ETV Bharat / state

ಜೆಡಿಎಸ್​ - ಬಿಜೆಪಿ ಮೈತ್ರಿ ಊಹಾಪೋಹಕ್ಕೆ ತೆರೆ ಎಳೆದ ದೇವೇಗೌಡರು

author img

By

Published : Jul 25, 2023, 3:21 PM IST

Updated : Jul 25, 2023, 3:55 PM IST

H D Devegowda clarifies on JDS-BJP alliance: 28 ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಚುನಾವಣೆಗೆ ನಿಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ನಿಲ್ಲುತ್ತೇವೆ ಎಂದು ಜೆಡಿಎಸ್​ ವರಿಷ್ಠ ದೇವೇಗೌಡ ತಿಳಿಸಿದ್ದಾರೆ.

ಜೆಡಿಎಸ್​ ವರಿಷ್ಠ ದೇವೇಗೌಡರು
ಜೆಡಿಎಸ್​ ವರಿಷ್ಠ ದೇವೇಗೌಡರು

ಜೆಡಿಎಸ್​ ವರಿಷ್ಠ ದೇವೇಗೌಡರು

ಬೆಂಗಳೂರು: ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ರಾಜ್ಯದಲ್ಲಿ ಎದ್ದಿದ್ದ ಊಹಾಪೋಹಗಳಿಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡ ಅವರು ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿಂದು ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಶಾಸಕ ಜಿ ಟಿ ದೇವೇಗೌಡ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 28 ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ನಿಲ್ಲುತ್ತೇವೆ. ಅಧಿಕೃತ ವಿರೋಧ ಪಕ್ಷ ಬಿಜೆಪಿ, ಅನಧಿಕೃತ ವಿರೋಧ ಪಕ್ಷ ಜೆಡಿಎಸ್. ಕೆಲವೊಂದು ವಿಚಾರಕ್ಕೆ ಎರಡು ಪಕ್ಷದವರು ಸದನದಿಂದ ವಾಕ್ ಔಟ್ ಮಾಡಿದ್ದಾರೆ. ಈ ಹಿಂದೆಯೂ ಈ ರೀತಿ ಆಗಿದೆ ಎಂದರು.

ನೈಸ್​ ವಿಚಾರವಾಗಿ ಮಾತನಾಡಿದ ದೇವೇಗೌಡರು, ಬೊಮ್ಮಾಯಿ ಸಿಎಂ‌ ಆಗಿದ್ದಾಗ ಸದನ ಸಮಿತಿ ರಚನೆ ಮಾಡಿದ್ರು. ಸದನ ಸಮಿತಿ ವರದಿಯಲ್ಲಿ 11,668 ಎಕರೆ ವಾಪಸ್ ಕೊಡಲು ವರದಿ ನೀಡಿದೆ. ಯಾರ ಭೂಮಿ ಇದು.? ಭೂಮಿ ವಾಪಸ್ ಪಡೆಯಲು ಸಿದ್ದರಾಮಯ್ಯಗೆ ಏನು ಕಷ್ಟ ಇದೆ.? ನೈತಿಕತೆ ಬಗ್ಗೆ ಮಾತಾಡ್ತಾರೆ. ಇದರಲ್ಲಿ ಬರೋ ಹಣವನ್ನು ಐದು ಉಚಿತ ಕಾರ್ಯಕ್ರಮಕ್ಕೆ ಬಳಸಿಕೊಳ್ಳಿ. ಕೋಟ್ಯಂತರ ಹಣ ಇದರಲ್ಲಿ ಬರುತ್ತದೆ. ಒಂದು ಎಕರೆಗೆ ಐದು, ಹತ್ತು ಕೋಟಿ ರೂಪಾಯಿ ಬರುತ್ತದೆ. ಸಿದ್ದರಾಮಯ್ಯ ಅವರೇ ನೀವು ಮಾತಾಡುವ ಮಾತು ಹೃದಯದ ಅಂತರಾಳದಿಂದ ಬರಬೇಕು. ಅಧಿಕಾರ ಇರುತ್ತೆ, ಹೋಗುತ್ತೆ. ನೈತಿಕತೆ ಮುಖ್ಯ ಎಂದು ತಿಳಿಸಿದರು.

ನಿನ್ನೆ ಸಿದ್ದರಾಮಯ್ಯ ಪತ್ರಕರ್ತರಿಗೆ ಹೇಳಿದ ವಿಚಾರ ಪ್ರಸ್ತಾಪಿಸಿದ ಅವರು, ವರದಿಗಾರರಿಗೆ ನೈತಿಕತೆ ಇರಬೇಕು ಅಂತ ಹೇಳಿದ್ದಾರೆ. ಅವರದೇ ಪಕ್ಷದ ಜಯಚಂದ್ರ ಅವರು ವರದಿ ನೀಡಿದ್ದಾರೆ. ಆದ್ರೆ ಅದರ ವಿರುದ್ಧ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಅವರು ನೀತಿ ಹೇಳಿದ್ದಾರೆ. ನೈತಿಕತೆ ಪಾಠ ಮಾಡೋ ಇವರಿಗೆ ನೈತಿಕತೆ ಇಲ್ಲವಾ ಎಂದು ಹೆಸರೇಳದೆ ಸಿದ್ದರಾಮಯ್ಯಗೆ ಚಾಟಿ ಬೀಸಿದರು.

ಕಾಂಗ್ರೆಸ್‌ಗೆ ಸಮಯ ಬಂದಾಗ ಸೆಕ್ಯುಲರ್. ಅವರಿಗೆ ದರ್ದು ಬಂದಾಗ ನೋ ಸೆಕ್ಯುಲರ್. ಮಂಡ್ಯದಲ್ಲಿ ಕೈ-ಕಮಲ ಸಹಕಾರ, ಜೆಡಿಎಸ್‌ಗೆ ಕೋಕ್. ಯಾವುದೋ ಪೇಪರ್​ನವರು ನಿಮಗೆ ಬೇಕು ಅಂದಾಗ ಬೇಕಾದಂತೆ ಬರೀತೀರಾ. ಜನತಾ ಪಕ್ಷದ ಸರ್ಕಾರ ಮಾಡಿದ್ದು, ಕಾಂಗ್ರೆಸೇತರ ಸರ್ಕಾರ 1983ರಲ್ಲಿ. 18 ಬಿಜೆಪಿ, 8 ಕಮ್ಯುನಿಸ್ಟ್, ಐವರು ಪಕ್ಷೇತರ ಶಾಸಕರಿದ್ದರು. ಮೊದಲ ಬಾರಿಗೆ 1983ರಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆ ಮಾಡಲಾಯ್ತು. ಸರ್ಕಾರದಲ್ಲಿ ಸಿದ್ದರಾಮಯ್ಯ ಕಾವಲು ಸಮಿತಿ ಅಧ್ಯಕ್ಷ ಆಗಿದ್ರು. ಹೇಳಿ ಇಬ್ರಾಹಿಂ ಅವರೇ ಹೇಳೋಕೆ ಕಷ್ಟಾನಾ ಅಂತ ಪಕ್ಕದಲ್ಲೇ ಇದ್ದ ಇಬ್ರಾಹಿಂರನ್ನ ಹೆಚ್​ಡಿಡಿ ಪ್ರಶ್ನೆ ಮಾಡಿದರು.

ಪಕ್ಷವನ್ನು ಯಾರಾದ್ರೂ ಅಳಿಸಿ ಹಾಕ್ತೇವೆ ಅಂದ್ರೆ ಅದು ಸಾಧ್ಯವಿಲ್ಲ: ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನೇನಾಗಿದೆ ಅಂತ ಜಿಟಿಡಿ ವಿವರವಾಗಿ ಹೇಳಿದ್ದಾರೆ. ಇವರು ಅಧಿಕಾರಕ್ಕಾಗಿ ಏನೆಲ್ಲಾ ಮಾಡಿದ್ರು ಅಂತ ಹೇಳಿದ್ದಾರೆ. ಅಂದಿನಿಂದ 1983 ರಿಂದ ಇಲ್ಲಿಯವರೆಗೂ ಜೆಡಿಎಸ್ ಇದೆ. ನಾನು ಸಿಎಂ, ಪ್ರಧಾನಿ ಆದೆ. ಕುಮಾರಸ್ವಾಮಿ ಸೇರಿದಂತೆ ಅನೇಕರು ಸಿಎಂ ಆಗಿದ್ದಾರೆ. ಈ ಪಕ್ಷವನ್ನು ಯಾರಾದ್ರೂ ಅಳಿಸಿ ಹಾಕ್ತೇವೆ ಅಂದ್ರೆ ಅದು ಸಾಧ್ಯವಿಲ್ಲ. ನಮ್ಮ 19 ಶಾಸಕರು, 7 ವಿಧಾನಪರಿಷತ್ ಸದಸ್ಯರ ಜೊತೆ ಕುಳಿತು ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ ಎಂದರು.

ಜಿ. ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ಕಮಿಟಿ ಮಾಡಿ, ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡೋದಾ ಅಂತ ತೀರ್ಮಾನ ಮಾಡಿ, ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಒಂದುಗೂಡಿಸೋ ಕೆಲಸ ಮಾಡಲಿದೆ. ಈ ಬಗ್ಗೆ ನಿಮಗೆ ಅನುಮಾನ ಇರಬಹುದು. ಹೆಗಡೆ ಅವರು ಬಿಜೆಪಿ ಜೊತೆ ಹೋಗಿ ಸಿಎಂ‌ ಆಗಲಿಲ್ಲವಾ.? ಕುಮಾರಸ್ವಾಮಿ ಮಾತ್ರಾನಾ ಸಿಎಂ ಆಗಿದ್ದು? ಅದನ್ನ ಮುಂದಿಟ್ಟು ಮಾತಾಡ್ತೀನಿ. ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ತೀವಿ ಗೊತ್ತಿಲ್ಲ. ಆದ್ರೆ ಸ್ವತಂತ್ರವಾಗಿ ಹೋರಾಟ ಮಾಡ್ತೀವಿ ಎಂದು ಜಿಟಿಡಿ ಹೇಳಿದರು.

ಪಂಚರತ್ನ ಯೋಜನೆ ಜನರ ಮುಂದೆ ಇಡ್ತೀವಿ: ಅಂದು ತೀರ್ಮಾನ ಮಾಡ್ತೀವಿ. ಇದೇ ಮನಮೋಹನ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ರು. ನಮ್ಮ ಬಳಿ ಮೂರು ಸೀಟು ಮಾತ್ರ ಇತ್ತು. ಅವರಿಗೂ ಮೂರು ಸೀಟು ಅವಶ್ಯಕತೆ ಇತ್ತು. ಮುಂದೆ ಸರ್ಕಾರ ರಚನೆಯಾದಾಗ ಅಂದಿನ ದಿನದಲ್ಲಿ ನಮ್ಮ ನಿರ್ಧಾರ ಪ್ರಕಟ ಮಾಡ್ತೀವಿ. ಕುಮಾರಸ್ವಾಮಿ ಅವರು ಕೊಟ್ಟ ಪಂಚರತ್ನ ಯೋಜನೆ ಜನರ ಮುಂದೆ ಇಡ್ತೀವಿ. ಜನ ತೀರ್ಮಾನ ಮಾಡ್ತಾರೆ ಎಂದರು.

ಬಿಜೆಪಿ ಬೆಳವಣಿಗೆ ಬಗ್ಗೆ ಹೇಳಿದ್ದು ಹೀಗೆ.. ಮಾಧ್ಯಮದವರು ಹೆಚ್​ ಡಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕರಾಗ್ತಾರೆ ಅಂತಾ ಬರೆದಿದ್ದೀರಿ. ಎಲ್ಲಿ ಆಗ್ತಾರೆ ಅವರು, ಸಿ ಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು, ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಪಕ್ಷ ನಾಯಕ ಆಗಬೇಕು ಅನ್ನುವ ಕುರಿತು ನಿನ್ನೆ ಒಂದು ಹಂತದ ಸಭೆ ಆಗಿದೆ ಎಂದು ದೇವೇಗೌಡರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಶಾಸಕರು ದೂರು ನೀಡಿದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

Last Updated : Jul 25, 2023, 3:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.