ETV Bharat / state

ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ, ಮರಣ ಪ್ರಮಾಣ ಗಣನೀಯ ಇಳಿಕೆ

author img

By

Published : Jul 21, 2020, 9:43 PM IST

Increase in the number of corona at the same time  a significant decrease in mortality rate
ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ...ಮರಣ ಪ್ರಮಾಣ ಗಣನೀಯ ಇಳಿಕೆ

ರಾಜ್ಯ ಸೇರಿ ಬೆಂಗಳೂರಲ್ಲಿ ಆತಂಕ ಸೃಷ್ಟಿಸಿದ್ದ ಕೊರೊನಾ ಕೊಂಚ ತಿಳಿಯಾದಂತಿದೆ. ಕಳೆದ ಮೂರ್ನಾಲ್ಕು ದಿನದಿಂದ ಮರಣ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ ಸೋಂಕಿತರ ಪ್ರಮಾಣ ಏರಿಕೆಯಾದರೂ ಮೃತರ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ..

ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾಗೆ 61 ಮಂದಿ ಬಲಿಯಾಗಿದ್ದಾರೆ. ಈವರೆಗೆ 1,464 ಸೋಂಕಿತರು ಮೃತಪಟ್ಟಿದ್ದಾರೆ. ನಿನ್ನೆಗೆ ಹೋಲಿಸಿದ್ರೆ ಒಂದಂಕಿ ಹೆಚ್ಚು ಬಂದಿದೆ. ನಿನ್ನೆ 3,648 ಜನರಿಗೆ ಸೋಂಕು ತಗುಲಿದ್ದರೆ ಇಂದು 3,649 ಹೊಸ ಕೇಸ್ ಪತ್ತೆಯಾಗಿವೆ.

ಒಟ್ಟಾರೆ ರಾಜ್ಯದಲ್ಲಿ 71,069 ಖಚಿತ ಪ್ರಕರಣಗಳಾಗಿವೆ. ಇದರಲ್ಲಿ ಈಗಾಗಲೇ 25,459 ಮಂದಿ ಗುಣಮುಖರಾಗಿದ್ರೆ, 44,140 ಸಕ್ರಿಯ ಪ್ರಕರಣಗಳಿವೆ. ಇನ್ನು 583 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಿನಾದಿಂದ ದಿನಕ್ಕೆ ಮರಣ ಸಂಖ್ಯೆ ಇಳಿಕೆಯಾಗುತ್ತಿರುವುದನ್ನು ದಿನವಾರು ನೋಡುವುದಾದ್ರೆ..

15-7-2020 -87
16-7-2020 -104
17-7-2020 -115
18-7-2020 -93
19-7-2020 -91
20-7-2020 -72
21-7-2020 -61

ಇನ್ನು, ಒಂದು ವಾರದ ಹಿಂದೆ ಸಾವಿನ‌ ಪ್ರಮಾಣ ಏರಿಕೆ ಆಗುತ್ತಲೇ ಇತ್ತು. ಆದರೆ, ಇಂದಿನ ವರದಿಯಲ್ಲಿ ಸಾವಿನ ಪ್ರಮಾಣ ಕೊಂಚ ಇಳಿಕೆ ಕಂಡಿದೆ. ನೂರರ ಗಡಿದಾಟಿದ್ದ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದ್ದು, ಕೊಂಚ ಸಮಾಧಾನ ತಂದಿದೆ.

ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣ ಹೆಚ್ಚಿದ್ದರೂ ಸೋಂಕಿತರ ಮರಣದರ ಶೇಕಡಾ 2.1ರಷ್ಟಿದೆ. ಆದರೆ, ಬೇರೆ ಜಿಲ್ಲೆಗಳಲ್ಲಿ ನೋಡುವುದಾದ್ರೆ, ಬಾಗಲಕೋಟೆಯಲ್ಲಿ ಶೇ.4.5, ಮೈಸೂರು 4.2ರಷ್ಟು ಮರಣ ದರವಿದೆ. ಬೆಂಗಳೂರಿನಲ್ಲಿ 100 ಸೋಂಕಿತರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟರೆ, ಮೈಸೂರು, ಬೀದರ್ ಹಾಗೂ ಬಾಗಲಕೋಟೆ ತಲಾ 4 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.