ETV Bharat / state

ಪಂಚ ಪೀಠಾಧೀಶಕ್ಕೆ ಬಸವೇಶ್ವರರು 800 ವರ್ಷಗಳ ಹಿಂದೆಯೇ ಬೆಂಬಲ ನೀಡಿದ್ದಾರೆ: ಕೇದಾರಪೀಠದ ಜಗದ್ಗುರು

author img

By

Published : Jul 6, 2022, 5:18 PM IST

Updated : Jul 6, 2022, 5:31 PM IST

Jagadguru of Kedarapeeth
ಕೇದಾರಪೀಠದ ಜಗದ್ಗುರು

ಸಂವಿಧಾನ ಪ್ರಕಾರ ಧರ್ಮವನ್ನು ಬೇರೆ ಮಾಡಲು ಅನೇಕ ಸಮಸ್ಯೆಗಳಿವೆ. ನಾವು ಪ್ರಯತ್ನ ಮಾಡಿ ನೋಡಿದ್ದೇವೆ. ಈಗ ಯಾರು ಮಾಡ್ತಿದ್ದಾರೆ ಅವರಿಗೆ ಬೇಡ ಅನ್ನಲ್ಲ. ಆದರೆ ಆ ಸರ್ಕಾರದ ಮುಂದೆ ಅವರು ಒಬ್ಬರು ಕಾಣಿಸಬಹುದು. ಸರ್ಕಾರಕ್ಕೆ ಮಾತ್ರ ಇಡೀ ದೇಶ ಕಾಣಿಸುತ್ತದೆ ಎಂದು ಕೇದಾರಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಳಗಾವಿ: ಭಾರತ ದೇಶದಲ್ಲಿ ಅನೇಕ ಧರ್ಮ, ಮತ, ಪಂಥಗಳಿವೆ. ಅದರಲ್ಲಿ ಹಿಂದುಯುಕ್ತ, ಸನಾತನ, ವೀರಶೈವ ಧರ್ಮವಿದೆ. 800 ವರ್ಷಗಳ ಹಿಂದೆಯೇ ಪಂಚ ಪೀಠಾಧೀಶ ಸ್ಥಾಪಿತವಾಗಿದ್ದು, ಅದಕ್ಕೆ ಬಸವೇಶ್ವರರು ಬೆಂಬಲ ನೀಡಿದ್ದಾರೆ ಎಂದು ಕೇದಾರಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

308 ಜಾತಿಗಳಿವೆ: ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸೇರಿ ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಕೇಂದ್ರದಲ್ಲಿ ನಾವು ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಹಿಂದೆ ಎಲ್‌.ಕೆ. ಅಡ್ವಾಣಿ, ಶಿವರಾಜ ಪಾಟೀಲ್ ಸಚಿವರಿದ್ದಾಗ ಚರ್ಚೆ ಮಾಡಿದ್ದೇವೆ‌. 308 ಜಾತಿಗಳಿವೆ. ಆ ಸಂವಿಧಾನದಲ್ಲಿ ಜಾತಿ ಮತ್ತು ಧರ್ಮಕ್ಕೆ ಆಸ್ಪದವಿಲ್ಲ. ನೀವು ಪರಂಪರೆಯಿಂದ ಮಾಡ್ತಿದ್ರೆ, ಅದಕ್ಕೆ ಶಾಸನದ ವಿರೋಧ ಇದೆ ಎಂದರು.

ಕೇದಾರಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ

ಕೇಂದ್ರದಲ್ಲಿ ಶಂಕರರಾವ್ ಚೌಹಾನ್ ಗೃಹಮಂತ್ರಿ ಇದ್ದಾಗ 15 ದಿವಸ ದೆಹಲಿಯಲ್ಲಿ ಬೀಡುಬಿಟ್ಟಿದೆ. ಅಂತ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಂತಾ ಇರುತ್ತದೆ. ಅಲ್ಲಿಂದ ತಯಾರಾಗಿ ಲೋಕಸಭೆ, ಮಂತ್ರಿಮಂಡಲದಲ್ಲಿ ಪಾಸ್ ಆದಾಗ ಮೀಸಲಾತಿ ಸಿಗುತ್ತದೆ. ಇದು ಮುಖ್ಯಮಂತ್ರಿಗಳ ಕೈಯಲ್ಲೂ ಇಲ್ಲ. ರಾಜ್ಯ ಸರ್ಕಾರದ ಕೈಯಲ್ಲೂ ಇಲ್ಲ. ಕೇಂದ್ರ ಸರ್ಕಾರದಲ್ಲಿರುತ್ತದೆ. ಹೀಗಾಗಿ ನಮ್ಮ ಪರಂಪರೆ ಏನಿದೆ ಅದನ್ನ ಹಿಡಿದುಕೊಂಡು ಹೋಗಬೇಕು ಎಂದರು.

ವಿಚಾರ ಮಾಡಿ ಹೆಜ್ಜೆ ಇಡಿ: ಆ ಪರಂಪರೆಯಲ್ಲೇ ಇದೆಲ್ಲ ಬಂದಿದೆ. ಪರಂಪರೆ ಪಾಲನೆ ಮಾಡುವಾಗ ಸರ್ಕಾರ ಅಡ್ಡ ಬರೋದಿಲ್ಲ. ಸಂವಿಧಾನ ಪ್ರಕಾರ ಸೆಪರೇಟ್ ಮಾಡಲು ಅನೇಕ ಸಮಸ್ಯೆಗಳಿವೆ. ನಾವು ಪ್ರಯತ್ನ ಮಾಡಿ ನೋಡಿದ್ದೇವೆ. ಈಗ ಯಾರು ಮಾಡ್ತಿದ್ದಾರೆ ಅವರಿಗೆ ಬೇಡ ಅನ್ನಲ್ಲ. ಆದ್ರೆ ಆ ಸರ್ಕಾರದ ಮುಂದೆ ಅವರು ಒಬ್ಬರು ಕಾಣಿಸಬಹುದು. ಸರ್ಕಾರಕ್ಕೆ ಮಾತ್ರ ಇಡೀ ದೇಶ ಕಾಣಿಸುತ್ತದೆ. ಇದನ್ನು ವಿಚಾರ ಮಾಡಿ ಅವರು ಮುಂದೆ ಹೆಜ್ಜೆ ಇಡಬೇಕು ಎಂದು ಹೇಳಿದರು.

ಈಗ ವೀರಶೈವ ಮತ್ತು ಲಿಂಗಾಯತ ಪ್ರಶ್ನೆ ಬಂದಿದೆ. 2017ರಲ್ಲಿ ಮೋದಿ ಬಂದ ವೇಳೆ ನಾವು ಪತ್ರ ಕೊಟ್ಟಿದ್ದೇವೆ. ಭಾರತ ದೇಶದಲ್ಲಿ ಅನೇಕ ಧರ್ಮ, ಮತ, ಪಂಥಗಳಿವೆ. ಅದರಲ್ಲಿ ಹಿಂದುಯುಕ್ತ, ಸನಾತನ, ವೀರಶೈವ ಧರ್ಮವಿದ್ದು, ಪಂಚ ಪೀಠಾಧೀಶ ಸ್ಥಾಪಿತವಾಗಿದೆ. ಅದಕ್ಕೆ ಬಸವೇಶ್ವರರು 800 ವರ್ಷಗಳ ಹಿಂದೆಯೇ ಬೆಂಬಲ ನೀಡಿದ್ದಾರೆ ಎಂದರು.

ಕಾನೂನು ದೃಷ್ಟಿಯಿಂದ ಕಷ್ಟ: ಅದಕ್ಕಾಗಿ ಅಲ್ಪಸಂಖ್ಯಾತ ಜೈನ, ಬೌದ್ಧ, ಸಿಖ್ ಹಿಂದುಯಕ್ತ ಇದ್ದಲ್ಲಿ ಕೊಡಲು ಆಗಿತ್ತು ಎಂದರೆ ನೀವು ಕೊಡಬಹುದು ಅಂತಾ ನಾವು ಮೋದಿಗೆ ಪತ್ರ ಕೊಟ್ಟಿದ್ದೇವೆ. ಪ್ರಯತ್ನ ಮಾಡುವವರಿಗೆ ನಾವು ಬೇಡ ಅನ್ನಲ್ಲ. ಆದ್ರೆ, ಕಾನೂನು ದೃಷ್ಟಿಯಿಂದ ಕಷ್ಟ ಅಂತಾ ನಮಗನಿಸುತ್ತದೆ ಎಂದು ಬೆಳಗಾವಿಯಲ್ಲಿ ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನೆಗೆ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇದಾರದಿಂದ ಹೆಬ್ಬಾಳ್ಕರ್ ಮನೆಗೆ ಬಂದಿದ್ದೇವೆ. ನಮ್ಮನ್ನು ಕೇದಾರನಾಥ ಕಳುಹಿಸಿಕೊಟ್ಟಿದ್ದಾನೆ. ನಾಲ್ಕು ತಿಂಗಳುಗಳ ಕಾಲ ಮಾತ್ರ ನಾವು ಕೇದಾರನಾಥದಲ್ಲಿ ಇರಬೇಕಾಗುತ್ತದೆ. ಆದ್ರೆ, ನಂತರ ಆರು ತಿಂಗಳ ಹೊರಗಡೆ ನಿಯೋಜಿತ ಕಾರ್ಯಕ್ರಮಗಳು ಆಗುತ್ತವೆ. 21ರಿಂದ ಧರ್ಮದ ಕಾರ್ಯಕ್ರಮ ಮಾಡಿದ್ದೇವೆ. ಲಕ್ಷ್ಮಿ ಹೆಬ್ಬಾಳ್ಕರ್ ಕೇದಾರನಾಥಕ್ಕೆ ಬಂದು ದರ್ಶನ‌ ಭಕ್ತಿಯಿಂದ ಅರ್ಪಣೆ ಮಾಡಿದ್ದಾರೆ. ಹೀಗಾಗಿ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಮಳೆ ಹಾನಿ ಪ್ರದೇಶಗಳಲ್ಲಿ ತುರ್ತು ಕ್ರಮ ಕೈಗೊಳ್ಳಿ.. ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜಕೀಯ ಭವಿಷ್ಯ ಹೇಳುವವರು ರಾಜಕಾರಣಿಗಳು. ನಾವು ಧರ್ಮದ ಭವಿಷ್ಯ ಹೇಳುವವರು. ಹಾಗಾಗಿ ನಾವು ಧರ್ಮಗುರುಗಳು. ಕರ್ನಾಟಕ ರಾಜಕೀಯ ಬಗ್ಗೆ ನನಗೆ ಮಾಹಿತಿ ಇಲ್ಲ. ಹೀಗಾಗಿ ಹೆಬ್ಬಾಳ್ಕರ್ ಮನೆಗೆ ಬಂದಿದ್ದೇನೆ. ಅವರ ಜೀವನದ ಕೊನೆಯ ಹಂತದವರೆಗೂ ಒಳ್ಳೆಯದು ಆಗಲಿ ಅಂತಾ ಆಶೀರ್ವಾದ ಮಾಡಿದರು. ಇದೇ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಆಗ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಡಿದ್ಮೇಲೆ ಹೇಳ್ತೇವಿ. ಮಾಡುವ ಮುಂಚೆ ಹೇಳುವುದಿಲ್ಲ. ಮೊದಲೇ ಘೋಷಣೆ ಮಾಡೋದಿಲ್ಲ. ಕೆಲಸ ಪೂರ್ಣ ಆದ್ಮೇಲೆ ಹೇಳ್ತೇವೆ ಎಂದರು.

Last Updated :Jul 6, 2022, 5:31 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.