ETV Bharat / state

ದಿಲ್ಲಿಯಿಂದ ಆಗಮಿಸಿದ ಡಿಕೆಶಿ ಭೇಟಿಯಾದ ನಾಯಕರು; ಸುದೀರ್ಘ ರಾಜಕೀಯ ಚರ್ಚೆ

author img

By

Published : Nov 7, 2020, 7:42 PM IST

The leader met DKShi who arrived from Delhi: political discussion
ದಿಲ್ಲಿಯಿಂದ ಆಗಮಿಸಿದ ಡಿಕೆಶಿ ಭೇಟಿಯಾದ ನಾಯಕರು; ಸುದೀರ್ಘ ರಾಜಕೀಯ ಚರ್ಚೆ

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ದೆಹಲಿಯಿಂದ ಹಿಂತಿರುಗಿದ್ದು, ವಿವಿಧ ಮುಖಂಡರು ಅವರನ್ನು ಭೇಟಿಮಾಡಿ ಸಮಾಲೋಚನೆ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಹಾಗೂ ತಳಮಟ್ಟದ ಪಕ್ಷ ಸಂಘಟನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಶಾಸಕರು ಚರ್ಚಿಸಿದರು.

ಬೆಂಗಳೂರು: ದಿಲ್ಲಿಗೆ ಹೋಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಂದು ವಾಪಸಾಗಿದ್ದು, ಅವರನ್ನು ವಿವಿಧ ಮುಖಂಡರು ಭೇಟಿಮಾಡಿ ಸಮಾಲೋಚನೆ ನಡೆಸಿದ್ದಾರೆ.

The leader met DKShi who arrived from Delhi: political discussion
ದಿಲ್ಲಿಯಿಂದ ಆಗಮಿಸಿದ ಡಿಕೆಶಿ ಭೇಟಿಯಾದ ನಾಯಕರು; ಸುದೀರ್ಘ ರಾಜಕೀಯ ಚರ್ಚೆ

ತಮಿಳುನಾಡಿನ ಥಳಿ ಶಾಸಕ ಪ್ರಕಾಶ್ ಹಾಗೂ ಹೊಸೂರು ಶಾಸಕ ಸತ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶನಿವಾರ ಸಂಜೆ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಹಾಗೂ ತಳಮಟ್ಟದ ಪಕ್ಷ ಸಂಘಟನೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಶಾಸಕರು ಚರ್ಚಿಸಿದರು.

The leader met DKShi who arrived from Delhi: political discussion
ದಿಲ್ಲಿಯಿಂದ ಆಗಮಿಸಿದ ಡಿಕೆಶಿ ಭೇಟಿಯಾದ ನಾಯಕರು; ಸುದೀರ್ಘ ರಾಜಕೀಯ ಚರ್ಚೆ

ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾದ ಬಳಿಕ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಪಡೆ ರಚಿಸುವ ಕಾರ್ಯದಲ್ಲಿ ನಿರತರಾಗಿರುವ ಶಿವಕುಮಾರ್ ಇಂದು ಆಗಮಿಸಿದ್ದ ತಮಿಳುನಾಡಿನ ಶಾಸಕರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೇ ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನಿಯೋಜಿಸಲಾಗಿದೆ. ಪಕ್ಕದ ರಾಜ್ಯದಲ್ಲಿ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆ ಸಂದರ್ಭ ಕೈಗೊಳ್ಳಬಹುದಾದ ಪ್ರಚಾರ ಹಾಗೂ ಮಾರ್ಗದರ್ಶನದ ವಿಚಾರದಲ್ಲಿ ಸಾಕಷ್ಟು ಸಲಹೆ ಸೂಚನೆಯನ್ನು ಶಾಸಕರು ಪಡೆದು ತೆರಳಿದ್ದಾರೆ.

ಶಿರಸಿ ಕಾಂಗ್ರೆಸ್ ನಿಯೋಗ ಭೇಟಿ:

ಶಿರಸಿ ಬ್ಲಾಕ್ ಅಧ್ಯಕ್ಷ ರಮೇಶ್ ದುಭಾಷಿ, ಸಿದ್ದಾಪುರ ಬ್ಲಾಕ್ ಪ್ರೆಸಿಡೆಂಟ್ ವಸಂತ ನಾಯಕ್, ಸುಷ್ಮಾ ರಾಜಗೋಪಾಲರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ ಹೆಗಡೆ ಹೊಸಬಾಳೆ ನೇತೃತ್ವದ ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ನಿಯೋಗ ಕೂಡ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

The leader met DKShi who arrived from Delhi: political discussion
ದಿಲ್ಲಿಯಿಂದ ಆಗಮಿಸಿದ ಡಿಕೆಶಿ ಭೇಟಿಯಾದ ನಾಯಕರು; ಸುದೀರ್ಘ ರಾಜಕೀಯ ಚರ್ಚೆ

ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ನಾವು ಇದರ ಲಾಭ ಪಡೆದುಕೊಂಡು ಬಿಜೆಪಿಯ ಹಿಡಿತದಲ್ಲಿರುವ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳುವ ಅವಕಾಶ ಇದೆ. ನಿರಂತರವಾಗಿ ಆಯ್ಕೆಯಾಗುತ್ತಾ ಬಂದಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಲ್ಲಿ ಶಾಸಕರಾಗಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಇದು ನಮ್ಮ ಪಾಲಿಗೆ ಅನುಕೂಲಕರವಾಗಿ ಲಭಿಸಲಿದ್ದು, ಶಾಸಕರ ನಿರ್ಲಕ್ಷವೇ ನಮ್ಮ ಮುಂದಿನ ಚುನಾವಣೆಯ ಅಜೆಂಡಾ ಆಗಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹೆಚ್ಚಿನ ಸ್ಥಾನವನ್ನು ಗೆದ್ದು ಕೊಳ್ಳಬೇಕಾಗಿದ್ದು, ಕೊಂಚ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಗೆ ಇಲ್ಲಿ ಗೆಲ್ಲುವ ಅವಕಾಶವಿದೆ ಎಂದು ಡಿ. ಕೆ. ಶಿವಕುಮಾರ್ ಗೆ ಶಿರಸಿ ಭಾಗದ ಕಾಂಗ್ರೆಸ್ ನಾಯಕರು ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.