ETV Bharat / state

ಕೀಳು ಸಂಸ್ಕೃತಿ ಕಾಂಗ್ರೆಸ್ ರಕ್ತದಲ್ಲೇ ಇದೆ: ಸಿದ್ದರಾಮಯ್ಯ ವಿರುದ್ಧ ಅರುಣ್ ಸಿಂಗ್ ವಾಗ್ದಾಳಿ

author img

By

Published : Jan 4, 2023, 10:06 PM IST

low-culture-is-in-congress-blood-says-karnataka-bjp-incharge-arun-singh
ಕೀಳು ಸಂಸ್ಕೃತಿ ಕಾಂಗ್ರೆಸ್ ರಕ್ತದಲ್ಲೇ ಇದೆ: ಸಿದ್ದರಾಮಯ್ಯ ವಿರುದ್ಧ ಅರುಣ್ ಸಿಂಗ್ ವಾಗ್ದಾಳಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಕೀಳು ಮಟ್ಟದ ಹೇಳಿಕೆ - ಈ ತರಹದ ಕೀಳು ಸಂಸ್ಕೃತಿ, ಸಂಸ್ಕಾರ ಕಾಂಗ್ರೆಸ್​​ನವರ ರಕ್ತದಲ್ಲೇ ಇದೆ - ಸಿದ್ದರಾಮಯ್ಯರನ್ನು ಮುಂದಿನ ಚುನಾವಣೆಯಲ್ಲಿ ಜನತೆ ಗೆಲ್ಲಿಸುವುದಿಲ್ಲ ಎಂದ ಅರುಣ್ ಸಿಂಗ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೀಳು ಮಟ್ಟದ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಜನರೇ ತಕ್ಕ ಉತ್ತರ ಕೊಡುತ್ತಾರೆ. ಈ ತರಹದ ಕೀಳು ಸಂಸ್ಕೃತಿ, ಸಂಸ್ಕಾರ ಕಾಂಗ್ರೆಸ್​​ನವರ ರಕ್ತದಲ್ಲೇ ಇದೆ. ಈ ಕೀಳು ಸಂಸ್ಕೃತಿ ಅವರಿಂದ ದೂರ ಆಗಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ನಗರಕ್ಕೆ ಆಗಮಿಸಿರುವ ಅವರು ಇಲ್ಲಿನ ಕೆಕೆ ಗೆಸ್ಟ್ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು., ಮುಖ್ಯಮಂತ್ರಿಗಳ ಬಗ್ಗೆ ಸಿದ್ದರಾಮಯ್ಯರ ಅವಹೇಳನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ನಮ್ಮ ಸಿಎಂ ಬೊಮ್ಮಾಯಿ ಬಗ್ಗೆ ಲೂಸ್​ ಕಾಮೆಂಟ್ ಮಾಡಿದ್ದಾರೆ. ಬೊಮ್ಮಾಯಿ ಬಗ್ಗೆ ಆ ರೀತಿ‌ ಹೇಳುವ ಮೂಲಕ ರಾಜ್ಯಕ್ಕೂ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ವಿರುದ್ಧ ಸಿದ್ದರಾಮಯ್ಯ ಹೇಳಿಕೆ.. ಪ್ರತಿಪಕ್ಷ ನಾಯಕನ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಸಿದ್ದರಾಮಯ್ಯ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರದ್ದು ಎಂಥ ಹಿನ್ನೆಲೆ ಅಂತನೂ ಅವರ ಹೇಳಿಕೆಯೇ ತೋರಿಸುತ್ತದೆ. ಸಿದ್ದರಾಮಯ್ಯರನ್ನು ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ಗೆಲ್ಲಿಸುವುದಿಲ್ಲ. ಎಂತಹ ವ್ಯಕ್ತಿಯನ್ನೇ ಹಿಂದೆ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೆವು ಅಂತ ಜನರೇ ಪರಿತಪಸುವಂತೆ ಆಗಿದೆ ಎಂದು ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿಯಾದವರು, ಹಾಲಿ‌ ಮುಖ್ಯಮಂತ್ರಿ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು. ಬೊಮ್ಮಾಯಿ ಸಮಾನ್ಯ ಸಿಎಂ‌ ಆಗಿ ಅನೇಕ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಈ ರೀತಿಯ ಹೇಳಿಕೆಯಿಂದ ಕುಸಿಯುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ ಎಂದು ಅರುಣ್​ ಸಿಂಗ್​ ಪ್ರಶ್ನಿಸಿದರು.

ಕಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯೆ: ಇದೇ ವೇಳೆ ಲವ್ ಜಿಹಾದ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಹೇಳಿಕೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ಅರುಣ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಲೆಕ್ಷನ್ ಅಜೆಂಡಾ ಸಿದ್ಧವಾಗಿದೆ. ನಮ್ಮ ಅಜೆಂಡಾ ಅಭಿವೃದ್ಧಿ, ಅಭಿವೃದ್ಧಿ, ಅಭಿವೃದ್ಧಿ ಮಾತ್ರವೇ ಆಗಿದೆ. ಕಟೀಲ್ ಅವರ ಹೇಳಿಕೆ ಬಗ್ಗೆ ನಾನು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿಯದ್ದು ಭಾವನಾತ್ಮಕ ಅಜೆಂಡಾ.. ನಮ್ಮದು ಜನಸಾಮಾನ್ಯರ ಬದುಕಿಗೆ ಆದ್ಯತೆ: ಡಿಕೆಶಿ

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿಜೆಪಿ ಗ್ರಾಫ್ ಹೆಚ್ಚುತ್ತಿದೆ. ಎಲ್ಲ ರೀತಿಯ ವಿಕಾಸದಿಂದ ಬಿಜೆಪಿ ಉತ್ತಮ ಕೆಲಸ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನ ನಮ್ಮ ಸರ್ಕಾರ ಹೆಚ್ಚಿಸಿದೆ. ನಮ್ಮ ಪಕ್ಷದ ಎಲ್ಲ ನಾಯಕರು ರಾಜ್ಯಕ್ಕೆ ಬಂದು ಬಿಜೆಪಿ ಗೆಲ್ಲಿಸುವ ಕೆಲಸ ಮಾಡಲಿದ್ದಾರೆ ಎಂದರು.

ಜೊತೆಗೆ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅರುಣ್ ಸಿಂಗ್, ಇದು ಮುಖ್ಯಮಂತ್ರಿಗಳ ಪರಮಾಧಿಕಾರ. ಇಷ್ಟೊತ್ತಿಗೆ ಸಚಿವ ಸಂಪುಟ ವಿಸ್ತರಣೆಯಾಗಬೇಕಿತ್ತು. ಆದರೆ ಇನ್ನೂ ಆಗಿಲ್ಲ. ಯಾಕೆ ಆಗಿಲ್ಲ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ಖಚಿತವಾಗಿ ಮುಂದೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಸುಳಿವು ನೀಡಿದರು.

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸಂತಾಪ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ಸಂಪಾತ ಸೂಚಿಸಿದ ಅವರು, ಸಿದ್ದೇಶ್ವರ ಸ್ವಾಮೀಜಿ ಒಬ್ಬ ಶ್ರೇಷ್ಠ ಸಂತರು. ಅವರು ಸಮಾಜಕ್ಕೆ ದಿಕ್ಕು ತೋರಿಸುವ ಕೆಲಸ ಮಾಡುತ್ತಿದ್ದರು. ಅಂತಹ ವಿದ್ವಾನ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಪ್ರೇರಣೆಯಿಂದ ಸಾಕಷ್ಟು ಜನ ಕೆಲಸ ಮಾಡುತ್ತಿದ್ದರು. ಯುಗದ ಕೊನೆವರೆಗೂ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದರು.

ಇದನ್ನೂ ಓದಿ: ಎಲ್ಲಿ ಹನುಮನೋ ಅಲ್ಲೇ ರಾಮನು.. ಜನಾರ್ದನ ರೆಡ್ಡಿ ಮಾತಿನ ಮರ್ಮವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.