ETV Bharat / state

ಕೋವಿಡ್ ನಡುವೆಯೂ ನಾಳೆಯಿಂದ SSLC ಎಕ್ಸಾಂ.. ಮಕ್ಕಳೇ, ಧೈರ್ಯವಾಗಿ ಪರೀಕ್ಷೆ ಎದುರಿಸಿ..

author img

By

Published : Jul 18, 2021, 5:05 PM IST

ನಾಳೆಯಿಂದ SSLC ಪರೀಕ್ಷೆ
ನಾಳೆಯಿಂದ SSLC ಪರೀಕ್ಷೆ

ಪರೀಕ್ಷಾ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮವಾಗಿ ಜೆರಾಕ್ಸ್ ಸೆಂಟರ್ ಮುಚ್ಚುವುದು, ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತೆ..

ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕಿನ ನಡುವೆಯೂ ಭವಿಷ್ಯದ ಪರೀಕ್ಷೆ ಬರೆಯಲು ಎಸ್ಎಸ್ಎಲ್​​ಸಿ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಇತ್ತ ಯಾವುದೇ ಅಡಚಣೆ ಆಗದಂತೆ ಕ್ರಮವಹಿಸಲು ಎಸ್ಎಸ್ಎಲ್‌ಸಿ ಬೋರ್ಡ್ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಹಿಂದೆ ಕೊರೊನಾ ಮೊದಲ ಅಲೆಯ ಅನುಭವ ಹೊಂದಿರುವ ಶಿಕ್ಷಣ ಇಲಾಖೆಯು ಈ ಬಾರಿಯು ಯಾರ ಬಾಯಿಗೂ ಆಹಾರವಾಗದಂತೆ ಕಠಿಣ ಎಸ್ಒಪಿ ಜಾರಿ ಮಾಡಿದೆ. ಇದಕ್ಕಾಗಿ ಪರೀಕ್ಷಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ. ಹಿಂದಿಗಿಂತಲೂ ಈ ಬಾರಿ ಪರೀಕ್ಷಾ ಕೇಂದ್ರ, ಕೊಠಡಿ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ.

ನಾಳೆಯಿಂದ SSLC ಪರೀಕ್ಷೆ

ಕೊರೊನಾ‌ ಕಾರಣಕ್ಕೆ ಆರು ದಿನ ಬದಲಿಗೆ ಈ ಬಾರಿ ಕೇವಲ ಎರಡು ದಿನಗಳ ಪರೀಕ್ಷೆ ನಡೆಯಲಿದೆ. ಕೋರ್ ಸಬ್ಜೆಕ್ಟ್​ ಹಾಗೂ ಭಾಷಾ ವಿಷಯದ ಕುರಿತು ಪರೀಕ್ಷೆ ಇರಲಿದೆ. ‌ಜುಲೈ 19-22ರಂದು ಪರೀಕ್ಷೆ ನಡೆಯಲಿದೆ. ಅಬ್ಬೆಕ್ಟೀವ್ ಮಾದರಿಯಲ್ಲಿ ಒಎಂಆರ್ ಶೀಟ್‌ನಲ್ಲಿ ಬರೆಯಬೇಕಿದೆ.‌

ನಾಳೆ ಗಣಿತ, ವಿಜ್ಞಾನ, ಸಮಾಜಶಾಸ್ತ್ರ ಪರೀಕ್ಷೆ :

ನಾಳೆ ಕೋರ್ ಸಬ್ಜೆಕ್ಟ್ : ಪೇಪರ್-1 ಆದ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ/ಕರ್ನಾಟಕ ಸಂಗೀತ (ಬೆಳಗ್ಗೆ-10-30ರಿಂದ 1-30ರವರೆಗೆ)

ಕಿರಿಯ ತಾಂತ್ರಿಕ ವಿಷಯಗಳು- ಪೇಪರ್- 319-7- 2021 ( ಮಧ್ಯಾಹ್ನ 2-30 ರಿಂದ 5 ರವೆಗೆ)

ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಎಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಇರಲಿದೆ.

ಪ್ರವೇಶ ಪತ್ರ ತೋರಿಸಿದರೆ ಬಸ್‌ನಲ್ಲಿ ಫ್ರೀ ಪ್ರಯಾಣ : ಪ್ರತಿ ವರ್ಷದಂತೆ ಈ ವರ್ಷವೂ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸಂಚಾರಿಸಲು ನಾಲ್ಕು ನಿಗಮಗಳಿಂದಲೂ ಉಚಿತ ಬಸ್‌ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ( ಹಾಲ್ ಟಿಕೆಟ್ ) ತೋರಿಸಿದರೆ ಉಸಿತವಾಗಿ ಸಂಚರಿಸಬಹುದಾಗಿದೆ. ಹಾಗೇ ವಿದ್ಯಾರ್ಥಿಗಳು ಯಾವುದೇ ಸ್ಥಳದಲ್ಲಿ ಕೋರಿದ್ದಲ್ಲಿ ಬಸ್‌ನ ನಿಲ್ಲಿಸಬಹುದಾಗಿದೆ.

ವಿವಿಧೆಡೆ ಮಳೆರಾಯನ ಕಾಟ : ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ಅನಾನುಕೂಲವಾಗದಂತೆ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಪರೀಕ್ಷಾ ಮಂಡಳಿ ನಿರ್ದೇಶಕಿ ಸುಮಂಗಲ ತಿಳಿಸಿದ್ದಾರೆ.

ಅಂತಿಮ ಹಂತದ ತಯಾರಿಯನ್ನು ಮಾಡಿಕೊಂಡಿದ್ದು, ವಿಶೇಷವಾಗಿ ಈ ಬಾರಿ ಹೆಚ್ಚುವರಿಯಾಗಿ 32 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 8,76,508 ಮಕ್ಕಳು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಪೋಷಕರು ಮಕ್ಕಳನ್ನ ಧೈರ್ಯವಾಗಿ ಕಳುಹಿಸಿ ಪರೀಕ್ಷೆ ಬರೆಯುವಂತೆ ಉತ್ತೇಜಿಸುವಂತೆ ಮನವಿ ಮಾಡಿದರು.

ವಿಶೇಷ ಕೊಠಡಿ ಸೌಲಭ್ಯ : ಕೆಮ್ಮು, ನೆಗಡಿ, ಜ್ವರ, ಮೊದಲಾದ ಅನಾರೋಗ್ಯ ಸಮಸ್ಯೆಗಳು ಇದ್ದರೆ ಅಂತಹವರಿಗೆ ವಿಶೇಷ ಕೊಠಡಿ ಸೌಲಭ್ಯ ಇರಲಿದೆ. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುತ್ತಿದ್ದಂತೆ ಆರೋಗ್ಯ ತಪಾಸಣೆಯು ಬೆಳಗ್ಗೆ 8-30ಕ್ಕೆ ಶುರುವಾಗಲಿದೆ‌. ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿಮೀಟರ್, ಮಾಸ್ಕ್ ವ್ಯವಸ್ಥೆ ಇವೆಲ್ಲವೂ ಇರಲಿದೆ. ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಪ್ರತಿ ತಾಲೂಕಿಗೊಂದು ತುರ್ತು ಚಿಕಿತ್ಸಾ ವಾಹನವನ್ನು ಮೀಸಲಿಡಲಾಗುತ್ತಿದೆ.

ಕೊರೊನಾ ಪಾಸಿಟಿವ್ ಅಭ್ಯರ್ಥಿಗಳಿಗೂ ಪರೀಕ್ಷೆಗೆ ಅವಕಾಶ : ಪರೀಕ್ಷಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೆ ಅಂತಹವರಿಗೆ ತಾಲೂಕಿಗೊಂದು ಕೋವಿಡ್ ಕೇರ್ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಅಲ್ಲಿಯೇ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತೆ. ಕುಟುಂಬದಲ್ಲಿ ಸೋಂಕು ತಗುಲಿದ್ದರೆ ಅಂತಹ ಪರೀಕ್ಷಾರ್ಥಿ ಐಸೋಲೇಷನ್‌ನಲ್ಲಿದ್ದರೆ, ಅವರೂ ಸಮೀಪದ ಸಿಸಿಸಿಯಲ್ಲಿ ಪರೀಕ್ಷೆ ಬರೆಯಬಹುದು.

ಪರೀಕ್ಷಾ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಜಾರಿ : ಪರೀಕ್ಷಾ ಅಕ್ರಮ ತಡೆಯಲು ಪರೀಕ್ಷಾ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಪ್ರಕರಣಗಳಿಗೆ ಅವಕಾಶವಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮವಾಗಿ ಜೆರಾಕ್ಸ್ ಸೆಂಟರ್ ಮುಚ್ಚುವುದು, ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತೆ.

ಇದನ್ನೂ ಓದಿ : ಜುಲೈ 3ನೇ ವಾರದಲ್ಲಿ SSLC ಪರೀಕ್ಷೆ ಸಾಧ್ಯತೆ: 2nd PUC ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಪಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.