ETV Bharat / sports

ETV Bharat Exclusive: ಅಕ್ಷರ್​ ಬದಲು ಅಶ್ವಿನ್​ಗೆ​ ವಿಶ್ವಕಪ್​ ತಂಡದಲ್ಲಿ ಸ್ಥಾನ.. ಬದಲಾವಣೆ ಪ್ರಕ್ರಿಯೆ ಬಗ್ಗೆ ಈಟಿವಿಗೆ ಬಿಸಿಸಿಐನ ಮೂಲಗಳ ಮಾಹಿತಿ

author img

By ETV Bharat Karnataka Team

Published : Sep 29, 2023, 7:19 PM IST

Updated : Sep 29, 2023, 7:29 PM IST

Ashwin
ರವಿಚಂದ್ರನ್ ಅಶ್ವಿನ್

Cricket World Cup 2023: ಏಷ್ಯಾಕಪ್ 2023ರ ಸೂಪರ್ 4 ಹಂತದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಅಕ್ಷರ್ ಪಟೇಲ್ ಅವರ ಬದಲಿ ಆಟಗಾರನಾಗಿ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ರವಿಚಂದ್ರನ್ ಅಶ್ವಿನ್ ಆಯ್ಕೆ ಆಗಿದ್ದಾರೆ. ಅಕ್ಷರ್​ ಬದಲು ಅಶ್ವಿನ್​ ಆಯ್ಕೆಯ ಪ್ರಕ್ರಿಯೆ ಬಗ್ಗೆ ಬಿಸಿಸಿಐನ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿದ ಮಾಹಿತಿ ಇಲ್ಲಿದೆ.

ಕೋಲ್ಕತ್ತಾ (ಪಶ್ಚಿಮ ಬಂಗಾಳ): ನಿನ್ನೆ (ಸೆಪ್ಟೆಂಬರ್​ 28) ವಿಶ್ವಕಪ್​ನಲ್ಲಿ ಭಾಗವಹಿಸುವ 15 ಜನ ಸದಸ್ಯರ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಕೊನೆಯ ದಿನವಾಗಿದೆ. ಕ್ರಿಕೆಟ್​ ವಿಶ್ವಕಪ್​ನಲ್ಲಿ(Cricket World Cup 2023) ಭಾಗವಹಿಸುವ 10 ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆತಿಥೇಯ ರಾಷ್ಟ್ರವಾದ ಭಾರತ ಈ ಹಿಂದೆ ಪ್ರಕಟಿಸಿದ್ದ ಕರಡು ಪಟ್ಟಿಗೂ, ಅಂತಿಮ ಸದಸ್ಯರ ಪಟ್ಟಿಗೂ ಒಂದು ಪ್ರಮುಖ ಬದಲಾವಣೆಯನ್ನು ಮಾಡಿಕೊಂಡಿದೆ.

ಅದೇನೆಂದೆ 37ರ ಹರೆಯದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ಬದಲಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಸೆಪ್ಟೆಂಬರ್ 5 ರಂದು ಪ್ರಕಟವಾದ ವಿಶ್ವಕಪ್‌ ತಂಡದಲ್ಲಿ ಆಲ್‌ರೌಂಡರ್ ಸ್ಪಿನ್ನರ್​ ಆಗಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಹೆಸರಿಸಲಾಗಿತ್ತು. ಆದರೆ, ಅಕ್ಷರ್​ ಪಟೇಲ್​ ಏಷ್ಯಾಕಪ್​ನ ಸೂಪರ್​ 4ನ ಕೊನೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಬದಲಾಗಿ ಅಶ್ವಿನ್​ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಸ್ತುತ ಇರುವ ಮಾಹಿತಿಯ ಪ್ರಕಾರ ಅಕ್ಷರ್ ಪಟೇಲ್ ಅವರು ಚೇತರಿಸಿಕೊಳ್ಳಲು ಕನಿಷ್ಠ ನಾಲ್ಕರಿಂದ ಐದು ವಾರಗಳನ್ನು ತೆಗೆದುಕೊಳ್ಳಲಿದ್ದಾರೆ.

"ಅಕ್ಷರ್​ ನಂತರ ಯಾವುದೇ ಆಯ್ಕೆ ಇರಲಿಲ್ಲ. ರವಿಚಂದ್ರನ್ ಅಶ್ವಿನ್ ತಂಡಗಳನ್ನು ಆಡಿದ ಅಪಾರ ಅನುಭವ ಹೊಂದಿರುವ ಆಟಗಾರ. ರಾಷ್ಟ್ರೀಯ ತಂಡಕ್ಕೆ ಅವರ ಲಭ್ಯತೆ ತಿಳಿಯಲು ಅಶ್ವಿನ್ ಅವರನ್ನು ತಂಡದ ನಾಯಕ ರೋಹಿತ್ ಶರ್ಮಾ ಕರೆದರು. ಆದರೆ, ಅಶ್ವಿನ್ ಮ್ಯಾಚ್ ಫಿಟ್ ಆಗಲು ಕೆಲವು ದಿನಗಳ ಕಾಲಾವಕಾಶ ಕೇಳಿದರು. ನಂತರ ಅಶ್ವಿನ್​ ಅವರನ್ನು ಅಂತಿಮ 15 ಜನ ಸದಸ್ಯರ ತಂಡದಲ್ಲಿ ಸೇರಿಸಲಾಯಿತು. ನಾಲ್ವರು ವೇಗಿಗಳ ಹೊರತಾಗಿ ಒಬ್ಬ ಆಫ್ - ಸ್ಪಿನ್ನರ್ ಮತ್ತು ಎಡಗೈ ಸ್ಪಿನ್ನರ್‌ನೊಂದಿಗೆ ತಂಡವು ಈಗ ಸಂಪೂರ್ಣವಾಗಿದೆ" ಎಂದು ಬಿಸಿಸಿಐನ ಉನ್ನತ ಮೂಲವು ಈಟಿವಿ ಭಾರತಕ್ಕೆ ತಿಳಿಸಿದೆ.

ಏಷ್ಯಾಕಪ್​ ವೇಳೆ ಅಶ್ವಿನ್​ ಅವರನ್ನು ಸಂಪರ್ಕಿಸಿರುವುದಾಗಿ ರೋಹಿತ್​ ಶರ್ಮಾ ಹೇಳಿಕೊಂಡಿದ್ದರು. ಅದರಂರತೆ ಅಶ್ವಿನ್​ ಪ್ರಾದೇಶಿಕ ಕ್ರೀಡೆಯನ್ನು ತೊರೆದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದು ಅಭ್ಯಾಸ ಆರಂಭಿಸಿದ್ದರು. ಏಷ್ಯಾಕಪ್​ ಕೊನೆ ಪಂದ್ಯಕ್ಕೆ ವಾಷಿಂಗ್ಟನ್​ ಸುಂದರ್​ ಅವರನ್ನು ಆಯ್ಕೆ ಮಾಡಲಾಗಿತ್ತು. ಏಕೆಂದರೆ ಸುಂದರ್​ ಏಷ್ಯನ್​ ಗೇಮ್ಸ್​ಗಾಗಿ ತಯಾರಿ ನಡೆಸುತ್ತಿದ್ದರಿಂದ ನೇರವಾಗಿ ಪಂದ್ಯ ಆಡಲು ಫಿಟ್​ ಆಗಿದ್ದರು. ಏಷ್ಯಾಕಪ್​ ನಂತರ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಶ್ವಿನ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಈ ಮೂಲಕ ಅವರು 21 ತಿಂಗಳ ನಂತರ ಭಾರತದ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು. ಕೊನೆಯದಾಗಿ ವಿಶ್ವಕಪ್​ ತಂಡದಲ್ಲೂ ಅನುಭವಿ ಅಶ್ವಿನ್​ ಸ್ಥಾನ ಪಡೆದುಕೊಂಡಿದ್ದಾರೆ.

"ಅಕ್ಷರ್​ ಅವರಿಗೆ ಕ್ರಿಸ್​ಗೆ ಬಂದಕೂಡಲೇ ರನ್​ ವೇಗ ಹೆಚ್ಚಿಸುವ ರೀತಿಯಲ್ಲಿ ಬ್ಯಾಟಿಂಗ್​ ಮಾಡುವ ಕೌಶಲ್ಯ ಗಮನಿಸಿ ಅಕ್ಷರ್​ ಅವರನ್ನು ಮೊದಲಿ ವಿಶ್ವಕಪ್​ನ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅವರು ಗಾಯಗೊಂಡಿದ್ದರಿಂದ ಅನುಭವಿ ಆಲ್​ರೌಂಡರ್​ ಅಶ್ವಿನ್​ಗೆ ಸ್ಥಾನ ಕೊಡಲಾಗಿದೆ ಎಂದು ಬಿಸಿಸಿಐನ ಮೂಲಗಳು ಮಾಹಿತಿ ನೀಡಿದೆ.

ವಿಶ್ವಕಪ್​ಗೂ ಮುನ್ನ ಭಾರತದ ವಿರುದ್ಧ ಆಡಿದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿದೆ. ಆದರೆ, ಸರಣಿಯ ಕೊನೆಯ ಪಂದ್ಯದಲ್ಲಿ ಆಸಿಸ್​ ಉತ್ತಮ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿ ಕ್ಲೀನ್​ ಸ್ವೀಪ್​ನಿಂದ ತಪ್ಪಿಸಿಕೊಂಡಿತ್ತು. ಭಾರತ ವಿಶ್ವಕಪ್​ನಲ್ಲಿ ತನ್ನ ಮೊದಲ ಪಂದ್ಯವನ್ನು ಐದು ಬಾರಿಯ ವಿಶ್ವ ಚಾಂಪಿಯನ್ (1987, 1999, 2003, 2007, ಮತ್ತು 2015) ಆದ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಲಿದೆ.

  • - 2011 World Cup.

    - 2023 World Cup.

    Virat Kohli and Ravi Ashwin are the only two players from the 2011 Indian squad playing the 2023 World Cup. pic.twitter.com/zK9sD46pTj

    — Mufaddal Vohra (@mufaddal_vohra) September 28, 2023 " class="align-text-top noRightClick twitterSection" data=" ">

ವಿಶ್ವಕಪ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ

ಇದನ್ನೂ ಓದಿ: 37 ವರ್ಷಗಳ ನಂತರ ಏಷ್ಯಾಡ್​ನಲ್ಲಿ ಬ್ಯಾಡಿಂಟನ್ ಪದಕ ನಿರೀಕ್ಷೆ.. ಏಷ್ಯನ್​ ಗೇಮ್ಸ್​ನಲ್ಲಿ ಮಣಿಕಾ ಬಾತ್ರಾ ದಾಖಲೆ.. ನಿಖತ್ ಜರೀನ್​​ಗೆ ಪದಕ ಪಕ್ಕಾ

Last Updated :Sep 29, 2023, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.