ETV Bharat / state

TET 2023: ಟಿಇಟಿ- ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನ

author img

By

Published : Aug 4, 2023, 5:28 PM IST

KRTET application Submission last date is august 5
KRTET application Submission last date is august 5

KRTET Application: 1ರಿಂದ 8ನೇ ತರಗತಿಗಳಿಗೆ ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಲು ಈ ಪರೀಕ್ಷೆ ಕಡ್ಡಾಯವಾಗಿದೆ.

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2023ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಅರ್ಜಿ ಆಹ್ವಾನಿಸಲಾಗಿದೆ. 1ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಈ ಪರೀಕ್ಷೆಯ ಅರ್ಹತೆ ಸಂಪಾದಿಸುವುದು ಕಡ್ಡಾಯ. ಶಿಕ್ಷಣ ಇಲಾಖೆ ನಡೆಸುವ ಕೆಎಆರ್​ಟಿಟಿಇ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ನಾಳೆಯೇ ಕಡೆಯ ದಿನಾಂಕ. ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ವಿದ್ಯಾರ್ಹತೆ: ಪತ್ರಿಕೆ 1 (1ರಿಂದ 5ನೇ ತರಗತಿ): ಪಿಯುಸಿ ಪರೀಕ್ಷೆಯಲ್ಲಿ ಶೇ 50 ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಡ್​ ಕೋರ್ಸ್ ತೇರ್ಗಡೆ ಹೊಂದಿರಬೇಕು/ 4 ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್/​ ಎರಡು ವರ್ಷದ ಡಿಪ್ಲೋಮೋ ಇನ್​ ಎಜುಕೇಶನ್​/ ಬಿ.ಎಡ್​​ ಪದವಿ ಪೂರ್ಣಗೊಳಿಸರಬೇಕು. ಈ ಕೋರ್ಸ್​​ಗಳ ಪ್ರವೇಶಕ್ಕೆ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು.

ಪತ್ರಿಕೆ 2: ಪದವಿಯಲ್ಲಿ ಕನಿಷ್ಠ 50ರಷ್ಟು ಅಂಕ ಗಳಿಸಿರಬೇಕು. ಎರಡು ವರ್ಷದ ಡಿಎಲ್​.ಎಡ್​​/ ಬಿಇಡಿ ಪದವಿ/ ನಾಲ್ಕು ವರ್ಷದ ಬ್ಯಾಚುಲರ್​ ಇನ್​ ಎಲಿಮೆಂಟರಿ ಎಜುಕೇಶನ್/​ ಎರಡು ವರ್ಷದ ಬಿಇಡಿ (ವಿಶೇಷ ಶಿಕ್ಷಣ)ದಲ್ಲಿ ತೇರ್ಗಡೆ ಹೊಂದಿದ ಹಾಗೂ ಪ್ರವೇಶ ಪಡೆದು ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಧಿಸೂಚನೆ
ಅಧಿಸೂಚನೆ

ಅರ್ಜಿ ಶುಲ್ಕ: ವಿಶೇಷ ಅಗತ್ಯತೆಯುಳ್ಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಪತ್ರಿಕೆ-1 ಅಥವಾ ಪ್ರತಿಕೆ-2 (ಎರಡರಲ್ಲಿ ಒಂದಕ್ಕೆ ಅರ್ಜಿ ಸಲ್ಲಿಕೆ) ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 700 ರೂ. ಪ.ಜಾ, ಪ. ವರ್ಗ, ಪ್ರವರ್ಗ-1 -350 ರೂಪತ್ರಿಕೆ-1 ಹಾಗೂ ಪತ್ರಿಕೆ-2 (ಎರಡು ಪತ್ರಿಕೆ ಅರ್ಜಿ ಸಲ್ಲಿಕೆಗೆ). ಸಾಮಾನ್ಯ ವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳು- 1000 ರೂಪ.ಜಾ, ಪ. ವರ್ಗ, ಪ್ರವರ್ಗ-1 -500 ರೂ ಇದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಜುಲೈ 14 ರಿಂದ ಆರಂಭವಾಗಿದ್ದು, ಆಗಸ್ಟ್​​ 5 ಕಡೆಯ ದಿನಾಂಕ. ಶುಲ್ಕ ಪಾವತಿಗೂ ಕೂಡ ಆಗಸ್ಟ್​ 5 ಕಡೆಯ ದಿನವಾಗಿದೆ.

ಪ್ರವೇಶ ಪತ್ರ: ಪ್ರವೇಶ ಪತ್ರವನ್ನು ಆಗಸ್ಟ್​​ 23ರಿಂದ ಸೆಪ್ಟೆಂಬರ್​ 1ರಿಂದ ಇಲಾಖೆಯ ವೆಬ್​ಸೈಟ್​​ www.schooleducation.kar.nic.in ನಲ್ಲಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅಭ್ಯರ್ಥಿಗಳು https://www.schooleducation.kar.nic.in/ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ಸಮೂನೆ ಭರ್ತಿ ಮಾಡಬೇಕು. ಅರ್ಜಿ ಭರ್ತಿಗೂ ಮುನ್ನ ಸಂಪೂರ್ಣ ಅಧಿಸೂಚನೆ ಪರಿಶೀಲಿ ಮುಂದುವರೆಯಬೇಕು. ಬಳಿಕ ಅಗತ್ಯ ವಿವರ ತುಂಬಬೇಕು. ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್​ಸೈಟ್ schooleducation.kar.nic.in​ ಗೆ ಭೇಟಿ ನೀಡಿ.

ಇದನ್ನೂ ಓದಿ: Gramin Dak Sevak Job: ಅಂಚೆ ಇಲಾಖೆಯಿಂದ ಬೃಹತ್​ ನೇಮಕಾತಿ.. ರಾಜ್ಯದಲ್ಲಿ 1714 ಡಾಕ್​ ಸೇವಕ್​ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.