ETV Bharat / state

ದಕ್ಷಿಣ ಭಾರತದ 2ನೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿರುವುದು ಸಂತಸ : ನಿರ್ಮಲ್‍ಕುಮಾರ್ ಸುರಾಣ

author img

By

Published : Jul 6, 2021, 5:31 PM IST

http://10.10.50.85//karnataka/06-July-2021/kn-bng-06-nirmal-kumar-surana-pc-script-7208080_06072021162532_0607f_1625568932_35.jpg
ಉಸ್ತುವಾರಿ ನಿರ್ಮಲ್‍ಕುಮಾರ್ ಸುರಾಣ

ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಪಕ್ಷದ ಗೆಲುವಿಗೆ ವಿಶೇಷ ಮಾರ್ಗದರ್ಶನ ನೀಡಿದರು..

ಬೆಂಗಳೂರು : ಪಾಂಡಿಚೇರಿಯಲ್ಲಿ ಕಳೆದ ವಾರ ಮಂತ್ರಿಮಂಡಲ ರಚನೆಯಾಗಿದೆ. ಬಿಜೆಪಿ ಮಿತ್ರ ಪಕ್ಷದ ರಂಗಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ದಕ್ಷಿಣ ಭಾರತದ 2ನೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿರುವುದು ಅತ್ಯಂತ ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಪಕ್ಷದ ಪಾಂಡಿಚೇರಿಯ ಉಸ್ತುವಾರಿ ನಿರ್ಮಲ್‍ಕುಮಾರ್ ಸುರಾಣ ಸಂತಸ ಹಂಚಿಕೊಂಡಿದ್ದಾರೆ.

ಪಾಂಡಿಚೇರಿಯ ನೂತನ ಸರ್ಕಾರದ ಸಚಿವರಾದ ಎ.ನಮಃಶಿವಾಯ, ಸಾಯಿ ಶ್ರವಣಕುಮಾರ್ ಹಾಗೂ 8 ಶಾಸಕರು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ಕ್ಕೆ ಭೇಟಿ ನೀಡಿದ್ದು, ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.

ನಂತರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ನಿರ್ಮಲ್‍ಕುಮಾರ್ ಸುರಾಣ ಮಾತನಾಡಿ, ಪಾಂಡಿಚೇರಿಯಲ್ಲಿ ಭಾರತೀಯ ಜನತಾ ಪಕ್ಷವು ಶೂನ್ಯದಿಂದ ಆರಂಭಿಸಿ, ಎನ್‍ಡಿಎ ಅಧಿಕಾರ ಪಡೆಯಲು ಅಲ್ಲಿನ ಅಧ್ಯಕ್ಷ ಸ್ವಾಮಿನಾಥನ್, ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದಾರೆ. ಬಿಜೆಪಿಗೆ ಹಲವಾರು ಮಂದಿ ಮುಖಂಡರು ಚುನಾವಣೆಗೆ ಮೊದಲು ಸೇರ್ಪಡೆಗೊಂಡರು.

ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಪಕ್ಷದ ಗೆಲುವಿಗೆ ವಿಶೇಷ ಮಾರ್ಗದರ್ಶನ ನೀಡಿದರು ಎಂದರು.

ಪಾಂಡಿಚೇರಿ ಸಚಿವರನ್ನು ಆಹ್ವಾನಿಸಿದ ಪ್ರಧಾನಿಯವರು 40 ನಿಮಿಷ ಕಾಲ ಅವರ ಜೊತೆ ಸಭೆ ನಡೆಸಿರುವುದು ಅತ್ಯಂತ ವಿಶೇಷ. ಪಾಂಡಿಚೇರಿಯನ್ನು ಅತ್ಯುತ್ತಮ ರಾಜ್ಯ ಮಾಡಲು ಪ್ರಧಾನಿಯವರು ಮುಂದಾಗಿದ್ದಾರೆ. ವ್ಯಾಪಾರ, ಶಿಕ್ಷಣ, ಧಾರ್ಮಿಕ ಕೇಂದ್ರ, ಪ್ರವಾಸಿ ಕೇಂದ್ರ ಸೇರಿ ‘ದಿ ಬೆಸ್ಟ್ ಪುದುಚೇರಿ’ ಮಾಡುವುದಾಗಿ ಪ್ರಧಾನಿಯವರು ತಿಳಿಸಿದ್ದಾರೆ ಎಂದರು.

ಕರ್ನಾಟಕದ 40-50 ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಪಾಂಡಿಚೇರಿಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಗೆಲುವಿಗೆ ಶ್ರಮಿಸಿದ ಇಲ್ಲಿನ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಇಂದು ಶಾಸಕರು, ಸಚಿವರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ: ಡಿಲಿಮಿಟೇಷನ್​ ಪ್ರಕ್ರಿಯೆಯಿಂದ ಹೊರಗುಳಿಯಲು ಪಿಡಿಪಿ ನಿರ್ಧಾರ: ಕಗ್ಗಂಟಾಗುತ್ತಾ ಮಹತ್ವದ ಕಾರ್ಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.