ETV Bharat / state

ಇಂದು ಡಿಕೆಶಿ ನಿವಾಸಕ್ಕೆ ಸಿದ್ದರಾಮಯ್ಯ, ಪರಂ ಭೇಟಿ... ಏನೆಲ್ಲಾ ಚರ್ಚೆ?

author img

By

Published : Oct 27, 2019, 9:40 AM IST

ಶಿವಕುಮಾರ್

ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿ ಮಾಡಲಿದ್ದಾರೆ.

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಬಂಧಿತರಾಗಿ ಬಳಿಕ ಬಿಡುಗಡೆಗೊಂಡಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿ ಮಾಡಲಿದ್ದಾರೆ.

57 ದಿನಗಳ ನಂತರ ಡಿ.ಕೆ.ಶಿವಕುಮಾರ್ ಸದಾಶಿವನಗರ ಮನೆಗೆ ಬಂದಿದ್ದಾರೆ. ನಿನ್ನೆ ಬೃಹತ್ ಮೆರವಣಿಗೆ ಮೂಲಕ ವಿಮಾನ ನಿಲ್ದಾಣದಿಂದ ಆಗಮಿಸಿದ್ದಾರೆ. ಈಗಾಗಲೇ ಡಿಕೆಶಿ ಮನೆಗೆ ಸ್ವಾಮೀಜಿಗಳು, ಇತರ ನಾಯಕರು ಬಂದು ಭೇಟಿಯಾಗಿದ್ದಾರೆ. ಇಂದು ಡಿಕೆಶಿ ಮನೆಗೆ ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ್ ತೆರಳಲಿದ್ದು, ಭೇಟಿ ವೇಳೆ ಪರಮೇಶ್ವರ್ ಮೇಲಿನ ಐಟಿ ದಾಳಿ, ಡಿಕೆಶಿ ಇಡಿ ವಿಚಾರಣೆ ಹಾಗೂ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇನ್ನು ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ರಾಮನಗರ ಭಾಗದಿಂದಲೂ ಸಾವಿರಾರು ಕಾರ್ಯಕರ್ತರು ಇಂದು ಸದಾಶಿವನಗರ ಮನೆ ಬಳಿ ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಪೊಲೀಸರು ಭದ್ರತೆಗೆ ಕ್ರಮ ವಹಿಸಿದ್ದು, ಸ್ಥಳದಲ್ಲಿ ಒಂದು ಕೆಎಸ್​​ಆರ್​​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮತ್ತೊಂದೆಡೆ ಡಿಕೆಶಿ ಮರಳಿ ಮನೆಗೆ ಬಂದ ಹಿನ್ನೆಲೆ ಕುಟುಂಬಸ್ಥರು ನಿರಾಳರಾಗಿದ್ದು‌, ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Intro:ದೀಪಾವಳಿಗೂ ಮುನ್ನಾ ದಿನವೇ ಡಿಕೆಶಿ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ
57 ದಿನಗಳ ನಂತರ ಮನೆಗೆ ಬಂದ ಡಿಕೆಶಿಗೆ ಮನೆಯ ಸುತ್ತಾ ಹೆಚ್ಚಿದ ಭದ್ರತೆ mojo visval

ದೀಪಾವಳಿಗೂ ಮುನ್ನಾ ದಿನವೇ ಡಿಕೆಶಿ ಮನೆಯಲ್ಲಿ ಸಂಭ್ರಮ ಕಳೆಗಟ್ಟಿದ್ದು ಮನೆಗೆ ಸ್ವಾಮೀಜಿಗಳು ಎಲ್ಲಾ ಬಂದು ಮನೆಯ ಹಬ್ಬದ ಸಂಭ್ರಮ ದಲ್ಲಿ ಭಾಗಿಯಾಗಿದ್ದಾರೆ. 57 ದಿನಗಳ ನಂತರ ಡಿ.ಕೆ ಶಿವಕುಮಾರ್ ಸದಾಶಿವನಗರ ಮನೆಯಲ್ಲಿ ಕಾಲ ಕಲೆದಿದ್ದು
ನಿನ್ನೆ ಬೃಹತ್ ಮೆರವಣಿಗೆ ಮೂಲಕ ಏರ್ಪೋರ್ಟ್ ನಿಂದ ಡಿಕೆಶಿ ಆಗಮನವಾಗಿದ್ದಾರೆ.

ಇನ್ನು ಇಂದು ಡಿಕೆಶಿ ಮನೆಗೆ ಕಾಂಗ್ರೆಸ್ ನಾಯಕರದ ಮಾಜಿ ಡಿಸಿಎಂ ಜಿ ಪರಮೇಶ್ವರ್, ಸಿದ್ದರಾಮಯ್ಯ ಬೆಳಗ್ಗೆ ೮ ಗಂಟೆ ನಂತರ ಸದಾಶಿವನಗರ ಡಿಕೆಶಿ ಮನೆಯಲ್ಲಿ ಭೇಟಿಯಾಗಿ‌ ಭೇಟಿ ವೇಳೆ ಪರಮೇಶ್ವರ್ ಮೇಲಿನ ಐಟಿ ದಾಳಿ, ಡಿಕೆಶಿ ಇಡಿ ವಿಚಾರಣೆ ಹಾಗೂ ಕಾನೂನು ಹೋರಾಟದ ಬಗ್ಗೆ ಚರ್ಚೆ ಸಾಧ್ಯತೆ ಇದೆ.

ಇನ್ನು ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ರಾಮನಗರ ಭಾಗದ ಕಾರ್ಯಕರ್ತರು ಬೆಳಗ್ಗೆ ೯ ಗಂಟೆಗೆ ಸದಾಶಿವನಗರ ಮನೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸೋ ಸಾಧ್ಯತೆ ಹಿನ್ನೆಲೆ ಕೇಂದ್ರ ವಿಭಾಗ ಪೊಲೀಸರರು ಭದ್ರತೆ ವಹಿಸಿದ್ದು ಸ್ಥಳದಲ್ಲಿ ಒಂದು ಕೆ.ಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ
ಮತ್ತೊಂದೆಡೆ ಮನೆಯೊಡೆಯ ಮರಳಿ ಮನೆಗೆ ಬಂದ ಹಿನ್ನೆಲೆ ಕುಟುಂಬಸ್ಥರು ನಿರಾಳವಾಗಿದ್ದು‌ ಹಬ್ಬದ ದಿನಗಳಂದ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಸಂಭ್ರಮವನ್ನ ಡಿಕೆ ಕುಟುಂಬಸ್ಥರು ಮಾಡಲಿದ್ದಾರೆ


Body:KN_BNG_01_DK_7204498Conclusion:KN_BNG_01_DK_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.