ETV Bharat / state

ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಮುನ್ನ ಸಿಎಂ ಅಭ್ಯರ್ಥಿ ಘೋಷಿಸುವ ವಾಡಿಕೆ ಇಲ್ಲ: ಶಶಿ ತರೂರ್

author img

By

Published : Apr 9, 2023, 3:12 PM IST

Etv Bharatshashi-tharoor-reaction-on-karnataka-elaection
ಕಾಂಗ್ರೆಸ್ ಪಕ್ಷ ಎಲ್ಲಾ ಸವಾಲು ಎದುರಿಸಲು ಸಜ್ಜಾಗಿದೆ : ಶಶಿ ತರೂರ್

ಕಾಂಗ್ರೆಸ್​ ಪಕ್ಷದಲ್ಲಿ ಚುನಾವಣೆಗೂ‌ ಮುನ್ನ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವ ವಾಡಿಕೆ ಇಲ್ಲ ಎಂದು ಸಂಸದ ಶಶಿ ತರೂರ್ ಹೇಳಿದರು.

ಬೆಂಗಳೂರು: ಮೊದಲ ನಾನು ಬಾರಿಗೆ ಮತ ಹಾಕುವವರ ಜೊತೆ ಸಂವಾದ ನಡೆಸಿದ್ದೇನೆ. ಇದು ಟ್ಯಾಕ್ಸ್ ಕಟ್ಟುವವರ ಜೊತೆಗಿನ ಸಂವಾದ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕೃಷ್ಣಬೈರೇಗೌಡರ ಪರ ಈ ಹಿಂದೆ ಪ್ರಚಾರ ಮಾಡಿದ್ದೆ. ಈ ಬಾರಿಯೂ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಸಂದೇಶ ಸರಳವಾಗಿದೆ. ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಮ್ಮ ಉದ್ದೇಶ. ರಾಜಕೀಯ ಹೊರತುಪಡಿಸಿ ಚುನಾವಣೆಯಲ್ಲಿ ಅನೇಕ ಸವಾಲುಗಳಿವೆ. ಕಾಂಗ್ರೆಸ್ ಈ ಸವಾಲು ಎದುರಿಸಲು ಸಜ್ಜಾಗಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಬಯಸಿದ್ರೆ ಸಿಎಂ ಸ್ಥಾನ ಬಿಡುತ್ತೇವೆ ಎಂದಿದ್ದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಹಿರಿಯ ನಾಯಕರು. ಎಐಸಿಸಿ‌ ಅಧ್ಯಕ್ಷರು. ಅವರಿಗೆ ಸಂಪೂರ್ಣ ಬೆಂಬಲ ಇದೆ. ಕಾಂಗ್ರೆಸ್​ನಲ್ಲಿ ಚುನಾವಣೆಗೂ‌ ಮುನ್ನ ಸಿಎಂ ಘೋಷಣೆ ಮಾಡುವ ವಾಡಿಕೆಯಿಲ್ಲ. ಸಿಎಂ ಆಯ್ಕೆಗೆ ತನ್ನದೇ ಪ್ರಕ್ರಿಯೆ ಇದೆ. ಮೊದಲು ಚುನಾವಣೆಯಲ್ಲಿ ಗೆಲ್ಲುವ ಗುರಿ ನಮ್ಮದು. ಎಲೆಕ್ಷನ್ ಬಳಿಕ ಶಾಸಕರ ಅಭಿಪ್ರಾಯ ಪರಿಗಣಿಸಿ ಹೈಕಮಾಂಡ್ ಸಿಎಂ ಯಾರು ಅಂತ ನಿರ್ಧಾರ ಮಾಡುತ್ತದೆ ಎಂದು ತರೂರ್ ತಿಳಿಸಿದರು.

ರಾಜ್ಯದಲ್ಲಿ ಅಮುಲ್ ಉತ್ಪನಗಳ ಮಾರಾಟದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಕೆಎಂಎಫ್ ಅಭಿವೃದ್ಧಿ ‌ಮಾಡುವ ಕೆಲಸ ಮಾಡುತ್ತದೆ ಎಂದರು. ಸಿದ್ದರಾಮಯ್ಯ-ಡಿಕೆಶಿ ನಡುವೆ ಸಿಎಂ ಗಾದಿ ಫೈಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲ ರಾಜ್ಯಗಳಲ್ಲಿ ನಾಯಕರ ನಡುವೆ ಪೈಪೋಟಿ ಇರುವುದು ಸಹಜ. ಅದೇ ರೀತಿಯಾಗಿ ಕರ್ನಾಟಕದಲ್ಲೂ ಪೈಪೋಟಿ ಇದೆ. ಮೊದಲು ಎಲೆಕ್ಷನ್ ಗೆಲ್ಲುವುದು ನಮ್ಮ ಗುರಿ. ಬಳಿಕ ಯಾರೋ ಒಬ್ಬರು ಸಿಎಂ ಆಗಲಿದ್ದಾರೆ ಎಂದರು.

ನೀವು ಪಿಎಂ ರೇಸ್‌ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ, ಎಐಸಿಸಿ ಅಧ್ಯಕ್ಷರು ಇದ್ದಾರೆ, ಅನೇಕ ಜನ ಹಿರಿಯ ನಾಯಕರು ಇದ್ದಾರೆ. ಸದ್ಯಕ್ಕೆ ಪಿಎಂ ಸ್ಥಾನದ ವಿಚಾರ ಅಪ್ರಸ್ತುತ. ಮೊದಲು ಕರ್ನಾಟಕದಲ್ಲಿ ಒಬ್ಬರನ್ನು ಸಿಎಂ ಮಾಡೋಣ. ಆಮೇಲೆ ಪಿಎಂ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಬಿ ಎನ್ ಚಂದ್ರಪ್ಪ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.