ETV Bharat / state

ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದ ಸಭೆಯನ್ನು ಸಿಎಂ ಬೊಮ್ಮಾಯಿ‌ ಬಹಿಷ್ಕರಿಸಬೇಕು: ವಾಟಾಳ್ ನಾಗರಾಜ್​

author img

By

Published : Dec 14, 2022, 7:06 AM IST

KN_BNG_02
ವಾಟಾಳ್ ನಾಗರಾಜ್

ಗಡಿ ವಿವಾದ ಕುರಿತು ಕೇಂದ್ರ ಸಚಿವ ಅಮಿತ್​ ಶಾ ಇಂದು ಕರ್ನಾಟಕ ಹಾಗು ಮಹಾರಾಷ್ಟ್ರ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ.

ಗಡಿ ವಿವಾದ ಬಗ್ಗೆ ವಾಟಾಳ್ ನಾಗರಾಜ್​ ಪ್ರತಿಕ್ರಿಯೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಮಹಾರಾಷ್ಟ್ರ ಹಾಗೂ ಕರ್ನಾಟಕ ಸಿಎಂಗಳ ಸಂಧಾನ ಸಭೆಯನ್ನು ಸಿಎಂ ಬೊಮ್ಮಾಯಿ ಬಹಿಷ್ಕರಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರ ಸಭೆಗೆ ನಮ್ಮ ಸಿಎಂ ಹೋಗುವ ಅಗತ್ಯ ಇಲ್ಲ. ಗಡಿ ವಿಚಾರವಾಗಿ ಯಾವುದೇ ರಾಜಿ ಇಲ್ಲ. ರಾಜಿ ಸಂಧಾನ ಮುಗಿದು ಹೋಯಿತು. ಮಹಾಜನ್ ವರದಿ ಬಂದ ಬಳಿಕ ಎಲ್ಲಾ ಮುಗಿಯಿತು. ಹೆಜ್ಜೆ ಹೆಜ್ಜೆಗೂ ಅಕ್ರಮ ಮಾಡುತ್ತಿರುವವರು ಮಹಾರಾಷ್ಟ್ರದವರು, ಉದ್ಧವ್ ಠಾಕ್ರೆ, ಶಿವಸೇನೆ, ಎನ್​ಸಿಪಿ, ಶಿಂಧೆ, ಪವಾರ್. ಇವರೆಲ್ಲ ತಮ್ಮ ರಾಜಕೀಯಕ್ಕೆ ಕರ್ನಾಟಕದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್​ಗೆ ಕೇಸ್ ಹಾಕಿರುವುದೇ ಅಕ್ರಮ. ಅವರು ಹಾಕಬಾರದಿತ್ತು. ಹಾಗಿದ್ದರೆ ಮಹಾಜನ್ ವರದಿ ಏಕೆ ಬೇಕಿತ್ತು. ಸುಪ್ರೀಂ ಕೋರ್ಟ್ ಈ ಅರ್ಜಿಗೆ ಮನ್ನಣೆ ಕೊಡಬಾರದು. ರಾಜ್ಯ ಸರ್ಕಾರ ಸಮರ್ಪಕವಾಗಿ ವಾದ ಮಂಡಿಸಿ ಅರ್ಜಿ ವಜಾಗೊಳ್ಳುವಂತೆ ಮಾಡಬೇಕು. ಈ ತರ ಮಾಡಿದರೆ ನಾಳೆ ಕಾವೇರಿ ವಿಚಾರಕ್ಕೆ ಬರುತ್ತಾರೆ, ಕೃಷ್ಣಾ ನದಿ ವಿಚಾರವಾಗಿ ಬರುತ್ತಾರೆ. ಅಮಿತ್ ಶಾ ಸಭೆಯನ್ನು ಸಿಎಂ ಬಹಿಷ್ಕರಿಸಬೇಕು. ಸಭೆಗೆ ಏಕೆ ಹೋಗುತ್ತೀರಿ. ಸಭೆಯ ಅಜೆಂಡಾ ಏನು?. ಗಡಿ ವಿಚಾರವಾಗಿ ಎಲ್ಲವೂ ತೀರ್ಮಾನವಾಗಿದೆ. ಈಗ ಅಧಿವೇಶನದಲ್ಲಿ ಆಯೋಗವನ್ನು ಒಪ್ಪುವುದು ಒಂದೇ ಮಾರ್ಗವಾಗಿದೆ ಎಂದು ವಾಟಾಳ್​ ಹೇಳಿದರು.

ಸಿಎಂ ಈಗ ಚಾಮರಾಜನಗರಕ್ಕೆ ಹೋಗಿದ್ದು ಸರಿಯಲ್ಲ: ಸಿಎಂ ಬೊಮ್ಮಾಯಿ ಅವರು ಈಗ ಚಾಮರಾಜನಗರ ಹೋಗಿದ್ದಾರೆ. ಈಗ ಹೋಗಿರೋದು ಸರಿಯಲ್ಲ. ಅಲ್ಲಿ ಅನುದಾನ ಬಿಡುಗಡೆ ಮಾಡ್ತೇವೆ ಎಂದಿದ್ದಾರೆ. ಒಂದು ವರ್ಷ ಮುಂಚೆ ಸಿಎಂ ಚಾಮರಾಜನಗರ ಹೋಗಬೇಕಿತ್ತು‌ ಎಂದು ಇದೇ ವೇಳೆ ಕಿಡಿಕಾರಿದರು. ಬೊಮ್ಮಾಯಿ‌ ಸರ್ಕಾರಕ್ಕೆ ಕೇವಲ ಐದು ತಿಂಗಳು ಉಳಿದಿದೆ. ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿ ಚಾಮರಾಜನಗರ ಗುರಿ ಮಾಡಬೇಡಿ ಎಂದು ವಾಟಾಳ್​ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಮೇಲಿದ್ದ ನಿರೀಕ್ಷೆಗಳೆಲ್ಲ ಸುಳ್ಳಾದವು: ಹೆಚ್.ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.