ETV Bharat / state

ರಾಜ್ಯ ಸರ್ಕಾರ ಬೀದರ್ ಜಿಲ್ಲೆಯನ್ನು ನಿರ್ಲಕ್ಷಿಸಿದೆ :ಬ್ರಿಮ್ಸ್​ ವಿಷಯವಾಗಿ ಸಚಿವ ಸುಧಾಕರ್​ಗೆ ಖಂಡ್ರೆ ಪತ್ರ

author img

By

Published : Jun 3, 2021, 2:07 AM IST

Updated : Jun 3, 2021, 2:14 AM IST

ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ

ಬೀದರ್ ಜಿಲ್ಲೆ ಹಿಂದುಳಿದ ಜಿಲ್ಲೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಯಾಗಿದೆ. ಕರ್ನಾಟಕದ ಕಿರೀಟ ಎಂಬ ಅಭಿದಾನವೂ ಇರುವ ಈ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಎಂದು ಖಂಡ್ರೆ ಹೇಳಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಬೀದರ್ ಜಿಲ್ಲೆಯನ್ನು ನಿರ್ಲಕ್ಷಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವ ಡಾ ಕೆ ಸುಧಾಕರ್​ಗೆ ಪತ್ರ ಬರೆದಿರುವ ಅವರು, ಬೀದರ್​ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್​ ಮಂಜೂರಾಗಿ, ಅದಕ್ಕಾಗಿ 7.25 ಕೋಟಿ ರೂ ಬಿಡುಗಡೆಯಾಗಿ 3 ವರ್ಷ ಕಳೆದಿದ್ದರೂ, ಕಾಮಗಾರಿ ಆರಂಭ ಆಗದಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಬೀದರ್ ಜಿಲ್ಲೆ ಹಿಂದುಳಿದ ಜಿಲ್ಲೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಯಾಗಿದೆ. ಕರ್ನಾಟಕದ ಕಿರೀಟ ಎಂಬ ಅಭಿದಾನವೂ ಇರುವ ಈ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತಾ ಸಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಜಿಲ್ಲಾ ಆಸ್ಪತ್ರೆಯಾದ ಬ್ರಿಮ್ಸ್ ನಲ್ಲಿ ಹೃದ್ರೋಗ ಸಂಬಂಧಿತ "ಕ್ಯಾಥ್ ಲ್ಯಾಬ್ ಸ್ಥಾಪಿಸಲು ನಾನು ಮಂತ್ರಿಯಾಗಿದ್ದ ಅವಧಿಯಲ್ಲೇ ರೂ.7.25 ಕೋಟಿ ಹಣ ಬಿಡುಗಡೆ ಮಾಡಿಸಿದ್ದೆ, ಹಣ ಬ್ರಿಮ್ಸ್ ಬ್ಯಾಂಕ್ ಖಾತೆಗೂ ಜಮಾ ಆಗಿದೆ. ಆದರೆ 3 ವರ್ಷವಾದರೂ ಲ್ಯಾಬ್ ಕಾರ್ಯಗತವಾಗದಿರುವುದೇ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದಿದ್ದಾರೆ.

ಸುಧಾಕರ್​ಗೆ ಈಶ್ವರ್ ಖಂಡ್ರ ಬರೆದ ಪತ್ರ
ಸುಧಾಕರ್​ಗೆ ಈಶ್ವರ್ ಖಂಡ್ರ ಬರೆದ ಪತ್ರ

ಬೆಂಗಳೂರಿನ ಜಯದೇವ ಆಸ್ಪತ್ರೆ ಮಾದರಿಯಲ್ಲೇ ಬೀದರ್ ಜಿಲ್ಲಾ ಆಸ್ಪತ್ರೆ ಬ್ರಿಮ್ಸ್ ನಲ್ಲಿ ಹೃದ್ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಾನು ಸರ್ಕಾರದ ಮೇಲೆ ಒತ್ತಡ ಹೇರಿ 3 ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಿಸಿದ್ದೆ, ಆದರೆ ಬ್ರಿಮ್ಸ್/ಸರ್ಕಾರ ಕ್ಯಾಥ್ ಲ್ಯಾಬ್ ನಿರ್ಮಾಣಕ್ಕೆ ಆಸಕ್ತಿ ತೋರಿಲ್ಲ. ಕೊರೊನಾ ಸೋಂಕಿತರಲ್ಲಿ ಬಹುತೇಕರು ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವಿಗೀಡಾಗಿತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಬ್ರಿಮ್ಸ್​ನಲ್ಲಿ ಕ್ಯಾಥ್ ಲ್ಯಾಬ್ ಕಾರ್ಯಾರಂಭ ಮಾಡಿದ್ದರೆ, ಈ ಸಾವು ನೋವಿನ ಸಂಖ್ಯೆಯನ್ನು ಖಂಡಿತ ತಗ್ಗಿಸಬಹುದಾಗಿತ್ತು ಎಂಬುದನ್ನು ಸ್ವತಃ ವೈದ್ಯರಾದ ತಾವೂ ಒಪ್ಪುತ್ತೀರಿ ಎಂದು ಭಾವಿಸುತ್ತೇನೆ. ಬೀದರ್ ಜಿಲ್ಲೆಯ ಬಗ್ಗೆ ಸರ್ಕಾರಕ್ಕೆ ಇಷ್ಟು ಕಡೆಗಣನ ಏಕೆ. ಈ ವಿಳಂಬಕ್ಕೆ ಕಾರಣೀಕರ್ತರು ಯಾರು? ಇಷ್ಟು ವಿಳಂಬವಾದರೆ ಅಂದಾಜು ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಇನ್ನೂ ವಿಳಂಬ ಮಾಡದೆ ಹೆಚ್ಚುವರಿ ಅನುದಾನ ಅಗತ್ಯವಿದ್ದರೆ ಮಂಜೂರು ಮಾಡಿ ಈ ಸಂಬಂಧ ಕ್ರಮ ವಹಿಸಿ, ಕೋವಿಡ್ 3ನೇ ಅಲೆ ಬರುವ ಮೊದಲೇ ಲ್ಯಾಬ್ ಪ್ರಾರಂಭಿಸಿ ಹೃದ್ರೋಗ ಸಂಬಂಧಿ ಕಾಯಿಲೆ ಇದ್ದವರಿಗೆ ಅಲ್ಲಿಯೆ ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಇದನ್ನು ಓದಿ:ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣಕ್ಕೆ ವಿಶೇಷ ರಿಯಾಯಿತಿ ಪ್ರಸ್ತಾವನೆ: ಸಚಿವ ಜಗದೀಶ್‌ ಶೆಟ್ಟರ್‌

Last Updated :Jun 3, 2021, 2:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.