ETV Bharat / state

ಸರ್ಕಾರ ಜನರ ಕಷ್ಟು ಸುಖ ವಿಚಾರಿಸುತ್ತಿಲ್ಲ : ಶಾಸಕ ಶರತ್ ಬಚ್ಚೇಗೌಡ ಆರೋಪ

author img

By

Published : Jun 16, 2021, 10:20 PM IST

17 ಜನರಿಂದ ಬಿಜೆಪಿ ಹಾಳಾಯ್ತು ಎಂಬ ಈಶ್ವರಪ್ಪ ಹೇಳಿಕೆ ವಿಚಾರ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ಇವರು ಅಲ್ಲಿಗೆ ಹೋಗಿದ್ದರಿಂದಲೇ ಸರ್ಕಾರ ಬಂದಿದ್ದು. ಈಶ್ವರಪ್ಪನವರು ಮಂತ್ರಿಯಾಗಿದ್ದು. ಆದರೆ, ಈಗ ಅವರನ್ನೇ ದೂರೋದು ಸರಿಯಲ್ಲ. ಕರೆದುಕೊಳ್ಳಬೇಕಾದಾಗಲೇ ಇವರಿಗೆ ಗೊತ್ತಿರಲಿಲ್ವೇ? ಮುಂದೆ ಪ್ರಾಬ್ಲಂ ಎದುರಾಗಬಹುದೆಂದು. ಈಗ ಅವರನ್ನ ದೂರುವುದರಲ್ಲಿ ಅರ್ಥವೇನಿದೆ? ಮಾಡಿದ್ದುಣ್ಣೋ ಮಹಾರಾಯ ಅಷ್ಟೇ.. ಬಿಜೆಪಿಯವರಿಗೆ ಅಧಿಕಾರ ನಡೆಸಿ ಗೊತ್ತಿಲ್ಲ..

congress
ಕಾಂಗ್ರೆಸ್​​ ನಾಯಕರು

ಬೆಂಗಳೂರು : ಸರ್ಕಾರದಲ್ಲಿ ಸಮನ್ವಯದ ಕೊರತೆಯಿದೆ. ಜನರ ಕಷ್ಟ ಸುಖ ವಿಚಾರಿಸುತ್ತಿಲ್ಲ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಬಂದಿದೆ. ನಾವು ಸತತವಾಗಿ ಜನಸೇವೆಯಲ್ಲಿ ತೊಡಗಿದ್ದೇವೆ. ಆದರೆ, ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಶುರುವಾಗಿದೆ.

ಜನರ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಅವರ ಉಸ್ತುವಾರಿ ಇವತ್ತು ಸಭೆ ನಡೆಸಿದ್ದಾರೆ. ಆದರೆ, ಈ ಸನ್ನಿವೇಶದಲ್ಲಿ ಇಂತಹ ಬೆಳವಣಿಗೆ ಬೇಕಾ? ಸಚಿವರು ಅಲ್ಲಿರೋದು ಬಿಡೋದು ಅವರಿಗೆ ಸೇರಿದ್ದು. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು. ಸರ್ಕಾರ ಸಾವಿನ ಸಂಖ್ಯೆ ಮುಚ್ಚಿಡ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮಗೂ ಸರ್ಕಾರ ಸರಿಯಾಗಿ ಅಂಕಿ ಅಂಶಗಳನ್ನು ಸರಿಯಾಗಿ ಕೊಡ್ತಿಲ್ಲ ಅನ್ನೋ ಅನುಮಾನವಿದೆ. ನಮ್ಮ ಹೊಸಕೋಟೆಯಲ್ಲಿ 287 ಮಂದಿ ಕೊರೊನಾದಿಂದ ಸತ್ತವರೆಂದು ಮಾಹಿತಿ ನೀಡಲಾಗ್ತಿದೆ.

ಆದರೆ, ನಾವು 350 ಕ್ಕೂ ಹೆಚ್ಚು ಶವಸಂಸ್ಕಾರ ಗಮನಿಸಿದ್ದೇನೆ. ಇದನ್ನ ನೋಡಿದರೆ ಅನುಮಾನ ಸಹಜ. ಸರಿಯಾದ ಸಂಖ್ಯೆ ಗೊತ್ತಾಗಬೇಕಾದ್ರೆ ಹಿಂದಿನ ಅಂಕಿ-ಅಂಶ ತೆಗೆಯಬೇಕು. ಏಪ್ರಿಲ್, ಮೇನಲ್ಲಿ ಎಷ್ಟು ಸಾವಾಗಿವೆ ಗೊತ್ತಾಗುತ್ತದೆ. ಬಿಹಾರದಲ್ಲಿ ಮುಚ್ಚಿಟ್ಟಿದ್ದನ್ನ ನಾವು ನೋಡಿದ್ದೇವೆ. ಸಾವಿನ ಸಂಖ್ಯೆಯಲ್ಲಿ ನಮಗೂ ವಿಶ್ವಾಸವಿಲ್ಲ ಎಂದು ವಿವರಿಸಿದರು.

ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ : 17 ಜನರಿಂದ ಬಿಜೆಪಿ ಹಾಳಾಯ್ತು ಎಂಬ ಈಶ್ವರಪ್ಪ ಹೇಳಿಕೆ ವಿಚಾರ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ಇವರು ಅಲ್ಲಿಗೆ ಹೋಗಿದ್ದರಿಂದಲೇ ಸರ್ಕಾರ ಬಂದಿದ್ದು. ಈಶ್ವರಪ್ಪನವರು ಮಂತ್ರಿಯಾಗಿದ್ದು. ಆದರೆ, ಈಗ ಅವರನ್ನೇ ದೂರೋದು ಸರಿಯಲ್ಲ. ಕರೆದುಕೊಳ್ಳಬೇಕಾದಾಗಲೇ ಇವರಿಗೆ ಗೊತ್ತಿರಲಿಲ್ವೇ? ಮುಂದೆ ಪ್ರಾಬ್ಲಂ ಎದುರಾಗಬಹುದೆಂದು. ಈಗ ಅವರನ್ನ ದೂರುವುದರಲ್ಲಿ ಅರ್ಥವೇನಿದೆ? ಮಾಡಿದ್ದುಣ್ಣೋ ಮಹಾರಾಯ ಅಷ್ಟೇ.. ಬಿಜೆಪಿಯವರಿಗೆ ಅಧಿಕಾರ ನಡೆಸಿ ಗೊತ್ತಿಲ್ಲ. ಮುಂದೆ ನಾವೇ 150 ಸೀಟು ಗೆಲ್ತೇವೆ ಎಂದು ಭವಿಷ್ಯ ನುಡಿದರು.

ಬಯ್ಯಾಪೂರ್ ಪ್ರತಿಕ್ರಿಯೆ : ಈಶ್ವರಪ್ಪನವರ ಹೇಳಿಕೆ ಆ ಪಕ್ಷದ ಜಾಯಮಾನ ತೋರಿಸುತ್ತೆ. ಇಲ್ಲಿಂದ ಹೋದವರು ಮತ್ತೆ ವಾಪಸ್ ಆಗ್ತಾರೆ. 17 ಜನ ಮತ್ತೆ ಘರ್ ವಾಪಸಿ ಆಗ್ತಾರೆ. ಈ ಶಬ್ಧ ಗೌರವಯುತ, ಸುಧಾರಿತವಾದುದು. ಚುನಾವಣೆ ಬಂದಾಗ ಪಕ್ಷ ಬಿಟ್ಟುಹೋಗೋದು ಸಹಜ. ನಾವು ಹೋಗಿದ್ದೇವೆ, ಸಿದ್ದರಾಮಯ್ಯ ಸಾಹೇಬ್ರು ಹೋಗಿದ್ದಾರೆ. ಆದರೆ, ಡಿಕೆಶಿ ಸಾಹೇಬ್ರು ಇಲ್ಲೇ ಇದ್ದಾರೆ. ಈ ಹಿಂದೆ ಆಪರೇಷನ್ ಕಮಲಕ್ಕೆ ನನ್ನನ್ನ ಪ್ರಯತ್ನಿಸಿದ್ರು. ನಾನು ಪಕ್ಷ ನಿಷ್ಠೆಯಿಂದ ಇಲ್ಲೇ ಉಳಿದುಕೊಂಡೆ. 2008ರಿಂದಲೂ ನನ್ನನ್ನ ಸೆಳೆಯಲು ಪ್ರಯತ್ನ ನಡೆಸಿದ್ರು ಎಂದು ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.