ETV Bharat / state

ಬಹುಮನಿ ಸುಲ್ತಾನರ ಕಾಲದ ಕರೇಜ್ ಸುರಂಗ ಬಾವಿ ಪುನರುತ್ಥಾನ: ಸಿ.ಪಿ ಯೋಗೇಶ್ವರ್

author img

By

Published : Mar 15, 2021, 6:28 PM IST

CP Yogeshwar
ಸಿ.ಪಿ ಯೋಗೇಶ್ವರ್

ಸುರಂಗ ಪ್ರವಾಸೋದ್ಯಮದ ಅಡಿಯಲ್ಲಿ ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿನ ನೀರಿನ ಕರೇಜ್ ಪುನರುತ್ಥಾನ ಯೋಜನೆಗೆ ಸಂಬಂಧಿಸಿದಂತೆ ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್ ವರ್ಕ್ ಫೌಂಡೇಷನ್ ಎರಡು ಪ್ರಸ್ತಾವನೆ ಸಲ್ಲಿಸಿದ್ದು ಅವುಗಳನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಬೆಂಗಳೂರು: ಬಹುಮನಿ ಸುಲ್ತಾನರ ಕಾಲದಲ್ಲಿ ಕೊರೆದಿರುವ ಬೀದರ್​ನ ವಿಶ್ವವಿಖ್ಯಾತ ಕರೇಜ್ ಸುರಂಗ ಬಾವಿ ಪುನಶ್ಚೇತನದ ಬಗ್ಗೆ ಪರಿಶೀಲನೆ ಮಾಡಲು ಸ್ವತಃ ತಾವೇ ಬೀದರ್​ಗೆ ಭೇಟಿ ನೀಡುವುದಾಗಿ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ವಿಧಾನಪರಿಷತ್​ನಲ್ಲಿ ಬಿಜೆಪಿ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರು ಕರೇಜ್ ಸಿರಂಗ ಬಾವಿಯ ಪುನರುಜ್ಜೀವನಕ್ಕೆ ಬಿಡುಗಡೆಯಾದ ಅನುದಾನ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದರ್ ನಗರ ವ್ಯಾಪ್ತಿಯಲ್ಲಿ ಬರುವ ಶಿಕಾರಗ ಮತ್ತು ಕರೇಜ್ ಪುನರುತ್ಥಾನ, ಕರೇಜ್‌ದಲ್ಲಿ ಹೂಳು ತೆಗೆದಯುವುದು, ಸುತ್ತುಗೋಡೆ, ನೀರು ಶುದ್ಧೀಕರಣ ಕಿಂಡಿಗಳ ಸಂರಕ್ಷಣೆ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಹಾಗು ಉದ್ಯಾನವನ ಕಾಮಗಾರಿಯನ್ನು 2.70 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಮೊದಲ ಕಂತಾಗಿ 50 ಲಕ್ಷಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ವಿಧಾನಪರಿಷತ್ ಕಲಾಪ

ಈ ಕಾಮಗಾರಿ ಆರಂಭಿಸಲು ಲೋಕೋಪಯೋಗಿ ಇಲಾಖೆ ಎರಡು ಬಾರಿ ಟೆಂಡರ್ ಕರೆದಿದ್ದರೂ ಸಹ ಅರ್ಹ ಗುತ್ತಿಗೆದಾರರು ಆಯ್ಕೆ ಆಗಿಲ್ಲ, ಹಾಗಾಗಿ ಈ ಕಾಮಗಾರಿಗೆ ಬಿಡುಗಡೆಯಾಗಿರುವ 50 ಲಕ್ಷ ರೂ.ಗಳು ವೆಚ್ಚವಾಗಿಲ್ಲ ಎಂದರು‌.

ಕೇಂದ್ರದ ನೆರವಿಗೆ ಮೊರೆ: ಸುರಂಗ ಪ್ರವಾಸೋದ್ಯಮದ ಅಡಿಯಲ್ಲಿ ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿನ ನೀರಿನ ಕರೇಜ್ ಪುನರುತ್ಥಾನ ಯೋಜನೆಗೆ ಸಂಬಂಧಿಸಿದಂತೆ ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್ ವರ್ಕ್ ಫೌಂಡೇಷನ್ ಎರಡು ಪ್ರಸ್ತಾವನೆ ಸಲ್ಲಿಸಿದ್ದು ಅವುಗಳನ್ನು ಪರಿಗಣಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಜೊತೆಗೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಹಿತದೃಷ್ಟಿಯಿಂದ ಈ ಸುರಂಗ ಮಾರ್ಗವನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರಕ್ಕೆ ಸಹ 19 ಕೋಟಿ ರೂಪಾಯಿ ಹಣ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.