ETV Bharat / state

ರಾಜ್ಯದಲ್ಲಿಂದು 1217 ಮಂದಿಗೆ COVID ದೃಢ; 25 ಮಂದಿ ಸಾವು

author img

By

Published : Aug 31, 2021, 7:29 PM IST

covid
ಕೊರೊನಾ

ರಾಜ್ಯದಲ್ಲಿಂದು 1217 ಮಂದಿಗೆ ಸೋಂಕು ದೃಢಪಟ್ಟಿದೆ. 1198 ಮಂದಿ ಗುಣಮುಖರಾಗಿದ್ದು, ಈ ತನಕ‌ 28,93,715 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿಂದು 1,28,657 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1217 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಸೋಂಕಿನ ಪ್ರಮಾಣ 29,49,445 ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.94% ರಷ್ಟು ದಾಖಲಾಗಿದೆ. 1198 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 28,93,715 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳು 18,386ರಷ್ಟು ಇವೆ. 25 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,318 ಕ್ಕೆ ಏರಿದೆ. ಮರಣ ಪ್ರಮಾಣ 2.05% ರಷ್ಟಿದೆ. ವಿಮಾನ ನಿಲ್ದಾಣದಿಂದ 535 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳಪಟ್ಟಿದ್ದಾರೆ. 25 ಜನ ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್​

1) ಡೆಲ್ಟಾ ( Delta/B.617.2) - 1092
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1

ಓದಿ: ಸದಾಶಿವ ಆಯೋಗದ ವರದಿ ಜಾರಿಗೆ ನಾವು ಒಪ್ಪಲ್ಲ: ಪ್ರಭು ಚವ್ಹಾಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.