ETV Bharat / state

ಪಿಎಸ್​​​ಎಲ್​ವಿ ಉಡಾವಣಾ ವಾಹನ ಎನ್​​ಎಸ್​​ಐಎಲ್​​ಗೆ ಸೇರ್ಪಡೆ; ಜಿ. ನಾರಾಯಣ್

author img

By

Published : Mar 12, 2021, 3:01 PM IST

ಒಟ್ಟು 4 ಉಡಾವಣೆಗಳನ್ನು ಎನ್ಎಸ್ಐಎಲ್ ನಿರ್ಧರಿಸಿದ್ದು 2 ಉಡಾವಣೆ ಮುಂದಿನ ವರ್ಷದಲ್ಲಿ ಆಗಲಿವೆ. ಅದರಲ್ಲಿ ಡಿಟಿಎಚ್ ಸಂಸ್ಥೆ (ಟಾಟಾ ಸ್ಕೈ) ಹಾಗೂ ಬ್ರಾಡ್ ಬ್ಯಾಂಡ್ ಸಂಸ್ಥೆ ಮುಖ್ಯ ಪಾತ್ರ ವಹಿಸಲಿವೆ. ಪ್ರಸ್ತುತವಾಗಿ ಸಂಸ್ಥೆಗೆ 342 ಅಂತಾರಾಷ್ಟ್ರೀಯ ಗ್ರಾಹಕರು ಇದ್ದಾರೆ. ಅಮೆರಿಕಾದಿಂದ ಹೆಚ್ಚು ಗ್ರಾಹಕರಿದ್ದಾರೆ ಎಂದಿದ್ದಾರೆ.

G Narayan
ಜಿ.ನಾರಾಯಣ್

ಬೆಂಗಳೂರು: ಇನ್ನೂ ಕೆಲವೇ ವರ್ಷಗಳಲ್ಲಿ ಬಾಹ್ಯಾಕಾಶ ಉಡಾವಣೆ ವಾಹನ ಪಿಎಸ್​​​ಎಲ್​​ವಿ ಎನ್ಎಸ್ಐಎಲ್​​​ಗೆ ಬರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿ.ನಾರಾಯಣ್ ಹೇಳಿದರು.

ಇಂದು ಬೆಂಗಳೂರಿನ ಇಸ್ರೋ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 5 ವರ್ಷಗಳಲ್ಲಿ 2 ಸಾವಿರ ಕೋಟಿ ಪ್ರತಿ ವರ್ಷದಂತೆ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಬಂಡವಾಳ ಆಕರ್ಷಣೆಗೆ ಶೇರು ಮೂಲಕ ಅಥವಾ ಕೇಂದ್ರ ಸರ್ಕಾರದ ನಿರ್ಧಾರ ಆಗಲಿದೆ. ಪಾಕಿಸ್ತಾನದ ಉಪಗ್ರಹ ಉಡಾವಣೆ ಆಗುವುದಿಲ್ಲ, ಇದಕ್ಕೆ ರಾಜಕೀಯ ಒಪ್ಪಿಗೆ ಬೇಕಾಗಿದೆ ಎಂದು ವಿವರಿಸಿದರು.

ಪಿಎಸ್​​​ಎಲ್​ವಿ ಉಡಾವಣಾ ವಾಹನ ಎನ್​​ಎಸ್​​ಐಎಲ್​​ಗೆ ಸೇರ್ಪಡೆಯಾಗಲಿದೆ: ಜಿ.ನಾರಾಯಣ್

ಒಟ್ಟು 4 ಉಡಾವಣೆಗಳನ್ನು ಎನ್ಎಸ್ಐಎಲ್ ನಿರ್ಧರಿಸಿದ್ದು 2 ಉಡಾವಣೆ ಮುಂದಿನ ವರ್ಷದಲ್ಲಿ ಆಗಲಿವೆ. ಅದರಲ್ಲಿ ಡಿಟಿಎಚ್ ಸಂಸ್ಥೆ (ಟಾಟಾ ಸ್ಕೈ) ಹಾಗೂ ಬ್ರಾಡ್ ಬ್ಯಾಂಡ್ ಸಂಸ್ಥೆ ಮುಖ್ಯ ಪಾತ್ರ ವಹಿಸಲಿವೆ. ಪ್ರಸ್ತುತವಾಗಿ ಸಂಸ್ಥೆಗೆ 342 ಅಂತಾರಾಷ್ಟ್ರೀಯ ಗ್ರಾಹಕರು ಇದ್ದಾರೆ. ಅಮೆರಿಕಾದಿಂದ ಹೆಚ್ಚು ಗ್ರಾಹಕರಿದ್ದಾರೆ. ಇಸ್ರೋ ಜೊತೆ ಎನ್​​​​ಎಸ್​​​ಐಎಲ್ ಮಾತುಕತೆಯಲ್ಲಿದ್ದು ಉಡಾವಣೆ ಆಗಿರುವ ಉಪಗ್ರಹಗಳನ್ನು ಸ್ವಾಧೀನಕ್ಕೆ ಪಡೆಯಲಿದೆ ಎಂದರು.

ಎನ್​​​ಎಸ್​​​ಐಎಲ್ ಬಾಹ್ಯಾಕಾಶದ ಉಡಾವಣೆಗಳಲ್ಲಿ ವಾಣಿಜ್ಯ ಅಂಗವಾಗಿ ಕೆಲಸ ಮಾಡಲಿದೆ. ಖಾಸಗಿ ಸಂಸ್ಥೆಗಳ ಜೊತೆ ಕೈಜೋಡಿಸಿ ವಾಣಿಜ್ಯ ಆದಾಯದ ಗುರಿ ಸಾಧನೆಗೆ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: ಇನ್​ಸ್ಪೆಕ್ಟರ್​ ಸೈಮನ್​ಗೆ ಮತ್ತೊಂದು ಸಂಕಷ್ಟ: ಐಟಿ, ಇಡಿ ತನಿಖೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.