ETV Bharat / state

ಮತಿಗೆಟ್ಟ, ದುರಹಂಕಾರಿ ಬಿಜೆಪಿ ಸರ್ಕಾರ ಇನ್ನೂ ನಿದ್ದೆಯಿಂದ ಎದ್ದಿಲ್ಲ: ಡಿಕೆಶಿ ಗುದ್ದು

author img

By

Published : Oct 17, 2020, 9:43 PM IST

DKS
ಡಿಕೆಶಿ

ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್​ಡೌನ್ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಮಳೆರಾಯನ ರೌದ್ರನರ್ತನ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಜನಜೀವನವನ್ನು ಮೂರಾಬಟ್ಟೆ ಮಾಡಿದೆ. ಆದರೂ ಈ ಮತಿಗೆಟ್ಟ, ದುರಹಂಕಾರಿ ಬಿಜೆಪಿ ಸರ್ಕಾರಕ್ಕೆ ನಿದ್ದೆಯಿಂದ ಎಚ್ಚರವಾಗಿಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಜನರ ಬದುಕನ್ನು ದಾರುಣವಾಗಿಸಿದ್ದು, ಸರ್ಕಾರ ಮಾತ್ರ ನಿದ್ದೆಯಿಂದ ಎಚ್ಚೆತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ತಮ್ಮ ಬೇಸರ ಹೊರಹಾಕಿರುವ ಅವರು, ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್​ಡೌನ್ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಮಳೆರಾಯನ ರೌದ್ರನರ್ತನ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಜನಜೀವನವನ್ನು ಮೂರಾಬಟ್ಟೆ ಮಾಡಿದೆ. ಆದರೂ ಈ ಮತಿಗೆಟ್ಟ, ದುರಹಂಕಾರಿ ಬಿಜೆಪಿ ಸರ್ಕಾರಕ್ಕೆ ನಿದ್ದೆಯಿಂದ ಎಚ್ಚರವಾಗಿಲ್ಲ. ಪ್ರವಾಹದಿಂದಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದಿದ್ದಾರೆ.

  • ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಲಾಕ್ ಡೌನ್ ನ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಮಳೆರಾಯನ ರೌದ್ರನರ್ತನ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಜನಜೀವನವನ್ನ ಮೂರಾಬಟ್ಟೆ ಮಾಡಿದೆ.

    ಆದರೂ ಈ ಮತಿಗೆಟ್ಟ, ದುರಹಂಕಾರಿ ಬಿಜೆಪಿ ಸರ್ಕಾರಕ್ಕೆ ನಿದ್ದೆಯಿಂದ ಎಚ್ಚರವಾಗಿಲ್ಲ

    (1/4)

    — DK Shivakumar (@DKShivakumar) October 17, 2020 " class="align-text-top noRightClick twitterSection" data=" ">

ಅಗತ್ಯ ಮೂಲ ಸೌಕರ್ಯಗಳ ಮರುಸ್ಥಾಪನೆಗಾಗಿ, ಪ್ರವಾಹ ಪೀಡಿತ ಪ್ರತಿ ತಾಲೂಕಿಗೆ ಸರ್ಕಾರವು ಈ ಕೂಡಲೇ ಕನಿಷ್ಠ 1 ಕೋಟಿ ರೂ. ಅನುದಾನ ಸರ್ಕಾರ ಈ ಕೂಡಲೇ ನೀಡಬೇಕು. ಮನೆಗಳಿಗೆ ನೀರು ನುಗ್ಗಿ ಜನರು ಶೇಖರಿಸಿಟ್ಟಿದ್ದ ದವಸ - ಧಾನ್ಯಗಳೂ ನೀರು ಪಾಲಾಗಿವೆ. ಇಂತಹ ಕುಟುಂಬಗಳಿಗೆ 5,000 ರೂ. ತುರ್ತು ಪರಿಹಾರ ನೀಡಬೇಕು. ಮನೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ಮನೆ ಕಳೆದುಕೊಂಡವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ಹಾನಿ ಸಮೀಕ್ಷೆ ನಡೆಸಿ, ವಾರದೊಳಗಡೆ ಬೆಳೆ ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಕೊರೊನಾ ರಾಜ್ಯದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರ ನಡುವೆಯೇ ನೆರೆ ಪರಿಸ್ಥಿತಿ ಉಲ್ಬಣವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಈ ಮೂಲಕ ಆಗ್ರಹಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.