಿಹಾರ ಕಾರ್ಯಕ್ಕೆ ವೇಗ :

ಡಬಲ್ ಇಂಜಿನ್ ಸರ್ಕಾರದಿಂದ ನೆರೆ ಪರಿಹಾರ ಕಾರ್ಯಕ್ಕೆ ವೇಗ ಸಿಕ್ಕಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಸದನಕ್ಕೆ ತಿಳಿಸಿದರು. ನಿಯಮ 69 ಅಡಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ನಾಯಕರು ಪದೇ ಪದೆ ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಬಿಡಿ ಕಾಸು ಕೊಟ್ಟಿಲ್ಲ ಎಂದು ಟೀಕಿಸುತ್ತಿದ್ದಾರೆ.

ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪರಿಹಾರ ಕಾರ್ಯ ನೀಡಲು ಏಳೆಂಟು ತಿಂಗಳು ತಗೆದುಕೊಳ್ಳುತ್ತಿದ್ದರು. ಆದರೆ ನಾವು, ಕೇವಲ ನಷ್ಟದ ಬಗ್ಗೆ ಮಾಹಿತಿ ನೀಡಿದ ಎರಡು ದಿನಗಳಲ್ಲಿ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಿದ್ದೇವೆ. ಇದು ಡಬಲ್‌ ಇಂಜಿನ್‌ ಸರ್ಕಾರದ ಕೆಲಸ ಎಂದು ಟಾಂಗ್‌ ನೀಡಿದರು.

ಕೇಂದ್ರ ಸರ್ಕಾರಕ್ಕೆ ಪ್ರವಾಹದ ನಷ್ಟದ ವರದಿಯನ್ನು ಸಲ್ಲಿಸುವುದಕ್ಕೆ ಕಾಂಗ್ರೆಸ್‌ ಅವಧಿಯಲ್ಲಿ ತಿಂಗಳಗಟ್ಟಲೇ ಸಮಯ ತಗೆದುಕೊಳ್ಳುತ್ತಿದ್ದರು. ಆದರೆ, ನಾವು ಪ್ರವಾಹ ಬಂದ 15 ದಿನದಲ್ಲಿ ವರದಿ ಸಲ್ಲಿಸಿದ ಪರಿಣಾಮ ಕೇಂದ್ರ ತಂಡ ವೀಕ್ಷಣೆ ಮಾಡಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 920 ಕೋಟಿ ರು. ಹೆಚ್ಚು ಪರಿಹಾರ ನೀಡಲಾಗಿದೆ.

ಇದರಲ್ಲಿ ಬೆಳೆಹಾನಿ, ಜೀವಹಾನಿ, ಮನೆಹಾನಿ ಎಲ್ಲವೂ ಸೇರಿದೆ. ಇದರೊಂದಿಗೆ ಸಾರ್ವಜನಿಕ ಕಟ್ಟಡ, ರಸ್ತೆ ಸೇರಿದಂತೆ ಸರಕಾರಿ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಟ್ಟು 900 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಳಜಿ ಕೇಂದ್ರದಲ್ಲೂ ಉತ್ತಮ ಆಹಾರ:

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪ್ರವಾಹ ಸಮಯದಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದರು. ಇವುಗಳಲ್ಲಿ ಅನ್ನ-ಸಾಂಬಾರ ಅಥವಾ ಗಂಜಿ ನೀಡುತ್ತಿದ್ದರು. ಆದರೆ, ನಮ್ಮ ಸರ್ಕಾರ, ಬೆಳ್ಳಗಿನ ಉಪಹಾರಕ್ಕೆ ಪ್ರತ್ಯೇಕ ತಿಂಡಿ, ಊಟಕ್ಕೆ ಚಪಾತಿ, ರೊಟ್ಟಿ, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರ ನೀಡಲು ಕ್ರಮವಹಿಸಲಾಗಿದೆ. ಈ ಕೇಂದ್ರಗಳನ್ನು ಗಂಜಿ ಕೇಂದ್ರ ಎನ್ನುವ ಬದಲು ಕಾಳಜಿ ಕೇಂದ್ರ ಎಂದು ಮರು ನಾಮಕರಣ ಮಾಡುವ ಮೂಲಕ, ಎಲ್ಲರೂ ಬರುವಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ ಎನ್ನುವ ಆರೋಪವಿದೆ. ಆದರೆ, ದಾಖಲೆಗಳನ್ನು ನೋಡಿದರೆ, ಯಾರು ಎಷ್ಟು ಅನುದಾನ ನೀಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ 16.65 ಲಕ್ಷ ಕೋಟಿ ರು. ಬಜೆಟ್‌ ಇತ್ತು. ಆ ಸಮಯದಲ್ಲಿ ಎಸ್‌ಡಿಆರ್ ಎಫ್‌ ಫಂಡ್‌ ಕೊಟ್ಟಿದ್ದು, 90 ರಿಂದ 789 ಕೋಟಿ ರೂ. ಹಾಗೂ ಎನ್‌ಡಿಆರ್‌ ಎಫ್‌ ಅನುದಾನದಲ್ಲಿ 2,965 ಕೋಟಿ ರು. ನೀಡಲಾಗಿತ್ತು.

ಆದರೆ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ 34.83 ಲಕ್ಷ ಕೋಟಿ ರೂ. ಕೇಂದ್ರೀಯ ಬಜೆಟ್‌ನಲ್ಲಿ 3,823 ಕೋಟಿ ರೂ. ಎಸ್‌ಡಿಆರ್‌ ಎಫ್‌ ಹಾಗೂ ಎನ್‌ಡಿಆರ್‌ಎಫ್‌ನಲ್ಲಿ 10 ಸಾವಿರ ಕೋಟಿ ರು.ಗೂ ಹೆಚ್ಚು ಪರಿಹಾರ ನೀಡಲಾಗಿದೆ. ಇದನ್ನು ನೋಡಿದರೆ ನಾಲ್ಕು ಪಟ್ಟು ಹೆಚ್ಚುವರಿ ಪರಿಹಾರ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.