ETV Bharat / state

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ.. ಮಹದೇವಪುರದಲ್ಲಿ ಮತ್ತೆ ಘರ್ಜಿಸಲು ಪ್ರಾರಂಭಿಸಿದ ಜೆಸಿಬಿ

author img

By

Published : Oct 15, 2022, 5:57 PM IST

Rajakaluve Encroachment Clearance Operation
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

ಮುಂದುವರೆದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ. ಮಹದೇವಪುರ ವಲಯದ ಬೆಳತೂರು ವ್ಯಾಪ್ತಿಯಲ್ಲಿ ಇಂದು 2 ಒತ್ತುವರಿ ತೆರವು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದ ಬೆಳತೂರು ವ್ಯಾಪ್ತಿಯಲ್ಲಿ ಇಂದು 2 ಒತ್ತುವರಿಗಳನ್ನು ತೆರವುಗೊಳಿಸಿದೆ. ಹಲವು ದಿನಗಳಿಂದ ಸ್ಥಗಿತವಾಗಿದ್ದ ಜೆಸಿಬಿ ಘರ್ಜನೆ ಮತ್ತೆ ಪ್ರಾರಂಭವಾಗಿದೆ.

Rajakaluve Encroachment Clearance Operation
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

ಪ್ರೈಮ್ ಮ್ಯಾನ್ಷನ್ ಅಪಾರ್ಟ್ಮೆಂಟ್ ಸುಮಾರು 50 ಮೀಟರ್ ಉದ್ದದ ಮಳೆ ನೀರುಗಾಲುವೆಯ ಮೇಲೆ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿಕೊಂಡಿದ್ದು, ಭೂಮಾಪಕರು ಮಾರ್ಕಿಂಗ್ ಮಾಡಿರುವ ಪ್ರಕಾರ ಇಂದು ಸುಮಾರು 50 ಮೀಟರ್ ಕಾಂಪೌಂಡ್ ಗೋಡೆಯನ್ನು ಕೆಡವಲಾಯಿತು. ಜತೆಗೆ ಎಲ್​ಬಿಐ ಬ್ಲಿಸ್ ಅಪಾರ್ಟ್ಮೆಂಟ್​​ನಿಂದ ಒತ್ತುವರಿ ಮಾಡಿಕೊಂಡಿದ್ದ 10 ಮೀಟರ್ ಉದ್ದದ ಮಳೆ ನೀರುಗಾಲುವೆ ಜಾಗವನ್ನು ತೆರವು ಮಾಡಲಾಗಿದೆ.

Rajakaluve Encroachment Clearance Operation
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವು: ವಲಯ ಮುಖ್ಯ ಅಭಿಯಂತರರಾದ ಬಸವರಾಜು ಕಬಾಡೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾಲಿಕೆ ಇಂಜಿನಿಯರ್​ಗಳು, 20 ಪೊಲೀಸ್ ಅಧಿಕಾರಿಗಳು, 5 ಮಾರ್ಷಲ್​ಗಳ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 ಜೆಸಿಬಿ ಬಳಕೆ: ತೆರವು ಕಾರ್ಯಾಚರಣೆಗೆ 2 ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗಿದೆ. ಟ್ರ್ಯಾಕ್ಟರ್ ಮೂಲಕ ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: 2,052 ಕಡೆ ರಾಜಕಾಲುವೆ ಒತ್ತುವರಿ ತೆರವು: ಹೈಕೋರ್ಟ್​ಗೆ ಬಿಬಿಎಂಪಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.