ETV Bharat / state

ಒಲಿಂಪಿಕ್ಸ್​ಗಾಗಿ ಸರ್ಕಾರದಿಂದ ಐವರು ರಾಷ್ಟ್ರೀಯ ಸ್ಕೇಟರ್​ಗಳ ದತ್ತು ಪಡೆದು ನೆರವು: ಸಿಎಂ ಬೊಮ್ಮಾಯಿ

author img

By

Published : Dec 12, 2022, 7:18 AM IST

ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ನಮ್ಮ ಸರ್ಕಾರ ಐದು ರಾಷ್ಟ್ರೀಯ ಸ್ಕೇಟರ್​​ಗಳನ್ನು ದತ್ತು ಪಡೆದು ಪ್ಯಾರಿಸ್ ಒಲಿಂಪಿಕ್ಸ್​ವರೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದು ಮುಖ್ಯವಾಗಿದೆ. ಅದಕ್ಕಾಗಿ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಬೆಂಗಳೂರು: ಗ್ರಾಮೀಣ ಮಟ್ಟಕ್ಕೂ ಸ್ಕೇಟಿಂಗ್ ವಿಸ್ತರಿಸಲಾಗಿದ್ದು, ಇನ್ನಷ್ಟು ಉತ್ತಮ ಸ್ಕೇಟಿಂಗ್ ಪ್ರತಿಭೆಗಳು ಹೊರ ಬರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವನಗುಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿದ್ಯಾಪೀಠ ವಾರ್ಡ್ 164 ಸಿಟಿ ಬೆಡ್​​ನಲ್ಲಿ ನಿರ್ಮಿಸಿರುವ ಕ್ರೀಡಾ ಸಂಕೀರ್ಣ ಹಾಗೂ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್​​ಶಿಪ್ 2022 ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಅವರು ಮಾತನಾಡಿದರು.

ಕ್ರೀಡಾ ಸಂಕೀರ್ಣ ಹಾಗೂ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್​​ಶಿಪ್ ಉದ್ಘಾಟನೆ
ಕ್ರೀಡಾ ಸಂಕೀರ್ಣ ಹಾಗೂ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್​​ಶಿಪ್ ಉದ್ಘಾಟನೆ

ಕ್ರೀಡೆಗೆ ಉತ್ಸಾಹ ಬಹಳ ಮುಖ್ಯ.‌ ಅದಕ್ಕಾಗಿಯೇ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಮೊದಲು ಖೇಲೋ ಇಂಡಿಯಾ, ಫಿಟ್ ಇಂಡಿಯಾ ನಂತರ ಜೀತೋ ಇಂಡಿಯಾ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.

ಕ್ರೀಡಾ ಸಂಕೀರ್ಣ ಹಾಗೂ 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್  ಚಾಂಪಿಯನ್​​ಶಿಪ್ ಉದ್ಘಾಟನೆ
ಕ್ರೀಡಾ ಸಂಕೀರ್ಣ, 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್​​ಶಿಪ್ ಉದ್ಘಾಟನೆ
ಸ್ಕೇಟಿಂಗ್
ಸ್ಕೇಟಿಂಗ್

ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಎಲ್ಲಾ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಇದೆ. ಈ ಸ್ಕೇಟಿಂಗ್ ಕ್ರೀಡಾಂಗಣ ದೇಶ ಹಾಗೂ ವಿಶ್ವದಲ್ಲಿಯೇ ಅತ್ಯಂತ ಉತ್ತಮ ಕ್ರೀಡಾಂಗಣವಾಗಿದೆ. ನಮ್ಮ ಸರ್ಕಾರ ಐದು ರಾಷ್ಟ್ರೀಯ ಸ್ಕೇಟರ್​​ಗಳನ್ನು ದತ್ತು ಪಡೆದು ಪ್ಯಾರಿಸ್ ಒಲಿಂಪಿಕ್ಸ್​ವರೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವುದು ಮುಖ್ಯವಾಗಿದೆ. ಅದಕ್ಕಾಗಿ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ಸಿಎಂ ಅಭಯ ನೀಡಿದರು.

ಸಚಿವ ಆರ್.ಅಶೋಕ್, ಶಾಸಕ ರವಿಸುಬ್ರಹ್ಮಣ್ಯಂ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

(ಓದಿ: ಜಾಗೃತಿಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ )

ETV Bharat Logo

Copyright © 2024 Ushodaya Enterprises Pvt. Ltd., All Rights Reserved.