ETV Bharat / state

ಮುಂದಿನ ಮೂರು ದಿನ ಭಾರೀ ಮಳೆ: ಕರಾವಳಿಯಲ್ಲಿ ಆರೆಂಜ್, ಮಲೆನಾಡಿನಲ್ಲಿ ರೆಡ್ ಅಲರ್ಟ್

author img

By

Published : Oct 23, 2019, 5:54 PM IST

ಮುಂದಿನ ಮೂರು ದಿನ ಭಾರೀ ಮಳೆ

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕರಾವಳಿ ಹಾಗೂ ಒಳನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೂ ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮತ್ತು ಮಲೆನಾಡು ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಬೆಂಗಳೂರು: ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮತ್ತು ಮಲೆನಾಡು ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಸದ್ಯ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕರಾವಳಿ ಹಾಗು ಒಳನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು,16 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 18ರಿಂದ ಇಲ್ಲಿಯವರೆಗೆ ಮಳೆಹಾನಿಯಿಂದಾಗಿ ಒಟ್ಟು13 ಜನ ಮೃತಪಟ್ಟಿದ್ದು, 150 ಪ್ರಾಣಿಗಳು ಅಸುನೀಗಿವೆ. 206 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, 9,832 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 28 ಪುನರ್ವಸತಿ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಲಾಗಿದೆ.

Heavy rain for the next three days
ಎಲ್ಲೆಲ್ಲಿ ಎಷ್ಟು ಹಾನಿ

ಎಲ್ಲೆಲ್ಲಿ ಎಷ್ಟು ಹಾನಿ: ಬಾಗಲಕೋಟೆಯಲ್ಲಿ ಒಬ್ಬ ಮೃತಪಟ್ಟಿದ್ದು, 17 ಪ್ರಾಣಿಗಳು ಸಾವನ್ನಪ್ಪಿವೆ. 888 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 7 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಬೆಳಗಾವಿಯಲ್ಲಿ ಇಬ್ಬರು ಮೃತಪಟ್ಟಿದ್ದು, 8 ಪ್ರಾಣಿಗಳು ಸಾವಿಗೀಡಾಗಿವೆ. 4 ಮನೆಗಳು ಸಂಪೂರ್ಣ ಕುಸಿದಿದ್ದು, 532 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 3 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಧಾರವಾಡದಲ್ಲಿ ಒಬ್ಬ ಮೃತಪಟ್ಟಿದ್ದು, 16 ಪ್ರಾಣಿಗಳು ಸಾವನ್ನಪ್ಪಿವೆ,15 ಮನೆಗಳು ಸಂಪೂರ್ಣ ಕುಸಿದಿದ್ದು, 3,105 ಮನೆಗಳು ಭಾಗಶಃ ಹಾನಿಗೊಳಗಾಗಿವೆ. 5 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ರಾಯಚೂರಿನಲ್ಲಿ ಒಬ್ಬರು ಮೃತಪಟ್ಟಿದ್ದು, ಇತರ ಯಾವುದೇ ಹಾನಿಯಾಗಿಲ್ಲ. ವಿಜಯಪುರದಲ್ಲಿ111 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 3 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಹಾವೇರಿಯಲ್ಲಿ ಇಬ್ಬರು ಮೃತಪಟ್ಟಿದ್ದು, 2 ಪ್ರಾಣಿಗಳು ಮೃತಪಟ್ಟಿವೆ,160 ಮನೆಗಳು ಸಂಪೂರ್ಣ ಕುಸಿದಿದ್ದು, 1,347 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,1 ಪುನರ್ವಸತಿ ಕೇಂದ್ರ ತೆರೆಯಲಾಗಿದೆ.

ಚಿತ್ರದುರ್ಗದಲ್ಲಿ ಓರ್ವ ಮೃತಪಟ್ಟಿದ್ದು,1 ಪ್ರಾಣಿ ಮೃತಪಟ್ಟಿವೆ, 2 ಮನೆಗಳು ಸಂಪೂರ್ಣ ಕುಸಿದಿದ್ದು, 759 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,1 ಪುನರ್ವಸತಿ ಕೇಂದ್ರ ತೆರೆಯಲಾಗಿದೆ.

ಚಿಕ್ಕಮಗಳೂರಿನಲ್ಲಿ 4 ಪ್ರಾಣಿಗಳು ಮೃತಪಟ್ಟಿವೆ, 11 ಮನೆಗಳಿಗೆ ಸಂಪೂರ್ಣ ಕುಸಿದಿದ್ದು, 259 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಗದಗ್​​ನಲ್ಲಿ 55 ಪ್ರಾಣಿಗಳು ಮೃತಪಟ್ಟಿವೆ,1638 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 9 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ದಾವಣಗೆರೆಯಲ್ಲಿ ಓರ್ವ ಮೃತಪಟ್ಟಿದ್ದು,14 ಪ್ರಾಣಿಗಳು ಮೃತಪಟ್ಟಿವೆ, 3 ಮನೆಗಳು ಸಂಪೂರ್ಣ ಕುಸಿದಿವೆ, 681ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಉತ್ತರ ಕನ್ನಡದಲ್ಲಿ 2 ಮನೆಗಳು ಸಂಪೂರ್ಣ ಕುಸಿದಿದ್ದು, 56 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಯಾದಗಿರಿಯಲ್ಲಿ 25 ಪ್ರಾಣಿಗಳು ಮೃತಪಟ್ಟಿವೆ.

ದಕ್ಷಿಣ ಕನ್ನಡದಲ್ಲಿ 9 ಮನೆಗಳು ಸಂಪೂರ್ಣ ಕುಸಿದಿದ್ದು, 33 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಶಿವಮೊಗ್ಗದಲ್ಲಿ ಎರಡು ಪ್ರಾಣಿಗಳು ಮೃತಪಟ್ಟಿದ್ದು, 231 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಕೊಡಗಿನಲ್ಲಿ ಯಾವುದೇ ಜೀವಹಾನಿಯಾಗಿರದೇ ಇದ್ದರೂ ಮುಂಜಾಗೃತಾ ಕ್ರಮವಾಗಿ ಎರಡು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಕೊಪ್ಪಳದಲ್ಲಿ 4 ಮೃತಪಟ್ಟಿದ್ದು, 6 ಪ್ರಾಣಿಗಳು ಸಾವನ್ನಪ್ಪಿವೆ,192 ಮನೆಗಳು ಭಾಗಶಃ ಹಾನಿಗೊಳಲಾಗಿವೆ.

ಎನ್.ಡಿ.ಆರ್.ಎಫ್ ತಂಡ ನಿಯೋಜನೆ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ 2, ಗದಗದಲ್ಲಿ 1, ಧಾರವಾಡದಲ್ಲಿ1, ಹಾವೇರಿಯಲ್ಲಿ1, ಬಾಗಲಕೋಟೆಯಲ್ಲಿ1ಎನ್.ಡಿ.ಆರ್.ಎಫ್ ತಂಡಗಳನ್ನು ತುರ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

Intro:ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಯಲ್ಲಿ ಆರೆಂಜ್, ಮಲೆನಾಡಿನಲ್ಲಿ ರೆಡ್ ಅಲರ್ಟ್ ಘೋಷಣೆ..

ಬೆಂಗಳೂರು:ಬೆಳಗಾವಿ,ಬಾಗಲಕೋಟೆ, ಧಾರವಾಡ, ಗದಗ,ಹಾವೇರಿ,ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು,ಮುಂದಿನ ಮೂರು ದಿನಗಳ ಕಾಲ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಮತ್ತು ಮಲೆನಾಡು ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ಸಧ್ಯ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಕರಾವಳಿ ಹಾಗು ಒಳನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು,16 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 18 ರಿಂದ ಇಲ್ಲಿಯವರೆಗೆ ಮಳೆಹಾನಿಯಿಂದಾಗಿ ಒಟ್ಟು13 ಜನ ಮೃತಪಟ್ಟಿದ್ದು, 150 ಪ್ರಾಣಿಗಳು ಅಸುನೀಗಿವೆ. 206 ಮನೆಗಳು ಸಂಪೂರ್ಣವಾಗಿ ಕುಸಿದಿದ್ದು, 9832ಮನೆಗಳು ಭಾಗಶಃ ಹಾನಿಗೊಳಗಾಗಿವೆ. 28ಪುನರ್ವಸತಿ ಕೇಂದ್ರಗಳನ್ನು ತೆರೆದು ರಕ್ಷಣೆ ನೀಡಲಾಗಿದೆ.

ಎಲ್ಲೆಲ್ಲಿ ಎಷ್ಟು ಹಾನಿ
ಬಾಗಲಕೋಟೆಯಲ್ಲಿ ಓರ್ವ ಮೃತಪಟ್ಟಿದ್ದು, 17 ಪ್ರಾಣಿಗಳು ಮೃತಪಟ್ಟಿವೆ, 888ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 7ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಬೆಳಗಾವಿಯಲ್ಲಿ ಇಬ್ಬರು ಮೃತಪಟ್ಟಿದ್ದು,8ಪ್ರಾಣಿಗಳು ಮೃತಪಟ್ಟಿವೆ,4 ಮನೆಗಳು ಸಂಪೂರ್ಣ ಮೃತಪಟ್ಟಿದ್ದು, 532 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,3 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಧಾರವಾಡದಲ್ಲಿ ಒಬ್ಬರು ಮೃತಪಟ್ಟಿದ್ದು,16ಪ್ರಾಣಿಗಳು ಮೃತಪಟ್ಟಿವೆ,15 ಮನೆಗಳು ಸಂಪೂರ್ಣ ಮೃತಪಟ್ಟಿದ್ದು, 3105 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,5 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ರಾಯಚೂರಿನಲ್ಲಿ ಒಬ್ಬರು ಮೃತಪಟ್ಟಿದ್ದುಇತರೆ ಯಾವುದೇಹಾನಿಯಾಗಿಲ್ಲ.ವಿಜಯಪುರದಲ್ಲಿ111ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,3ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಹಾವೇರಿಯಲ್ಲಿಇಬ್ಬರು ಮೃತಪಟ್ಟಿದ್ದು,2ಪ್ರಾಣಿಗಳು ಮೃತಪಟ್ಟಿವೆ,160 ಮನೆಗಳು ಸಂಪೂರ್ಣ ಮೃತಪಟ್ಟಿದ್ದು, 1347 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,1 ಪುನರ್ವಸತಿ ಕೇಂದ್ರ ತೆರೆಯಲಾಗಿದೆ.

ಚಿತ್ರದುರ್ಗದಲ್ಲಿಓರ್ವ ಮೃತಪಟ್ಟಿದ್ದು,1ಪ್ರಾಣಿ ಮೃತಪಟ್ಟಿವೆ,2 ಮನೆಗಳು ಸಂಪೂರ್ಣ ಮೃತಪಟ್ಟಿದ್ದು, 759 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,1 ಪುನರ್ವಸತಿ ಕೇಂದ್ರ ತೆರೆಯಲಾಗಿದೆ.

ಚಿಕ್ಕಮಗಳೂರಿನಲ್ಲಿ 4ಪ್ರಾಣಿಗಳು ಮೃತಪಟ್ಟಿವೆ,11 ಮನೆಗಳು ಸಂಪೂರ್ಣ ಮೃತಪಟ್ಟಿದ್ದು, 259 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಗದಗ್ ನಲ್ಲಿ 55 ಪ್ರಾಣಿಗಳು ಮೃತಪಟ್ಟಿವೆ,1638 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು,9 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ದಾವಣಗೆರೆಯಲ್ಲಿ ಓರ್ವ ಮೃತಪಟ್ಟಿದ್ದು,14ಪ್ರಾಣಿಗಳು ಮೃತಪಟ್ಟಿವೆ,3 ಮನೆಗಳು ಸಂಪೂರ್ಣ ಕುಸಿದಿದದು,681 ಮನೆಗಳು ಭಾಗಶಃ ಹಾನಿಗೊಳಲಾಗಿವೆ.

ಉತ್ತರ ಕನ್ನಡದಲ್ಲಿ 2 ಮನೆಗಳು ಸಂಪೂರ್ಣ ಕುಸಿದಿದ್ದು, 56 ಮನೆಗಳು ಭಾಗಶಃ ಹಾನಿಗೊಳಗಾಗಿವೆ.ಯಾದಗಿರಿಯಲ್ಲಿ25ಪ್ರಾಣಿಗಳು ಮೃತಪಟ್ಟಿವೆ.

ದಕ್ಷಿಣ ಕನ್ನಡದಲ್ಲಿ 9 ಮನೆಗಳು ಸಂಪೂರ್ಣ ಕುಸಿದಿದ್ದು, 33 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಶಿವಮೊಗ್ಗದಲ್ಲಿ ಎರಡು ಪ್ರಾಣಿಗಳು ಮೃತಪಟ್ಟಿದ್ದು, 231 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಕೊಡಗಿನಲ್ಲಿ ಯಾವುದೇ ಜೀವಹಾನಿಯಾಗಿರದೇ ಇದ್ದರೂ ಮುಂಜಾಗೃತಾ ಕ್ರಮವಾಗಿ ಎರಡು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.ಕೊಪ್ಪಳದಲ್ಲಿ 4ಮೃತಪಟ್ಟಿದ್ದು,6 ಪ್ರಾಣಿಗಳು ಮೃತಪಟ್ಟಿವೆ,192 ಮನೆಗಳು ಭಾಗಶಃ ಹಾನಿಗೊಳಲಾಗಿವೆ.

ಎನ್.ಡಿ.ಆರ್.ಎಫ್ ತಂಡ ನಿಯೋಜನೆ:

ವ್ಯಾಪಕ ಮಳೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ 2,ಗದಗದಲ್ಲಿ 1,ಧಾರವಾಡದಲ್ಲಿ1,ಹಾವೇರಿಯಲ್ಲಿ 1,ಬಾಗಲಕೋಟೆಯಲ್ಲಿ1ಎನ್.ಡಿ.ಆರ್.ಎಫ್ ತಂಡಗಳನ್ನು ತುರ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

KN_BNG_02_RED_ORANGE_ALLERT_SCRIPT_7201801

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.