ETV Bharat / state

ಚಿನ್ನ, ಬೆಳ್ಳಿ ಗೆದ್ದ ಅಂಧರ ಕ್ರಿಕೆಟ್ ತಂಡದ ಆಟಗಾರರಿಗೆ ಸನ್ಮಾನಿಸಿ, ಕುಂದು ಕೊರತೆ ಆಲಿಸಿದ ಸಿಎಂ

author img

By ETV Bharat Karnataka Team

Published : Sep 29, 2023, 8:13 PM IST

Karnataka Chief Minister Siddaramaiah
Karnataka Chief Minister Siddaramaiah

ಕಳೆದ ತಿಂಗಳು ಲಂಡನ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್​ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ತಂಡ ಚಿನ್ನ ಹಾಗೂ ಪುರುಷರ ತಂಡ ಬೆಳ್ಳಿ ಗೆದ್ದಿದೆ.

ಬೆಂಗಳೂರು : ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್​ (ಐಬಿಎಸ್‌ಎ) ವಿಶ್ವ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮಹಿಳಾ ಕ್ರಿಕೆಟ್ ತಂಡ ಹಾಗೂ ಕರ್ನಾಟಕದ ಅಂಧರ ಪುರುಷರ ಕ್ರಿಕೆಟ್ ತಂಡದ ಸದಸ್ಯರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.

  • ಐ.ಬಿ.ಎಸ್.ಎ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ( ಕ್ರಿಕೆಟ್ ಫಾರ್ ಬ್ಲೈಂಡ್ ) ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ನಾಯಕಿ ಕನ್ನಡತಿ ವರ್ಷಾ. ಯು ಹಾಗೂ ತಂಡದ ಆಟಗಾರರಾದ, ದೀಪಿಕಾ, ಗಂಗವ್ವ ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರರಾದ ಪ್ರಕಾಶ್ ಜೆ, ಸುನೀಲ್… pic.twitter.com/bXJzj3FftZ

    — CM of Karnataka (@CMofKarnataka) September 29, 2023 " class="align-text-top noRightClick twitterSection" data=" ">

ಲಂಡನ್ ಬರ್ನಿಂಗ್ ಹ್ಯಾಂನಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿತು ಮತ್ತು ಅಂಧರ ಪುರುಷರ ಕ್ರಿಕೆಟ್ ತಂಡವು ಐಬಿಎಸ್‌ಎ ವಿಶ್ವ ಕ್ರಿಕೆಟ್ ಪಂದ್ಯಾವಳಿಯಲ್ಲಿ (ಕ್ರಿಕೆಟ್ ಫಾರ್ ಬೈಂಡ್) ಬೆಳ್ಳಿ ಪದಕ ಗೆದ್ದುಕೊಂಡಿತು.

ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡದ ನಾಯಕಿ ವರ್ಷಾ. ಯು ಮತ್ತು ತಂಡದ ಆಟಗಾರ್ತಿಯರಾದ ದೀಪಿಕಾ, ಗಂಗವ್ವ ಮತ್ತು ಕರ್ನಾಟಕದ ಪುರುಷರ ತಂಡದ ಪ್ರಕಾಶ್ ಜೆ, ಸುನೀಲ್ ಕುಮಾರ್, ಬಸಪ್ಪ ವಡ್ಡಗೋಳ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು. ದೃಷ್ಟಿ ವಿಕಲಚೇತನ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಗಸ್ಟ್‌ನಲ್ಲಿ ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಬರೆದಿದೆ.

ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ನೇತೃತ್ವದ ಪದಕ ವಿಜೇತ ಆಟಗಾರರ ತಂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಗೋವಿಂದರಾಜು ಅವರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ಅವರ ಬೇಡಿಕೆಗಳ ಈಡೇರಿಕೆಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟಗಾರರೊಂದಿಗೆ ಸಂವಾದ ನಡೆಸಿ, ಆಟಗಾರರು ಪಡೆಯುವ ತರಬೇತಿ, ಚೆಂಡನ್ನು ಹೇಗೆ ಗುರುತಿಸುತ್ತಾರೆ, ಎಷ್ಟು ಪಂದ್ಯಗಳನ್ನು ಆಡಿದ್ದಾರೆ ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದರು. ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ನಸೀರ್ ಅಹಮದ್, ಅಂಧರ ಭಾರತ ಕ್ರಿಕೆಟ್ ಸಂಸ್ಥೆಯ ಅಜೀವ ಅಧ್ಯಕ್ಷ ಮಹಾಂತೇಶ್, ಸಿಎಬಿಐ ಅಧ್ಯಕ್ಷ ಬೂಸಗೌಡ, ಸಮರ್ಥನಂ ಟ್ರಸ್ಟ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವನಿತೆಯರ ಫೈನಲ್​ ಪಂದ್ಯ: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್​ಗಳಿಂದ ಭಾರತ ತಂಡ ಮಣಿಸಿತು. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಆಸಿಸ್​ ವನಿತೆಯರ ಪಡೆ ನಿಗದಿತ 20 ಓವರ್​ಗೆ 8 ವಿಕೆಟ್​ ಕಳೆದುಕೊಂಡು 114ರನ್​ ಕಲೆ ಹಾಕಿದ್ದರು. ಭಾರತೀಯರ ಆಟಕ್ಕೆ ಮಳೆ ಅಡ್ಡಿಯುಂಟು ಮಾಡಿದ್ದರಿಂದ ಡಿಎಲ್​ಎಸ್​ ನಿಯಮದಂತೆ 9 ಓವರ್​ಗೆ ಪಂದ್ಯವನ್ನು ಕಡಿತ ಮಾಡಲಾಯಿತು. ಅದರಿಂತೆ ಭಾರತಕ್ಕೆ 43 ರನ್​ನ ಗುರಿ ಸಾಧಿಸಬೇಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 3.3 ಓವರ್​ಗಳಲ್ಲಿ 1 ವಿಕೆಟ್​ ನಷ್ಟ ಸಾಧಿಸಿ ಗೆಲುವಿನ ನಗೆ ಬೀರಿತು. (ಐಎಎನ್​ಎಸ್​)

ಇದನ್ನೂ ಓದಿ: ETV Bharat Exclusive: ಅಕ್ಷರ್​ ಬದಲು ಅಶ್ವಿನ್​ಗೆ​ ವಿಶ್ವಕಪ್​ ತಂಡದಲ್ಲಿ ಸ್ಥಾನ.. ಬದಲಾವಣೆ ಪ್ರಕ್ರಿಯೆ ಬಗ್ಗೆ ಈಟಿವಿಗೆ ಬಿಸಿಸಿಐನ ಮೂಲಗಳ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.