ETV Bharat / state

Costly ಬೈಕ್​ಗಳೇ ಟಾರ್ಗೆಟ್​: ಪೊಲೀಸರಿಗೆ ತಲೆನೋವಾದ ಸರಣಿ ಬೈಕ್​ ಕಳ್ಳತನ ಕೃತ್ಯಗಳು

author img

By

Published : Oct 9, 2021, 4:08 PM IST

serial bike theft captured in cctv
ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು

ಬೆಂಗಳೂರಿನಲ್ಲಿ ದುಬಾರಿ ಬೈಕ್​ಗಳನ್ನೇ ಟಾರ್ಗೆಟ್​ ಮಾಡಿ ಕೇವಲ ಒಂದೇ ವಾರದಲ್ಲಿ ರಾಯಲ್ ಎನ್ ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್ ಸೇರಿ 4 ಬೈಕ್​ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ.

ಬೆಂಗಳೂರು: ಒಂದೇ ವಾರದಲ್ಲಿ ನಗರದ ಹಲಸೂರು ಠಾಣಾ ಸರಹದ್ದಿನಲ್ಲಿ ನಾಲ್ಕು ಬೈಕ್ ಕಳುವಾಗಿರುವ ಬಗ್ಗೆ ವರದಿಯಾಗಿದೆ. ರಾಯಲ್ ಎನ್​​​ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್ ಗಳನ್ನೇ ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು ಸೆರೆಯಾಗಿವೆ.

ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯಗಳು
ಪೊಲೀಸರಿಗೆ ತಲೆನೋವಾದ ಕಳ್ಳರು:

ಹಲಸೂರಿನ ಜೋಗುಪಾಳ್ಯದಲ್ಲಿ ಕೆಟಿಎಂ ಬೈಕ್ ಲಾಕ್ ಮುರಿದ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. 10 ಸೆಕೆಂಡ್​ನಲ್ಲಿ ಬೈಕ್‌ನ ಹ್ಯಾಂಡ್ ಲಾಕ್ ಮುರಿದು ಬೈಕ್ ಕಳವು ಮಾಡಿರುವ ದೃಶ್ಯ ದಾಖಲಾಗಿದೆ. ಈ ಬೈಕ್ ಕಳವು ಪ್ರಕರಣಗಳು ಹಲಸೂರು ಠಾಣೆಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ತಡ ರಾತ್ರಿ ಬೈಕ್ ಕದ್ದು ಎಸ್ಕೇಪ್:

ರಸ್ತೆ ಬದಿ ಪಾರ್ಕ್ ಮಾಡಿರೋ ಬೈಕ್​​ಗಳನ್ನ ರಾತ್ರಿ ವೇಳೆ ಕಳ್ಳರು ಕದ್ದೊಯುತ್ತಿದ್ದರೆ, ಕೃತ್ಯಕ್ಕೂ ಮುನ್ನ ಬೈಕ್​ನಲ್ಲಿ ಬಂದು ನಿಲ್ಲಿಸಿರುವ ದುಬಾರಿ ಬೈಕ್​​​​ಗಳನ್ನ ಐಡೆಂಟಿಫೈ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಗೋಚರವಾಗಿದೆ. ನಂತರ ತಡರಾತ್ರಿ ಬಂದು ಕ್ಷಣಮಾತ್ರದಲ್ಲಿ ಬೈಕ್ ಕದ್ದು ಎಸ್ಕೇಪ್ ಆಗುತ್ತಿದ್ದಾರೆ.

ಇತ್ತೀಚಿಗೆ ಜೋಗುಪಾಳ್ಯದ ಹರೀಶ್ ಎಂಬ ವಿದ್ಯಾರ್ಥಿಯ ಕೆಟಿಎಂ ಬೈಕ್ ಅನ್ನು ಕದ್ದೊಯ್ದಿದ್ದಾರೆ. ಕಳ್ಳರ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಹಲಸೂರು ಠಾಣೆಯ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Rave party ದಾಳಿ 'ಪೂರ್ವ ಯೋಜಿತ ಸಂಚು'.. ಮೂವರು ಬಂಧಿತರನ್ನ NCB ಬಿಡುಗಡೆ ಮಾಡಿದೆ.. NCP ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.