ETV Bharat / state

ವೃದ್ಧಾಶ್ರಮ ನಿವಾಸಿಗಳೊಂದಿಗೆ ಹೋಳಿಗೆ ಊಟ.. ಶಾಲುಗಳನ್ನು ನೀಡಿ ವಿಶೇಷತೆ ಮೆರೆದ ಬೆಳಗಾವಿ ಡಿಸಿ

author img

By

Published : May 2, 2022, 7:34 PM IST

belagavi-dc-hiremath-donates-shawls-to-old-age-home
ಸನ್ಮಾನದ ಶಾಲುಗಳನ್ನು ವೃದ್ಧಾಶ್ರಮಕ್ಕೆ ನೀಡಿದ ಬೆಳಗಾವಿ ಡಿಸಿ

ಬೆಳಗಾವಿಯ ಮನವಾಡಿಯಲ್ಲಿನ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನೂರಾರು ಶಾಲುಗಳನ್ನು ಆಶ್ರಮದ ನಿವಾಸಿಗಳಿಗೆ ವಿತರಿಸಿದರು.

ಬೆಳಗಾವಿ: ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ವಿವಿಧ ಸಂದರ್ಭಗಳಲ್ಲಿ ತಮಗೆ ಸನ್ಮಾನದ ರೂಪದಲ್ಲಿ ಬಂದಿದ್ದ ನೂರಾರು ಶಾಲುಗಳನ್ನು ವೃದ್ಧಾಶ್ರಮಕ್ಕೆ ನೀಡುವುದರ ಜೊತೆಗೆ ಆಶ್ರಮದ ಹಿರಿಯ ಜೀವಗಳೊಟ್ಟಿಗೆ ಊಟ ಮಾಡಿ ಕೆಲಸಮಯ ಕಳೆದರು.

ನಗರದ ಬಮನವಾಡಿಯಲ್ಲಿ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರ ವಿಜಯ್ ಮೋರೆ ಅವರು ನಡೆಸುತ್ತಿರುವ ಶಾಂತಾಯಿ ವೃದ್ಧಾಶ್ರಮಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ನೂರಾರು ಶಾಲುಗಳನ್ನು ಆಶ್ರಮದ ನಿವಾಸಿಗಳಿಗೆ ವಿತರಿಸಿದರು. ಜಿಲ್ಲಾಧಿಕಾರಿ, ಅವರ ಪತ್ನಿ ತನುಜಾ ಹಿರೇಮಠ ಕೂಡ ಆಶ್ರಮಕ್ಕೆ ತೆರಳಿದ್ದರು.

Belagavi DC Hiremath donates shawls to old age home
ಹೋಳಿಗೆ ತಯಾರಿಸುತ್ತಿರುವುದು

ಆಶ್ರಮ ನಿವಾಸಿಗಳೊಂದಿಗೆ ಹೋಳಿಗೆ ಊಟ: ಆಶ್ರಮಕ್ಕೆ ಬಂದ ಜಿಲ್ಲಾಧಿಕಾರಿ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಲ್ಲಿನ ನಿವಾಸಿಗಳು, ಅವರೊಂದಿಗೆ ಹೋಳಿಗೆ ಊಟ ಸವಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಅಡುಗೆ ಮನೆಗೆ ತೆರಳಿ ಅಡುಗೆ ಕೆಲಸದಲ್ಲಿ ಕೈಜೋಡಿಸಿದ ಜಿಲ್ಲಾಧಿಕಾರಿ ಪತ್ನಿ ತನುಜಾ ಅವರು ಸ್ವತಃ ಹೋಳಿಗೆ ಮಾಡುವ ಮೂಲಕ ಸರಳತೆ ಮೆರೆದರು.

ಆಶ್ರಮದ ಕಾರ್ಯ ಚಟುವಟಿಕೆಗಳ ಕುರಿತು ವೃದ್ಧಾಶ್ರಮದ ಅಧ್ಯಕ್ಷರಾದ ವಿಜಯ್ ಮೋರೆ ಅವರು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ದಾನಿಗಳ ನೆರವಿನಿಂದ ವೃದ್ಧಾಶ್ರಮವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಸಮಾಜದ ಅನೇಕ ಜನರ ಸಹಕಾರದಿಂದ ಎಲ್ಲವೂ ಉತ್ತಮ ರೀತಿಯಲ್ಲಿ ನಡೆದಿದೆ ಎಂದರು.

Belagavi DC Hiremath donates shawls to old age home
ಶಾಲುಗಳನ್ನು ವೃದ್ಧಾಶ್ರಮ ನಿವಾಸಿಗಳಿಗೆ ನೀಡಿದ ಜಿಲ್ಲಾಧಿಕಾರಿ

ವಿಜಯ್ ಮೋರೆ‌ ಹಾಗೂ ತಂಡದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಬದುಕಿನ ಸಂಧ್ಯಾಕಾಲದಲ್ಲಿ ಇರುವ ಹಿರಿಯರ ಆರೈಕೆ ಮಾಡುತ್ತಿರುವ ಶಾಂತಾಯಿ ಆಶ್ರಮದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಂದೆ, ಮಗಳ ಮೇಲೆ ಚಿರತೆ ದಾಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.