ETV Bharat / state

ಹಿಜಾಬ್ ಧರಿಸದೇ ಶಾಲಾ - ಕಾಲೇಜಿಗೆ ಬನ್ನಿ: ಬಿ.ಸಿ. ನಾಗೇಶ್

author img

By

Published : Feb 9, 2022, 7:39 PM IST

ಈಗ ನೆಲದ ಕಾನೂನು ಏನಿದೆಯೋ ಅದನ್ನು ಪಾಲಿಸಬೇಕಾಗುತ್ತದೆ. ಅದನ್ನು ಒಪ್ಪಿಕೊಂಡು ಶಾಲಾ - ಕಾಲೇಜುಗಳಿಗೆ ಬನ್ನಿ. ಪಾಠವನ್ನು ಕಲಿತು ಪರೀಕ್ಷೆ ಬರೆದು ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಕಾರ್ಯ ಮಾಡಿ ಎಂದು ಬಿ.ಸಿ. ನಾಗೇಶ್ ಮನವಿ ಮಾಡಿದರು.

ಬಿ.ಸಿ. ನಾಗೇಶ್
ಬಿ.ಸಿ. ನಾಗೇಶ್

ಬೆಂಗಳೂರು : ರಾಜ್ಯ ಹೈಕೋರ್ಟ್ ಹಿಜಾಬ್ ವಿಚಾರದಲ್ಲಿ ತೀರ್ಪು ನೀಡುವವರೆಗೂ ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ಕಾಲೇಜಿಗೆ ಬನ್ನಿ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಕರೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಬಿ ಸಿ ನಾಗೇಶ್ ಹೇಳಿಕೆ

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದರ್ಭ, ಹೈಕೋರ್ಟ್ ನಿಂದ ತೀರ್ಪು ಪ್ರಕಟವಾದ ತಕ್ಷಣ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅದಕ್ಕೆ ಮುಂದೆ ಪ್ರತಿಯೊಬ್ಬರು ಬದ್ದರಾಗಬೇಕಾಗುತ್ತದೆ. ಈಗ ನೆಲದ ಕಾನೂನು ಏನಿದೆಯೋ ಅದನ್ನು ಪಾಲಿಸಬೇಕಾಗುತ್ತದೆ. ಅದನ್ನು ಒಪ್ಪಿಕೊಂಡು ಶಾಲಾ - ಕಾಲೇಜುಗಳಿಗೆ ಬನ್ನಿ. ಪಾಠವನ್ನು ಕಲಿತು ಎಕ್ಸಾಮ್ ಬರೆದು ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಕಾರ್ಯ ಮಾಡಿ ಎಂದು ಮನವಿ ಮಾಡಿದರು.

ಪಾಪ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿ ಶಾಲೆ ಬಾಯ್ಕಾಟ್ ಮಾಡುವ ನಿರ್ಣಯ ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಬಳಕೆ ಮಾಡಿಕೊಂಡು ಕೆಲ ಸಂಘಟನೆಗಳು ಕುಮ್ಮಕ್ಕು ಕೊಟ್ಟವು. ಕೆಲ ರಾಜಕೀಯ ಪಕ್ಷಗಳು ಇದನ್ನೂ ಬಳಸಿಕೊಂಡವು. ರಾಜ್ಯದ ಪರಿಸ್ಥಿತಿ ಗೃಹ ಸಚಿವರಿಗೆ ಸಿಗುತ್ತದೆ ಹೀಗಾಗಿ ಅವರ ಜೊತೆ ಚರ್ಚೆ ಮಾಡ್ತೇವೆ ಎಂದು ಹೇಳಿದರು.

ಕೋರ್ಟ್ ನಲ್ಲಿದ್ದ ವಿಷಯ ತೀರ್ಪು ಬರಬಹುದು ಅನ್ನೋ ನಿರೀಕ್ಷೆ ಇತ್ತು. ಅದು ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ. ಯಾವುದೇ ಮಧ್ಯಂತರ ಆದೇಶವೂ ಆಗಿಲ್ಲ. ಸರ್ಕಾರದ ಸುತ್ತೋಲೆ ಈಗಲೂ ಚಾಲೂ ಇದೆ. ಶಾಲೆಗೆ ಮಕ್ಕಳು ಬರುವ ಸಂದರ್ಭದಲ್ಲಿ 1995ರ ರೂಲ್ ಅನುಸಾರ ಎಲ್ಲ ಮಕ್ಕಳು ಫಾಲೋ ಮಾಡಬೇಕು. ಶಾಂತಿ ಕಾಪಾಡಬೇಕು. ಏಪ್ರಿಲ್ ಪರೀಕ್ಷೆಗೆ ಮಕ್ಕಳು ಸಿದ್ದರಾಗಬೇಕು ಎಂದು ಸಲಹೆ ನೀಡಿದ್ದಾರೆ.

ರಜೆ ಮುಂದುವರಿಸುವ ಬಗ್ಗೆ ಇವತ್ತು ನಿರ್ಣಯ ತಗೆದುಕೊಳ್ಳಲ್ಲ. ಸಿಎಂ ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ. ಆರು‌ ಮಕ್ಕಳು ಸಣ್ಣ ವಿಷಯವನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋಗಿ ಇಷ್ಡು ದೊಡ್ಡದು ಮಾಡಿದ್ದಾರೆ ಎಂದರು.

ಇದನ್ನೂ ಓದಿ : ರಜೆ ಮುಂದುವರಿಸುವ ಬಗ್ಗೆ ಇಂದು ನಿರ್ಧಾರವಿಲ್ಲ: ಸಿಎಂ ಜೊತೆ ಚರ್ಚಿಸಿ ತೀರ್ಮಾನ ಎಂದ ಸಚಿವ ನಾಗೇಶ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.