ETV Bharat / state

ಡ್ರೈವಿಂಗ್ ಲೈಸನ್ಸ್ ಸಂಬಂಧಿತ ಸೇವೆಗಳು ಇನ್ಮುಂದೆ ಆನ್​​ಲೈನ್​​ನಲ್ಲಿ : ಕಚೇರಿಗೆ ಇಲ್ಲ ಭೇಟಿ

author img

By

Published : Feb 2, 2022, 10:35 AM IST

ಡ್ರೈವಿಂಗ್ ಲೈಸನ್ಸ್
ಡ್ರೈವಿಂಗ್ ಲೈಸನ್ಸ್

ಸೇವೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಅಂತರ್ಜಾಲದ ಮೂಲಕ ಆನ್‌ಲೈನ್‌ನಲ್ಲಿ ಇ - ಕೆವೈಸಿ ಮೂಲಕ ಅರ್ಜಿ ಸಲ್ಲಿಸಿ ಸಂಪರ್ಕರಹಿತ ಸೇವೆ ಪಡೆಯಲು ಸಾರಥಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಸಾರಿಗೆ ಇಲಾಖೆಗೆ ಸಂಬಂಧಿತ ಸೇವೆಗಳು ಒಂದೊಂದಾಗಿ ಆನ್​​​​ಲೈನ್ ಮೋಡ್​​ಗೆ ಬರುತ್ತಿವೆ. ಚಾಲನಾ ಅನುಜ್ಞಾ ಪತ್ರ( ಡ್ರೈವಿಂಗ್ ಲೈಸನ್ಸ್) ಸಂಬಂಧಿತ ಸೇವೆಗಳನ್ನು ಸಂಪರ್ಕ ರಹಿತ ಮಾಡಲು ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ಡ್ರೈವಿಂಗ್ ಲೈಸನ್ಸ್ ನವೀಕರಣ, ನಕಲು ಡ್ರೈವಿಂಗ್ ಲೈಸನ್ಸ್, ವಿಳಾಸ ಬದಲಾವಣೆ ಮತ್ತು ಹೆಸರು ಬದಲಾವಣೆ ಸೇವೆಗಳನ್ನು ಸಂಪರ್ಕ ರಹಿತ ಗೊಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇವೆಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಅಂತರ್ಜಾಲದ ಮೂಲಕ ಆನ್‌ಲೈನ್‌ನಲ್ಲಿ ಇ - ಕೆವೈಸಿ ಮೂಲಕ ಅರ್ಜಿ ಸಲ್ಲಿಸಿ ಸಂಪರ್ಕರಹಿತ ಸೇವೆ ಪಡೆಯಲು ಸಾರಥಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಮಸ್ಯೆ ಇದ್ದರೆ ಮಾತ್ರ ಕಚೇರಿಗೆ ಭೇಟಿ : ಅರ್ಜಿಯಲ್ಲಿ ತಪ್ಪು ಮಾಹಿತಿ ಒದಗಿಸಿರುವುದು ಕಂಡು ಬಂದರೆ ಮತ್ತು ಸೇವೆ ಪಡೆಯಲು ತೊಂದರೆಯಾದ ಪಕ್ಷದಲ್ಲಿ ಮಾತ್ರ ಅರ್ಜಿದಾರರು ಕಚೇರಿಗೆ ಭೇಟಿ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.