ETV Bharat / state

ದೇವೇಗೌಡರನ್ನು ರಾಜಕೀಯವಾಗಿ ಮುಗಿಸುವುದೇ, ಬಿಜೆಪಿ, ಕಾಂಗ್ರೆಸ್​ನ​ ಗುರಿಯಾಗಿತ್ತು: ರೇವಣ್ಣ ಕಿಡಿ

author img

By

Published : Nov 5, 2019, 6:10 PM IST

ಮಾಜಿ ಸಚಿವ ಹೆಚ್​. ಡಿ. ರೇವಣ್ಣ

ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ರಾಜಕೀಯವಾಗಿ ಮುಗಿಸುವುದೇ, ಬಿಜೆಪಿ ಹಾಗೂ ಕಾಂಗ್ರೆಸ್​ನ ಗುರಿಯಾಗಿತ್ತು ಎಂದು ಹೆಚ್​. ಡಿ. ರೇವಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಲಿನಿಂದ ದೇವೇಗೌಡರಿಗೆ ಏನು ನಷ್ಟವಾಗಿಲ್ಲ. ರಾಜ್ಯದ ಜನರಿಗೆ ನಷ್ಟವಾಗಿದೆ ಎಂದರು.

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ರಾಜಕೀಯವಾಗಿ ಮುಗಿಸುವುದೇ, ಬಿಜೆಪಿ ಹಾಗೂ ಕಾಂಗ್ರೆಸ್​ನ ಗುರಿಯಾಗಿತ್ತು ಎಂದು ಹೆಚ್​. ಡಿ. ರೇವಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಲಿನಿಂದ ದೇವೇಗೌಡರಿಗೆ ಏನು ನಷ್ಟವಾಗಿಲ್ಲ. ರಾಜ್ಯದ ಜನರಿಗೆ ನಷ್ಟವಾಗಿದೆ ಎಂದರು. ಅನೇಕ ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸಿ, ದೇವೇಗೌಡರನ್ನು ಸೋಲಿಸಲಾಗಿದೆ ಎಂದು ಅವರು ಬಿಜೆಪಿ ಹಾಗೂ ಕಾಂಗ್ರೆಸ್​ನ್ನು ಕಟುವಾಗಿ ಟೀಕಿಸಿದರು.

ಸಿಎಂ ಯಡಿಯೂರಪ್ಪನವರು ನೂರು ದಿನಗಳ ಆಚರಣೆ ಮಾಡುತ್ತಿದ್ದು, ಅವರ ಸರ್ಕಾರದ ಸಾಧನೆ ಏನೆಂದು ಪ್ರಶ್ನೆ ಮಾಡಿದ್ದಾರೆಂದು ಪ್ರಶ್ನಿಸಿದರು. ಐಎಂಎ ಸಂಸ್ಥೆಯಿಂದ ಸಾವಿರಾರು ಕೋಟಿ ವಂಚನೆಯಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಅಪೆಕ್ಸ್ ಬ್ಯಾಂಕ್​ನಿಂದ ಪ್ರತಿ ವರ್ಷ 60 ಕೋಟಿ ನಷ್ಟ ಆಗುತ್ತಿದ್ದು, ಬ್ಯಾಂಕ್​ನ ಅಕ್ರಮದ ಬಗ್ಗೆ ಸಿಬಿಐ ಅಧಿಕಾರಿ ಬರೆದಿದ್ದಾರೆ ಎಂದು ತಿಳಿಸಿದರು. ಸಹಕಾರ ಇಲಾಖೆಯ ಜಂಟಿ ರಿಜಿಸ್ಟ್ರಾರ್ ನರಸಿಂಹ ಮೂರ್ತಿ ಅಕ್ರಮ ಮಾಡಿದ್ದು, ಅವರ ಮೇಲೆಯೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದು ಬಿಎಸ್​ವೈ ಸಾಧನೆಯೇ ಎಂದು ಕೇಳಿದರು.

ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೆಚ್​. ಡಿ. ರೇವಣ್ಣ ಕಿಡಿ

ನೆರೆಯಿಂದ ಹಾನಿಯಾಗಿರುವ ಕೆ.ಆರ್.ಪೇಟೆ ತಾಲೂಕಿನ ಕೆರೆಗಳ ವಿವಿಧ ಕಾಮಗಾರಿಗಳಿಗೆ, '4ಜಿ'ಯಡಿ ವಿನಾಯಿತಿ ನೀಡಲು ಸಿಎಂಗೆ ಅನರ್ಹ ಶಾಸಕ ನಾರಾಯಣಗೌಡ ಪತ್ರ ಬರೆದಿದ್ದರು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಒಟ್ಟು 10 ಕೋಟಿ ರೂ. ಕಾಮಗಾರಿಗಳಿಗೆ '4ಜಿ'ಯಡಿ ಟೆಂಡರ್ ನಿಂದ ವಿನಾಯಿತಿ ನೀಡಿ, ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಸುಮಾರು 7,650 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

ಸಹಕಾರ ಸಚಿವರಾದ ಬಸವರಾಜ ಬೊಮ್ಮಾಯಿ‌ ಕೈಯ್ಯಲ್ಲಿ ಏನೂ ಇಲ್ಲ. ದೇವೇಗೌಡರನ್ನು ದಿನಬೆಳಗಾದರೆ ಬೈಯ್ಯುತ್ತಾರಲ್ಲ ಅವರೇ ಎಲ್ಲವನ್ನೂ ಮಾಡಿಸುತ್ತಿದ್ದಾರೆಂದು ಪರೋಕ್ಷವಾಗಿ ಕೆ.ಎನ್.ರಾಜಣ್ಣಗೆ ಟಾಂಗ್ ನೀಡಿದರು.

Intro:Body:KN_BNG_03_HDREVANNA_PRESSMEET_SCRIPT_7201951

ಎರಡೂ ರಾಷ್ಟ್ರೀಯ ಪಕ್ಷಗಳು ದೇವೇಗೌಡರನ್ನು ಬೈಯ್ಯುವವರಿಗೆ ಗಿಫ್ಟ್ ಕೊಡುತ್ತವೆ: ಎಚ್.ಡಿ.ರೇವಣ್ಣ

ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳು ದೇವೆಗೌಡರನ್ನು ಬೈಯ್ಯುವವರಿಗೆ ಗಿಫ್ಟ್ ಕೊಡುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಗುರಿ ಹೊಂದಿದ್ದವು. ಅದು ದೇವೇಗೌಡರನ್ನು ರಾಜಕೀಯವಾಗಿ ಮುಗಿಸುವ ಗುರಿ. ಇದರಿಂದ ದೇವೇಗೌಡರಿಗೆ ನಷ್ಟ ಇಲ್ಲ. ಇದು ರಾಜ್ಯದ ಜನರಿಗೆ ಆಗುವ ನಷ್ಟ. ದೇವೇಗೌಡರನ್ನು ಏನೆಲ್ಲಾ ಅಸ್ತ್ರ ಪ್ರಯೋಗಿಸಿ ಸೋಲಿಸಲಾಗಿದೆ ಎಂದು ಟೀಕಿಸಿದರು.

ಸಿಎಂ ಯಡಿಯೂರಪ್ಪ ಅವರು ಈಗ ನೂರು ದಿನಗಳ ಆಚರಣೆ ಮಾಡುತ್ತಿದ್ದಾರೆ. ಅವರು ಯಾವುದೇ ದ್ವೇಷ ರಾಜಕಾರಣ ಮಾಡಲ್ಲ ಅಂದಿದ್ದರು. ಆದರೆ, ಐಎಂಎ ಹೌಸಿಂಗ್ ಸೊಸೈಟಿ, ಹೌಸಿಂಗ್ ಫೈನಾನ್ಸ್, ಹೌಸಿಂಗ್, ಐಎಂಎ ಕ್ರೆಡಿಟ್ ಸೊಸೈಟಿ ಹೊಂದಿದೆ. ಈ ಮೂರು ಸಹಕಾರಿ ಇಲಾಖೆ ವ್ಯಾಪ್ತಿಗೆ ಬರುವ ಸಂಸ್ಥೆಗಳಾಗಿದ್ದು, ಈ ಮೂರು ಸಂಸ್ಥೆಗಳಿಂದ ಸುಮಾರು ಎರಡು ಸಾವಿರ ಕೋಟಿ ರೂ.‌ ವಂಚನೆ ಆಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಅಪೆಕ್ಸ್ ಬ್ಯಾಂಕ್ ನಲ್ಲಿ ಕೋಟ್ಯಂತರ ರೂ. ಅಕ್ರಮ ಆಗಿದೆ. ಅಪೆಕ್ಸ್ ಬ್ಯಾಂಕ್ 1500-2500 ಕೋಟಿ ರು. ಸಾಲ ಕೊಡುತ್ತಾ ಇದೆ. ಆದರೆ ಸರಿಯಾಗಿ ಶ್ಯೂರಿಟಿ ಇಲ್ಲದೆ ಪ್ರತಿ ವರ್ಷ 60 ಕೋಟಿ ನಷ್ಟ ಆಗುತ್ತಿದೆ. ಅಪೆಕ್ಸ್ ಬ್ಯಾಂಕ್ ಮಂಡಳಿ ಮೇಲೆ ಕಲಂ 64 ತನಿಖೆ ಮಾಡಲಾಗಿದೆ. ಅಪೆಕ್ಸ್ ಬ್ಯಾಂಕ್ ನಲ್ಲಿನ ಅಕ್ರಮ ಬಗ್ಗೆ ಸಿಬಿಐ ಅಧಿಕಾರಿಯೂ ಪತ್ರ ಬರೆದಿದ್ದಾರೆ. ಯಾರು ಅಧಿಕಾರಿ ಅಪೆಕ್ಸ್ ಬ್ಯಾಂಕ್ ಮಂಡಳಿಯನ್ನು ಸೂಪರ್ ಸೀಡ್ ಮಾಡಿದ್ದಾರೆ, ಅವರನ್ನು ವರ್ಗಾವಣೆ ಮಾಡಲಾಯಿತು. ಇದು ರಾಜ್ಯದ ಬಡವರ ದುಡ್ಡು. ಅವರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಸಹಕಾರ ಇಲಾಖೆಯ ಜಂಟಿ ರಿಜಿಸ್ಟ್ರಾರ್ ನರಸಿಂಹ ಮೂರ್ತಿ ಎಂಬವರು ಅಕ್ರಮ ಮಾಡಿದ್ದು, ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸಮಗ್ರ ತನಿಖೆ‌ ಆಗಬೇಕು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೆಟಿಟಿಪಿ ಕಾಯ್ದೆ 4 ಜಿಯಡಿ ವಿನಾಯಿತಿ ನೀಡಲು ಪತ್ರ ಬರೆದಿದ್ದೆ. ಆದರೆ ಅದನ್ನು ಸಿಎಂ‌ ಕಸದ ಬುಟ್ಟಿಗೆ ಬಿಸಾಕಿದ್ದಾರೆ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಅನರ್ಹ ಶಾಸಕರಿಗೆ ದುಡ್ಡು ಕೊಡಬೇಡಿ ಅಂತ ನಾನು ಹೇಳಲ್ಲ. ಆದರೆ, ನೆರೆಗೆ ಹಾನಿಯಾದ ಕೆ.ಆರ್.ಪೇಟೆ ತಾಲೂಕಿನ ಕೆರೆಗಳ ವಿವಿಧ ಕಾಮಗಾರಿಗಳಿಗೆ 4 ಜಿಯಡಿ ವಿನಾಯಿತಿ ನೀಡಲು ಸಿಎಂಗೆ ಅನರ್ಹ ಶಾಸಕ ನಾರಾಯಣ ಗೌಡ ಪತ್ರ ಬರೆದಿದ್ದರು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಒಟ್ಟು 10 ಕೋಟಿ ರು. ಕಾಮಗಾರಿಗಳಿಗೆ 4ಜಿಯಡಿ ಟೆಂಡರ್ ನಿಂದ ವಿನಾಯಿತಿ ನೀಡಿ, ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಸುಮಾರು 7,650 ಕೋಟಿ ರು. ಮೊತ್ತದ ವಿವಿಧ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.

ಸಹಕಾರ ಸಚಿವರಾದ ಬಸವರಾಜ ಬೊಮ್ಮಾಯಿ‌ ಕೈಯ್ಯಲ್ಲಿ ಏನಿಲ್ಲ. ಸಹಕಾರ ಇಲಾಖೆ ಕಾರ್ಯದರ್ಶಿ ಹಾಗೂ ಮತ್ತು ದೇವೇಗೌಡರನ್ನು ದಿನಬೆಳಗಾದರೆ ಬೈಯ್ಯುತ್ತಾರಲ್ಲ ಅವರೇ ಎಲ್ಲವನ್ನೂ ಮಾಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆ.ಎನ್.ರಾಜಣ್ಣಗೆ ಟಾಂಗ್ ನೀಡಿದರು.Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.