ETV Bharat / state

ಎಸಿಬಿ ಜಾರಿಗೆ ತಂದಿದ್ದ ಕಾಂಗ್ರೆಸ್​ಗೆ ಹಿನ್ನಡೆ: ಸಚಿವ ಆರ್.ಅಶೋಕ್

author img

By

Published : Aug 12, 2022, 4:59 PM IST

KN_BNG_05_Ministers_Reaction_Script_7208083
ಸಚಿವ ಆರ್.ಅಶೋಕ್

ಎಸಿಬಿ ಜಾರಿಗೆ ತಂದದ್ದು ಕಾಂಗ್ರೆಸ್​​ನವರು. ಇದರಿಂದ ಬಿಜೆಪಿಗೆ ಯಾವುದೇ ಹಿನ್ನಡೆ ಆಗಿಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್​ ಹೇಳಿದರು.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿರುವಾಗ ಎಸಿಬಿ ಜಾರಿಗೆ ತಂದಿದ್ದರು. ಹಾಗಾಗಿ, ಬಿಜೆಪಿಗೆ ಯಾವುದೇ ಹಿನ್ನಡೆ ಆಗಿಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್​​ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಆರಗ ಜ್ಞಾನೇಂದ್ರ ಇದೇ ವಿಚಾರವಾಗಿ ಮಾತನಾಡಿ, ಹೈಕೋರ್ಟ್ ಎಸಿಬಿ ರದ್ದು ಮಾಡಿರುವುದು ಹಾಗೂ ಲೋಕಾಯುಕ್ತಕ್ಕೆ ಅಧಿಕಾರ ಕೊಟ್ಟಿರೋದನ್ನು ಗಮನಿಸಿದ್ದೇನೆ. ಈ ಬಗ್ಗೆ ಸಿಎಂ ಪರಿಶೀಲನೆ ನಡೆಸುತ್ತಾರೆ. ಇಂದು ಕ್ಯಾಬಿನೆಟ್​ನಲ್ಲಿ ಕೂಡ ಇದರ ಬಗ್ಗೆ ಚರ್ಚೆ ನಡೆಯಬಹುದು ಎಂದು ಹೇಳಿದರು.

ಕೊಪ್ಪಳದಲ್ಲಿ ನಡೆದ ಘಟನೆ ಕುರಿತು ಮಾತನಾಡಿದ ಸಚಿವರು, ಈಗಾಗಲೇ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ನಡೆಯುತ್ತಿದೆ ಎಂದರು. ಪ್ರವೀಣ್ ನೆಟ್ಟಾರು ಹತ್ಯೆ ಕುರಿತು ಪ್ರಕರಣದ ತನಿಖೆಗೆ ಎನ್​ಐಎ ಬಂದಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರ ಬಂಧನವೂ ಆಗಿದೆ. ಆರೋಪಿಗಳು ಪದೇ ಪದೇ ಜಾಗ ಬದಲಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ಸುಬ್ಬಣರ ಅಂತ್ಯಸಂಸ್ಕಾರ: ಖ್ಯಾತ ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಲಿದೆ ಎಂದು ಸಚಿವ ಆರ್​.ಅಶೋಕ್​ ತಿಳಿಸಿದರು. ಸುಬ್ಬಣ್ಣ ಅವರ ಕಾಡು ಕುದುರೆ ಓಡಿಬಂದಿತ್ತಾ ಹಾಡು ಜನಪ್ರಿಯವಾಗಿದೆ. ಅವರು ಸಂಗೀತಕ್ಕೆ ವಿಶೇಷ ಒತ್ತು ಕೊಟ್ಟವರು. ಹೈಕೋರ್ಟ್​ನಲ್ಲಿ ವಕೀಲರಾಗಿದ್ದ ಸುಬ್ಬಣ್ಣ, ಜಾನಪದ ಹಾಡುಗಳಿಗೆ ಮೇರು ವ್ಯಕ್ತಿತ್ವ ಕೊಟ್ಟವರು ಎಂದು ಸ್ಮರಿಸಿದರು.

ಇದನ್ನೂ ಓದಿ:ಎಸಿಬಿ ರದ್ದು.. ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.